ಕಲ್ಯಾಣ ನಾಡಿನ ಕಲ್ಯಾಣ ಕಾಣದೆ ಕಣ್ಮರೆಯಾದ ಜನ ನಾಯಕ
ಕಲ್ಯಾಣ ನಾಡಿನ ಕಲ್ಯಾಣ ಕಾಣದೆ ಕಣ್ಮರೆಯಾದ ಜನ ನಾಯಕ
ವಿಶೇಷ ವರದಿ : ದುರ್ಯೋಧನ ಹೂಗಾರ
ಬೀದರ: ಬಸವಕಲ್ಯಾಣ ಕ್ಷೇತ್ರದ ಜನಪ್ರಿಯ ಶಾಸಕ, ಜನಪರ ಕಾಳಜಿಯುಳ್ಳ ಬಿ.ನಾರಾಯಣರಾವ್ ಕೊರೊನಾ ಸೋಂಕಿನಿಂದ ಗುರುವಾರ ಸಂಜೆ ನಿಧನರಾಗಿದ್ದು, ಕಲ್ಯಾಣ ಕ್ಷೇತ್ರದಲ್ಲಿ ಮೌನ ಆವರಿಸಿದೆ.
ಬೀದರ ತಾಲೂಕಿನ ಬಸಂತಪುರ ಗ್ರಾಮದ ಬಿ. ನಾರಾಯಣರಾವ್ ಅವರು ಕಾಂಗ್ರೆಸ್ನ ನಿಷ್ಠಾವಂತ ಕಾರ್ಯಕರ್ತರೆಂದೇ ಗುರುತಿಸಿಕೊಂಡಿದ್ದರು. ಕಾಲೇಜು ದಿನಗಳಿಂದಲೇ ನಾಯಕತ್ವ ಗುಣಗಳನ್ನು ಹೊಂದಿದ್ದ ಅವರು ಹೋರಾಟಗಳ ಮೂಲಕವೇ ಜಿಲ್ಲೆಯಲ್ಲಿ ಹೆಸರು ಮಾಡಿದವರು. ಜಯಪ್ರಕಾಶ್ ನಾರಾಯಣ್ ಹಾಗೂ ದೇವರಾಜ ಅರಸು ಅವರ ಪ್ರಭಾವದಿಂದಾಗಿ ರಾಜಕೀಯ ಪ್ರವೇಶಿಸಿದ ಬಿ.ನಾರಾಯಣರಾವ್ ಒಂದು ಬಾರಿ ಶಾಸಕರಾಗಿ ಆಯ್ಕೆ ಆಗಬೇಕು ಎಂಬ ಆಸೆಹೊಂದಿದ್ದು, ಅವರ ಆಸೆಯಂತೆ ಶಾಸಕರಾಗಿ ಆಯ್ಕೆಗೊಂಡಿದ್ದರು ಕೂಡ ಪೂರ್ಣಾವಧಿ ಶಾಸಕರಾಗಿ ಉಳಿಯದೆ ಬಾರದ ಲೋಕಕ್ಕೆ ಸೇರಿದ್ದಾರೆ.
ಈ ಮೊದಲು ಜಿಲ್ಲಾ ಪಂಚಾಯತ ಸದಸ್ಯರಾಗಿ ಆಯ್ಕೆಯಾಗಿದ್ದ ಇವರು ರಾಜ್ಯ ಸಾಕ್ಷರತಾ ಮಿಷನ್ ಪ್ರಾಧಿಕಾರದ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ್ದಾರೆ. ಕೆಪಿಸಿಸಿ ಕಾರ್ಯದರ್ಶಿ ಸೇರಿದಂತೆ ಪಕ್ಷದ ವಿವಿಧ ಹುದ್ದೆಗಳನ್ನು ಸಮರ್ಥವಾಗಿ ನಿಭಾಯಿಸಿದ ಬಿ.ನಾರಾಯಣರಾವ್ ಅವರು, ನಾಲ್ಕು ದಶಕಗಳ ಹೋರಾಟದ ಫಲವಾಗಿ ಕಳೆದ ವಿಧಾನ ಸಭೆಚುನಾವಣೆಯಲ್ಲಿ ಬಸವಕಲ್ಯಾಣ ಕ್ಷೇತ್ರ ಶಾದಸಕರಾಗಿ ಆಯ್ಕೆಯಾದ ಅವರಿಗೆ ಜೆಡಿಎಸ್- ಕಾಂಗ್ರೆಸ್ ಸಮ್ಮಿಶ್ರ ಸರಕಾರದಲ್ಲಿ ಕರ್ನಾಟಕ ಅರಣ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷ ಸ್ಥಾನ ಒಲಿದು ಒಲಿದುಬಂದಿತ್ತು.
