Home ಸುದ್ದಿಗಳು ರಾಜ್ಯ ಸುದ್ದಿ ಸೋಂಕಿತ ಜನರ ಸಂಪರ್ಕದಲ್ಲಿದ್ದ ವ್ಯಕ್ತಿಗಳ ಪತ್ತೆಗೆ 9 ಅಧಿಕಾರಿಗಳ ತಂಡ.

ಸೋಂಕಿತ ಜನರ ಸಂಪರ್ಕದಲ್ಲಿದ್ದ ವ್ಯಕ್ತಿಗಳ ಪತ್ತೆಗೆ 9 ಅಧಿಕಾರಿಗಳ ತಂಡ.

ಬೀದರ: ಬೀದರ ಜಿಲ್ಲೆಯ 11 ಕೊರೊನಾ ಸೋಂಕಿತರ ಸಂಪರ್ಕದಲ್ಲಿದ್ದ ವ್ಯಕ್ತಿಗಳ ಹುಡುಕಾಟಕ್ಕೆ, ಆರೋಗ್ಯ ತಪಾಸಣೆಗೆ 9 ಅಧಿಕಾರಿಗಳ ತಂಡ ರಚಿಸಲಾಗಿದೆ ಎಂದು ಜಿಲ್ಲಾಧಿಕಾರಿ ಡಾ। ಎಚ್.ಆರ್ ಮಹಾದೇವ ತಿಳಿಸಿದ್ದಾರೆ.

11 ಜನರ ಸಂಪರ್ಕದಲ್ಲಿದ ಪ್ರಾಥಮಿಕ ಹಂತದಲ್ಲಿ 68 ಜನರನ್ನು ಗುರುತಿಸಲಾಗಿದ್ದು ಇನ್ನೂ 20 ಜನರು ಹುಡುಕಾಟ ನಡೆದಿದೆ. ಇದಕ್ಕಾಗಿ ಅಧಿಕಾರಿಗಳ ತಂಡ ರಚಿಸಲಾಗಿದ್ದು ಎಲ್ಲಾ ಜನರನ್ನು ಆರೋಗ್ಯ ತಪಾಸಣೆಗೆ ಒಳಪಡಿಸಲಾಗುವುದು ಎಂದು ಮಾಹಿತಿ ನೀಡಿದ್ದಾರೆ.
ದೆಹಲಿಯಿಂದ ರೈಲು ಮೂಲಕ ಹೈದರಾಬಾದ್ ತಲುಪಿದ್ದು, ಅಲ್ಲಿಂದ ಬೀದರ ನಗರಕ್ಕೆ ಬಡಿದ್ದಾರೆ. ಮಾರ್ಚ್ 18ರಂದು ಬೀದರ್ ಜಿಲ್ಲೆಗೆ ಬಂದಿದ್ದು, ಅವರು ಯಾವ ಪ್ರದೇಶದಲ್ಲಿ ಸಂಚರಿಸಿದರೆ. ಎಲ್ಲಿ ಪ್ರಾರ್ಥನೆ ಸಲ್ಲಿಸಿದ್ದಾರೆ ಎಷ್ಟು ಜನರ ಸಂಪರ್ಕ ಮಾಡಿದ್ದಾರೆ ಎಂದು ಮಾಹಿತಿ ಕಲೆ ಹಾಕಲಾಗುತ್ತಿದೆ. ಮುಂದಿನ ಎರೆಡು ದಿನಗಳಲ್ಲಿ ಈ ಕಾರ್ಯ ಆಗಲ್ಲಿದೆ ಎಂದು ತಿಳಿಸಿದ್ದಾರೆ.
ಬಸವಕಲ್ಯಾಣ, ಮನ್ನಾಏಖೇಳಿ ಹಾಗೂ ಬೀದರ ಹಳೆ ಭಾಗದಲ್ಲಿ ಸಂಪೂರ್ಣ ಬಂದ್ ಮಾಡಲಾಗಿದೆ. 3 ಕಿ.ಮೀ ವ್ಯಾಪ್ತಿಯಲ್ಲಿನ ಜನರ ಆರೋಗ್ಯ ತಪಾಸಣೆಗೆ ಆಶಾ ಕಾರ್ಯಕರ್ತೆಯರು, ಅಂಗನವಾಡಿ ಸಿಬ್ಬಂದಿಗಳು ಬಳಸಿಕೊಂಡ ಯಾವ ಮನೆಯಲ್ಲಿನ ಜನರ ಆರೋಗ್ಯ ಸಮಸ್ಸೆ ಇದೆ ಎಂದು ಪತ್ತೆ ಹಚ್ಚಲಾಗುವುದು ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ .

 

Date: 02-04-2020

Check Also

ಎಲ್ಲ ಗ್ರಾಮ, ತಾಂಡಾಗಳಿಗೆ ಸ್ಮಶಾನಭೂಮಿ ಒದಗಿಸಿ: ಶಾಸಕ ಪ್ರಭು ಚವ್ಹಾಣ

*ಸ್ಮಶಾನ ಭೂಮಿ ಕೊರತೆಯ ಬಗ್ಗೆ ಅಧಿವೇಶನದಲ್ಲಿ ಧ್ವನಿ ಎತ್ತಿದ ಶಾಸಕರು* *ಎಲ್ಲ ಗ್ರಾಮ, ತಾಂಡಾಗಳಿಗೆ ಸ್ಮಶಾನ…