ಬೀದರ
ಕಲ್ಯಾಣ ನಾಡಿನ ಕಲ್ಯಾಣ ಕಾಣದೆ ಕಣ್ಮರೆಯಾದ ಜನ ನಾಯಕ
ಕಲ್ಯಾಣ ನಾಡಿನ ಕಲ್ಯಾಣ ಕಾಣದೆ ಕಣ್ಮರೆಯಾದ ಜನ ನಾಯಕ ವಿಶೇಷ ವರದಿ : ದುರ್ಯೋಧನ ಹೂಗಾರ ಬೀದರ: ಬಸವಕಲ್ಯಾಣ ಕ್ಷೇತ್ರದ ಜನಪ್ರಿಯ ಶಾಸಕ, ಜನಪರ ಕಾಳಜಿಯುಳ್ಳ ಬಿ.ನಾರಾಯಣರಾವ್ ಕೊರೊನಾ ಸೋಂಕಿನಿಂದ ಗುರುವಾರ ಸಂಜೆ ನಿಧನರಾಗಿದ್ದು, ಕಲ್ಯಾಣ ಕ್ಷೇತ್ರದಲ್ಲಿ ಮೌನ ಆವರಿಸಿದೆ. ಬೀದರ ತಾಲೂಕಿನ ಬಸಂತಪುರ ಗ್ರಾಮದ ಬಿ. ನಾರಾಯಣರಾವ್ ಅವರು ಕಾಂಗ್ರೆಸ್ನ ನಿಷ್ಠಾವಂತ ಕಾರ್ಯಕರ್ತರೆಂದೇ ಗುರುತಿಸಿಕೊಂಡಿದ್ದರು. ಕಾಲೇಜು ದಿನಗಳಿಂದಲೇ ನಾಯಕತ್ವ ಗುಣಗಳನ್ನು ಹೊಂದಿದ್ದ ಅವರು ಹೋರಾಟಗಳ ಮೂಲಕವೇ ಜಿಲ್ಲೆಯಲ್ಲಿ ಹೆಸರು ಮಾಡಿದವರು.…
Read More »ಶಾಸಕ ಬಿ.ನಾರಾಯಣ ಇನಿಲ್ಲ.
ಶಾಸಕ ಬಿ.ನಾರಾಯಣ ಇನಿಲ್ಲ. ಬೀದರ: ಕೋವಿಡ್- 19 ಸೋಂಕಿನಿಂದ ಬಳಲುತ್ತಿದ್ದ ಬಸವಕಲ್ಯಾಣ ಕ್ಷೇತ್ರದ ಶಾಸಕ ಬಿ.ನಾರಾಯಣರಾವ್ ಗುರುವಾರ ಸಂಜೆ ಚಿಕಿತ್ಸೆ ಫಲಿಸದೆ ನಿಧನರಾಗಿದ್ದಾರೆ. ಕೊರೊನಾ ಸೋಂಕು ಪಾಸಿಟಿವ್ ಹಿನ್ನೆಲೆಯಲ್ಲಿ ಕಳೆದ ಒಂದು ತಿಂಗಳಿಂದ ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಒಳಗಾಗಿದ್ದು, ಬಹು ಅಂಗಾಂಗ ವೈಫಲ್ಯದಿಂದ ಚಿಕಿತ್ಸೆ ಫಲಕಾರಿಯಾಗ ಹಿನ್ನೆಲೆಯಲ್ಲಿ ನಿಧನರಾಗಿದ್ದಾರೆ ಎಂದು ಮೂಲಗಳು ಮಾಹಿತಿ ನೀಡಿವೆ.
Read More »ದೇವರ ಹುಂಡಿಗೆ ಕನ್ನ ಹಾಕಿದ ಕಳ್ಳರು.
