Home ನಿಮ್ಮ ಜಿಲ್ಲೆ ಬೀದರ ಹುಮನಾಬಾದ ಎಪಿಎಂಸಿಯಲ್ಲಿ ಹೇಳೋರಿಲ್ಲ ಕೇಳೋರಿಲ್ಲ..!

ಹುಮನಾಬಾದ ಎಪಿಎಂಸಿಯಲ್ಲಿ ಹೇಳೋರಿಲ್ಲ ಕೇಳೋರಿಲ್ಲ..!

ಹುಮನಾಬಾದ ಎಪಿಎಂಸಿಯಲ್ಲಿ ಹೇಳೋರಿಲ್ಲ ಕೇಳೋರಿಲ್ಲ..!

ಹುಮನಾಬಾದ: ಪಟ್ಟಣದ ಎಪಿಎಂಸಿಯಲ್ಲಿ ಅವ್ಯವಸ್ಥೆಯ ಆಗರವಾಗಿ ಪರಿಣಮಿಸಿದೆ. ಮೂಲಭೂತ ಸೌಕರ್ಯಗಳ ಕೊರತೆ ಸೇರಿದಂತೆ ಅನೇಕ ಅವ್ಯವಸ್ಥೆಗಳು ಇಲ್ಲಿ ಎದ್ದು ಕಾಣುತ್ತಿವೆ.

2022ರ ಫೆಬ್ರುವರಿ ತಿಂಗಳಲ್ಲಿ ಚುನಾಯಿತ ಆಡಳಿತ ಮಂಡಳಿ ಅವಧಿ ಮುಗಿದ ಹಿನ್ನೆಲೆಯಲ್ಲಿ ಸದ್ಯ ಸಮಿತಿಗೆ ಯಾವುದೇ ಆಡಳಿತ ಮಂಡಳಿ ಇಲ್ಲ. ಆದರೆ ಸಧ್ಯಕ್ಕೆ ಎಪಿಎಂಸಿ ಬೀದರ ಅಧಿಕಾರಿಯೆ ಆಡಳಿತ ಅಧಿಕಾರಿಯಾಗಿ ನೇಮಕಗೊಂಡಿದ್ದು, ಇಲ್ಲಿನ ಕಚೇರಿಗೆ ಖಾಯಂ ಕಾರ್ಯದರ್ಶಿ ಕೂಡ ಇಲ್ಲ. ಪ್ರಭಾರಿ ಕಾರ್ಯದರ್ಶಿಯೊಬ್ಬರು ಕರ್ತವ್ಯ ನಿರ್ವಹಿಸುತ್ತಿದ್ದು, ಇತರೆ ಎರಡು-ಮೂರು ತಾಲೂಕುಗಳ ಕಚೇರಿಗೆ ಇವರೆ ಕಾರ್ಯದರ್ಶಿಯಾಗಿರು ಕಾರಣಕ್ಕೆ ಇಲ್ಲಿನ ಕಚೇರಿಗೆ ಬರುವ ದಿನಗಳು ಮಾತ್ರ ನಿಗದಿ ಇಲ್ಲ.