65ವರ್ಷದ ಬಿ.ನಾರಾಯಣರಾವ ಬೀದರ್ ಹತ್ತಿರದ ಬಸವಂತಪುರ ಗ್ರಾಮದಲ್ಲಿ ಹುಟ್ಟಿದ್ದು, ಬಿಎ ಪದವೀಧರರು ಜೊತೆಗೆ ಉತ್ತಮ ವಾಕ್ ಚತುರ್ಯ ಹೊಂದಿದರು. ವಿವಿಧ ಕಾರ್ಯಕ್ರಮಗಳಲ್ಲಿ ಕಡಕ್ ಭಾಷಣಕಾರ ಎಂದು ಗುರುತಿಸಿಕೊಂಡಿದ್ದರು. 1987 ರಲ್ಲಿ ಮಾಳೇಗಾಂವ ಜಿಪಂ ಕ್ಷೇತ್ರದಿಂದ ಗೆಲುವು ಕಂಡ ಇವರು, 1989 ರಲ್ಲಿ ಕಲ್ಯಾಣದ ಕಡೆಗೆ ಮುಖಮಾಡಿದರು. 1989 ರ ವಿಧಾನಸಭೆ ಚುನಾವಣೆಯಲ್ಲಿ ಬಸವಕಲ್ಯಾಣದಿಂದ ಜನತಾ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧೆನಡೆಸಿ ಪರಾಭವಗೊಂಡಿದರು. 90ರ ದಶಕದಲ್ಲಿ ಕಾಂಗ್ರೆಸ್ ಪಕ್ಷ ಸೆರ್ಪಡೆಗೊಂಡ ನಂತರ
ಕೃಷ್ಣ ಸರ್ಕಾರದಲ್ಲಿ ರಾಜ್ಯ ಸಾಕ್ಷರತಾ ಮಿಷನ್ ಅಧ್ಯಕ್ಷರಾಗಿ ಕೆಲಸ ನಿರ್ವಹಿಸಿದ್ದಾರೆ. ಕಾಲೇಜು ದಿನಗಳಿಂದಲ್ಲೆ ವಿವಿಧ ಹೋರಾಟಗಳ ಮೂಲಕ ಜಿಲ್ಲೆಯಲ್ಲಿ ಗುರುತಿಸಿಕೊಂಡ ಹಾಗೂ ಸರಳ ಸ್ವಭಾವದ ರಾಜಕಾರಣಿ ಎಂದು ಜನಮನ ಗೆದ್ದ ನಾಯಕಾರಿದ್ದರು.
ಬಸವಣ್ಣನ ನಾಡು ಅಭಿವೃದ್ಧಿ ಪಡೆಸಬೇಕು. ಪ್ರವಾಸಿಗರನ್ನು ಕಲ್ಯಾಣ ಕೈಬಿಸಿ ಕರೆಯಬೇಕು ಎಂಬ ಸಂಕಲ್ಪ ಹೊಂದಿದ ನಾರಾಯಣರಾವ್ ಅವರ ಕನಸ್ಸು ಈಡೇರುವ ಮುನ್ನವೇ ಕಣ್ಮರೆಯಾಗಿದ್ದಾರೆ. ಕಲ್ಯಾಣದ ಅಭಿವೃದ್ಧಿಗಾಗಿ ವಿಧಾನಸಭೆಯಲ್ಲಿ ಧ್ವನಿ ಎತ್ತುತ್ತಿದ್ದ ನಾರಾಯಣರಾವ್ ಅವರು ಮಾರ್ಮಿಕವಾಗಿ ಮಾತನಾಡುವ ಮೂಲಕ ಸಕಾರದ ಗಮನ ಸೇಳೆಯುತ್ತಿದ ಪ್ರಭಾವುಇ ನಾಯಕ ಕೂಡ ಹೌದು.
Date: 24-09-2020 Time:5:30PM ವಿಶೇಷ ವರದಿ : ದುರ್ಯೋಧನ ಹೂಗಾರ
ಎಲ್ಲ ಗ್ರಾಮ, ತಾಂಡಾಗಳಿಗೆ ಸ್ಮಶಾನಭೂಮಿ ಒದಗಿಸಿ: ಶಾಸಕ ಪ್ರಭು ಚವ್ಹಾಣ
*ಸ್ಮಶಾನ ಭೂಮಿ ಕೊರತೆಯ ಬಗ್ಗೆ ಅಧಿವೇಶನದಲ್ಲಿ ಧ್ವನಿ ಎತ್ತಿದ ಶಾಸಕರು* *ಎಲ್ಲ ಗ್ರಾಮ, ತಾಂಡಾಗಳಿಗೆ ಸ್ಮಶಾನ…

