ದೇವರ ಹುಂಡಿಗೆ ಕನ್ನ ಹಾಕಿದ ಕಳ್ಳರು. ಬೀದರ: ಚಿಟಗುಪ್ಪ ತಾಲ್ಲೂಕಿನ ಸುಕ್ಷೇತ್ರ ರಾಮಪುರ ಗ್ರಾಮದ ಶ್ರೀ ರಾಮಲಿಂಗೇಶ್ವರ ದೇಗುಲದಲ್ಲಿ ಬುಧವಾರ ರಾತ್ರಿ ದೇವರ ಹುಂಡಿಗೆ ಕಳ್ಳರು ಕನ್ನ ಹಾಕಿದ ಘಟನೆ ಸಂಭವಿಸಿದೆ. ಒಂದು ಹುಂಡಿ ದೇವಸ್ಥಾನದ ಸ್ಥಳದಲ್ಲಿಯೇ ಒಡೆದಿದ್ದು, ಇನ್ನೋಂದು ಹುಂಡಿಯನ್ನು ದೇವಾಲಯದ ಆವರಣ ಆಚೆಗೆ ಹುಂಡಿಯನ್ನು ಹೊತ್ತೊಯ್ಯದು ಹಣ ದೋಚಿದ್ದಾರೆ. ಘಟನೆಯ ಮಾಹಿತಿ ಪಡೆದ ಚಿಟಗುಪ್ಪ ಪೊಲೀಸರು ಸ್ಥಳಕ್ಕೆ ಭೇಟಿನೀಡಿ ಪರಿಶೀಲನೆ ನಡೆಸಿದ್ದಾರೆ. ಅಲ್ಲದೆ, ಸ್ಥಳಕ್ಕೆ ಜಿಲ್ಲಾ ಶ್ವಾನದಳ,…
Read More »ಬಿ.ನಾರಾಯಣರಾವ ಬೇಗ ಗುಣಮುಖರಾಗಲಿ : ಈಶ್ವರ ಖಂಡ್ರೆ
ಬಿ.ನಾರಾಯಣರಾವ ಬೇಗ ಗುಣಮುಖರಾಗಲಿ : ಈಶ್ವರ ಖಂಡ್ರೆ ಬೀದರ: ಬಸವಕಲ್ಯಾಣ ಶಾಸಕ ಬಿ.ನಾರಾಯಣರಾವ ಅವರ ಆರೋಗ್ಯ ಸ್ಥಿತಿ ತೀವ್ರ ಚಿಂತಾಜನಕವಾಗಿದೆ ಎಂಬ ಸುದ್ದಿ ತಿಳಿದ ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ವಿಡಿಯೋ ಕಾಲ್ ಮೂಲಕ ವೈದ್ಯರನ್ನು ಸಂಪರ್ಕಿಸಿ ಮಾಹಿತಿ ಪಡೆದಿದ್ದಾರೆ. ಕರೊನಾ ಸೋಂಕು ತಗುಲಿದ ಹಿನ್ನೆಲೆಯಲ್ಲಿ ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಗೆ ದಾಖಲಾಗಿದ ಶಾಸಕರು, ಕಳೆದ ರಾತ್ರಿಯಿಂದ ದಿಢೀರ್ ಆರೋಗ್ಯ ಸಮಸ್ಯೆ ಹೆಚ್ಚಾಗಿರುವ ಬಗ್ಗೆ ಮಾಹಿತಿ ಪಡೆದಿದ್ದಾರೆ. ಚಿಕಿತ್ಸೆ ನೀಡುತ್ತಿರುವ ಆಸ್ಪತ್ರೆಯ…
Read More »ಬಸವಕಲ್ಯಾಣ ಶಾಸಕ ನಾರಾಯಣರಾವ ಸ್ಥಿತಿ ಚಿಂತಾಜನಕ
ಬಸವಕಲ್ಯಾಣ ಶಾಸಕ ನಾರಾಯಣರಾವ ಸ್ಥಿತಿ ಚಿಂತಾಜನಕ ಬೀದರ: ಬಸವಕಲ್ಯಾಣ ಶಾಸಕರಾದ ಬಿ.ನಾರಾಯಣರಾವ ಅವರ ಆರೋಗ್ಯ ಸ್ಥಿತಿ ತೀವ್ರ ಚಿಂತಾಜನಕವಾಗಿದೆ. ಕರೊನಾ ಸೋಂಕು ತಗುಲಿದ ಹಿನ್ನೆಲೆಯಲ್ಲಿ ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಗೆ ದಾಖಲಾಗಿದ ಶಾಸಕರು, ಕಳೆದ ರಾತ್ರಿಯಿಂದ ದಿಢೀರ್ ಆರೋಗ್ಯ ಸಮಸ್ಯೆ ಹೆಚ್ಚಾಗಿದೆ. ಅಲ್ಲದೆ, ಶಾಸಕರಿಗೆ ಕೃತಕ ಉಸಿರಾಟ (ವೆಂಟಿಲೇಟರ್) ವ್ಯವಸ್ಥೆ ಮಾಡಲಾಗಿದ್ದು, ಚಿಕಿತ್ಸೆಗೂ ಸೂಕ್ತವಾಗಿ ಸ್ಪಂದಿಸದ ಕಾರಣ ಸ್ಥಿತಿ ಗಂಭೀರವಾಗಿದೆ ಎಂದು ಮೂಲಗಳು ತಿಳಿಸಿವೆ. ಬೇಗ ಗುಣಮುಖರಾಗಲಿ: ಶಾಸಕ ಬಿ.ನಾರಾಯಣರಾವ ಅವರು…