ಇಲ್ಲಿನ ಎಪಿಎಂಸಿ ಕಚೇರಿ ಅಡಿಯಲ್ಲಿ ಹುಮನಾಬಾದ ತಾಲೂಕು ಹಾಗೂ ಚಿಟಗುಪ್ಪ ತಾಲೂಕಿನ ಎಪಿಎಂಸಿ ಕೂಡ ಬರುತ್ತದೆ. ಎರೆಡು ತಾಲೂಕಿನ ಪ್ರಾಂಗಣದಲ್ಲಿ ನಡೆಯುತ್ತಿರುವ ಕಾರ್ಯ ಚಟುವಟಿಕೆಗಳ ಮೇಲೆ ನಿಗಾ ವಹಿಸಲ್ಲು ಪಟ್ಟಣದಲ್ಲಿ ಯಾರೊಬ್ಬ ಅಧಿಕಾರಿಗಳು ಇರುವುದಿಲ್ಲ ಎಂಬುವುದೇ ಮುಖ್ಯವಾಗಿದೆ. ವರ್ತಕರು ನಡೆಸುತ್ತಿರುವ ವ್ಯವಹಾರದ ಮೇಲೆ ಇಲ್ಲಿನ ಅಧಿಕಾರಿಗಳು ನಿಯಂತ್ರ ಸಾಧಿಸುವಲ್ಲಿ ವಿಫಲರಾಗಿದ್ದಾರೆ. ಅಲ್ಲದೆ, ಕಳೆದ ಕೆಲ ತಿಂಗಳಿಂದ ಇಲ್ಲಿನ ಎಪಿಎಂಸಿ ಆಡಳಿತದ ವಿರುದ್ದ ಅನೇಕ ಆರೋಪಗಳು ಕೂಡ ಕೇಳಿಬರುತ್ತಿವೆ. ಕೆಲವರು ಬೆಂಗಳೂರಿನ ಕಚೇರಿಗೆ ದೂರುಗಳು ನೀಡಿದ ಬಗ್ಗೆ ಮಾಹಿತಿ ತಿಳಿದುಬಂದಿದೆ.

ಬಾಡಿಗೆ ಯಾರಿಗೆ?: ಹುಮನಾಬಾದ ಎಪಿಎಂಸಿ ಪ್ರಾಂಗಣದಲ್ಲಿನ ಕೆಲ ಚಿಕ್ಕ ಮಳಿಗೆಗಳ ಬಾಡಿಗೆ ಎಪಿಎಂಸಿ ಕಚೇರಿಗೆ ಸೇರುತ್ತಿಲ್ಲ ಎಂಬ ಆರೋಪಗಳು ಕೂಡ ಇವೆ. ಕೆಲವರು ಚಿಕ್ಕ ಮಳಿಗೆಗಳು ಸಮಿತಿಯ ಪರವಾನಗಿ ಪಡೆಯದೆ ಅಂಗಡಿ ಪರಿವರ್ತನೆಮಾಡಿಕೊಂಡರು ಕೂಡ ಯಾವ ಅಧಿಕಾರಿಗಳು ಕೇಳೊರು ಇಲ್ಲ ಎಂದು ವರ್ತಕರು ದೂರುತ್ತಿದ್ದಾರೆ. ಅನೇಕರು ಸಮಿತಿ ನಿಯಮಗಳು ಗಾಳಿಗೆ ತೋರುತ್ತಿದ್ದರೂ ಕೂಡ ಅಧಿಕಾರಿಗಳ ಮಾತ್ರ ಮೌನ ವಹಿಸಿದ್ದಾರೆ ಅನೇಕ ಅನುಮಾನಕ್ಕೆ ಎಡೆ ಮಾಡಿಕೊಡುತ್ತಿದೆ. ಈ ಕುರಿತು ಪ್ರತಿಕ್ರಿಯೆ ನೀಡಿದ ಎಪಿಎಂಸಿ ಕಾರ್ಯದರ್ಶಿ ಅನಿಲಕುಮಾರ ಹಾದಿಮನಿ, ಚಿಕ್ಕ ಮಳಿಗೆಗಳ ಕುರಿತು ಪರಿಶೀಲನೆ ನಡೆಸುವುದಾಗಿ ತಿಳಿಸಿದ್ದಾರೆ.

Date:06-07-2022 : www.kknewsonline.in

( ಭಾಗ-2 ಮುಂದುವರಿಯುತ್ತದೆ) 

Check Also

ಹೂಗಾರ ಸಮಾಜ ಸಂಘಟನೆ: ಅಶೋಕ ಹೂಗಾರ ವಾರಕಾಲ ಸಂಚಾರ

ಬೀದರ: ಬೀದರ‌ ಜಿಲ್ಲೆಯಲ್ಲಿ ಹೂಗಾರ ಸಮಾಜವನ್ನು ಸಂಘಟಿಸುವ ನಿಟ್ಟಿನಲ್ಲಿ ಅಖಿಲ ಕರ್ನಾಟಕ ಹೂಗಾರ ಸೇವಾ ಮಾಹಾ …