Read More »ನಾಡು-ನುಡಿಗಾಗಿ ಹೋರಾಟ : ನವೀನ ಬತಲಿ
ನಾಡು-ನುಡಿಗಾಗಿ ಹೋರಾಟ : ನವೀನ ಬತಲಿ ಬೀದರ: ಜಯಕರ್ನಾಟಕ ಸಂಘಟನೆಯ ವಲಯ ಕಾರ್ಯದರ್ಶಿ ನವೀನ ಬತಲಿ ಅವರ 30ನೇ ಜನ್ಮ ದಿನ ನಿಮಿತ್ಯ ಬೀದರ ಜಿಲ್ಲೆಯ ವಿವಿಧ ಗ್ರಾಮಗಳಲ್ಲಿ ಜನ್ಮದಿನಾಚರಣೆ ಆಚರಿಸಲಾಯಿತು. ಬತಲಿ ಅಭಿಮಾನಿಗಳು ಹಾಗೂ ಸಂಘಟನೆಯ ಸದಸ್ಯರು ಆಯಾ ಗ್ರಾಮಗಳಲ್ಲಿ ಕೇಕ್ ಕತ್ತರಿಸುವ ಮೂಲಕ ಜನ್ಮದಿನಾಚರಣೆ ಆಚರಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ನವೀನ ಬತಲಿ, ಕೊರೊನಾ ಸೋಂಕು ಎಲ್ಲಡೆ ಹರಡುತ್ತಿದ್ದು, ಜನ್ಮ ದಿನ ಹಿನ್ನೆಲೆಯಲ್ಲಿ ಸಾವಿರಾರು ಜನರು…
Read More »ಅಬಕಾರಿ ಅಧಿಕಾರಿಗಳಿಂದ ಎರೆಡು ಗಾಂಜ್ ಕೇಸ್.
9ಅಬಕಾರಿ ಅಧಿಕಾರಿಗಳಿಂದ ಎರೆಡು ಗಾಂಜ್ ಕೇಸ್. ಬೀದರ: ನೆರೆ ಜಿಲ್ಲೆ ಕಲಬುರಗಿ ಸೇರಿದಂತೆ ರಾಜ್ಯದ ವಿವಿಧಡೆ ಭಾರಿ ಪ್ರಮಾಣದಲ್ಲಿ ಗಾಂಜಾ ಪತ್ತೆಯಾಗುತ್ತಿರುವ ಹಿನ್ನೆಲೆಯಲ್ಲಿ ಗಡಿ ಜಿಲ್ಲೆಯಲ್ಲಿ ಕೂಡ ಪೊಲೀಸ್ ಅಧಿಕಾರಿಗಳು ಹಾಗೂ ಅಬಕಾರಿ ಅಧಿಕಾರಿಗಳು ವಿವಿಧಡೆ ಕಾರ್ಯಚರಣೆ ಶುರುಮಾಡಿದ್ದಾರೆ. ಹುಮನಾಬಾದ ತಾಲೂಕಿನ ಜಲಸಂಗಿ ಗ್ರಾಮದ ಮಹೇಬೂಬ್ ಎಂಬ ವ್ಯಕ್ತಿಯ ಹೊಲದಲ್ಲಿ ಕಬ್ಬಿನ ಮಧ್ಯೆ ಗಾಂಜಾ ಗಿಡ ಬೆಳೆಸಿದ ಖಚಿತ ಮಾಹಿತಿ ಹಿನ್ನೆಲೆಯಲ್ಲಿ ಅಬಕಾರಿ ಡಿಸಿ ಮಂಜುನಾಥ ನೇತೃತ್ವದಲ್ಲಿ ದಾಳಿ ನಡೆಸಿದ್ದು,…
Read More »ವಿದ್ಯಾರ್ಥಿಗಳ ಅನುಕೂಲಕ್ಕಾಗಿ ನಾಗರಿಕ ಸೇವೆಗಳ ಪರೀಕ್ಷೆ ಅರಿವು ಕಾರ್ಯಕ್ರಮ: ರಾಮಚಂದ್ರನ್ ಆರ್
ವಿದ್ಯಾರ್ಥಿಗಳ ಅನುಕೂಲಕ್ಕಾಗಿ ನಾಗರಿಕ ಸೇವೆಗಳ ಪರೀಕ್ಷೆ ಅರಿವು ಕಾರ್ಯಕ್ರಮ: ರಾಮಚಂದ್ರನ್ ಆರ್ ಬೀದರ: ಬೀದರ ಜಿಲ್ಲೆನಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಮತ್ತು ಜಿಲ್ಲಾ ಪೊಲೀಸ್ ಇಲಾಖೆ ವತಿಯಿಂದ ಜಂಟಿಯಾಗಿ ನಾಗರಿಕ ಸೇವೆಗಳಿಗೆ ಸಂಬಂಧಿಸಿದ ಪರೀಕ್ಷೆಗಳ ಕುರಿತು ಅರಿವು ಮೂಡಿಸುವ ವಿನೂತನ ಕಾರ್ಯಕ್ರಮವನ್ನು ಆಯೋಜಿಸಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ರಾಮಚಂದ್ರನ್ ಆರ್ ಅವರು ತಿಳಿಸಿದರು. ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಸೆ.15ರಂದು ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ರಾಜ್ಯದ ಗಡಿಜಿಲ್ಲೆಯಾದ ಬೀದರ್ನಲ್ಲಿ ಶಿಕ್ಷಣ ಪಡೆಯುತ್ತಿರುವ ವಿದ್ಯಾರ್ಥಿಗಳಿಗೆ…
Read More »ಗಾಂಜಾ ಸಾಗಾಟ, ಮಾರಾಟ ಮತ್ತು ಸೇವನೆ ಮಾಡುವವರ ವಿರುದ್ಧ ಕಠಿಣ ಕ್ರಮ : ಬೀದರ ಎಸ್.ಪಿ
ಗಾಂಜಾ ಸಾಗಾಟ, ಮಾರಾಟ ಮತ್ತು ಸೇವನೆ ಮಾಡುವವರ ವಿರುದ್ಧ ಕಠಿಣ ಕ್ರಮ : ಬೀದರ ಎಸ್.ಪಿ ಬೀದರ: ಜಿಲ್ಲೆಯ ವ್ಯಾಪ್ತಿಯಲ್ಲಿ ಗಾಂಜಾ ಸಾಗಾಟ, ಮಾರಾಟ ಹಾಗೂ ಸೇವನೆ ಮಾಡುವವರನ್ನು ಪತ್ತೆಹಚ್ಚಿ ನಿರ್ದಾಕ್ಷಿಣ್ಯ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಬೀದರ ಪೊಲೀಸ್ ವರಿಷ್ಠಾಧಿಕಾರಿ ನಾಗೇಶ್ ಡಿ.ಎಲ್ ಹೇಳಿದ್ದಾರೆ. ಈ ಕುರಿತು ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ಅಕ್ರಮ ಚಟುವಟಿಕೆಗಳಿಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಪೊಲೀಸ್ ಇಲಾಖೆ ಕೆಲಸ ಮಾಡುತ್ತಿದ್ದು, ಗಾಂಜಾ ಬೆಳೆಸುವುದು,…
Read More »ಹುಮನಾಬಾದ ಡಿವೈಎಸ್ಪಿಯಾಗಿ ಸೋಮಲಿಂಗ ಬಿ ಕುಂಬಾರ ಅಧಿಕಾರ ಸ್ವೀಕಾರ.
ಹುಮನಾಬಾದ ಡಿವೈಎಸ್ಪಿಯಾಗಿ ಸೋಮಲಿಂಗ ಬಿ ಕುಂಬಾರ ಅಧಿಕಾರ ಸ್ವೀಕಾರ. ಹುಮನಾಬಾದ: ಹುಮನಾಬಾದ ಉಪ ವಿಭಾಗದ ಡಿವೈಎಸ್ಪಿ ಆಗಿ ಸೋಮಲಿಂಗ ಬಿ ಕುಂಬಾರ ಮಂಗಳವಾರ ಸಂಜೆ ಅಧಿಕಾರ ಸ್ವೀಕರಿಸಿದರು. ಈ ಹಿಂದೆ ಹಾವೇರಿ ಜಿಲ್ಲೆಯಲ್ಲಿ ಎಸಿಬಿ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿದ ಇವರು ಇದೀಗ ಹುಮನಾಬಾದ ಉಪಾಧೀಕ್ಷಕರಾಗಿ ಅಧಿಕಾರ ಸ್ವೀಕರಿಸಿದ್ದಾರೆ. https://play.google.com/store/apps/details?id=kknewsonline.in ಮೂಲತಃ ಬಿಜಾಪುರ ಜಿಲ್ಲೆಯವರಾಗಿದ್ದು, ಮೊದಲಿಗೆ ದೇಶದ ಗಡಿ ಕಾಯುವ ಸೈನಿಕರಾಗಿ ಸೇವೆ ಆರಂಭಿಸಿದ ಇವರು, ಕಾರ್ಗಿಲ್ ಯುದ್ಧದಲ್ಲಿ ಕೂಡ ಭಾಗವಹಿಸಿ…
Read More »

















