Home ನಿಮ್ಮ ಜಿಲ್ಲೆ ಬೀದರ ನಾಡು-ನುಡಿಗಾಗಿ ಹೋರಾಟ : ನವೀನ ಬತಲಿ

ನಾಡು-ನುಡಿಗಾಗಿ ಹೋರಾಟ : ನವೀನ ಬತಲಿ

ನಾಡು-ನುಡಿಗಾಗಿ ಹೋರಾಟ : ನವೀನ ಬತಲಿ

 

ಬೀದರ: ಜಯಕರ್ನಾಟಕ ಸಂಘಟನೆಯ ವಲಯ ಕಾರ್ಯದರ್ಶಿ ನವೀನ ಬತಲಿ ಅವರ 30ನೇ ಜನ್ಮ ದಿನ ನಿಮಿತ್ಯ ಬೀದರ ಜಿಲ್ಲೆಯ ವಿವಿಧ ಗ್ರಾಮಗಳಲ್ಲಿ ಜನ್ಮದಿನಾಚರಣೆ ಆಚರಿಸಲಾಯಿತು.

ಬತಲಿ ಅಭಿಮಾನಿಗಳು ಹಾಗೂ ಸಂಘಟನೆಯ ಸದಸ್ಯರು ಆಯಾ ಗ್ರಾಮಗಳಲ್ಲಿ ಕೇಕ್ ಕತ್ತರಿಸುವ ಮೂಲಕ ಜನ್ಮದಿನಾಚರಣೆ ಆಚರಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ನವೀನ ಬತಲಿ, ಕೊರೊನಾ ಸೋಂಕು ಎಲ್ಲಡೆ ಹರಡುತ್ತಿದ್ದು, ಜನ್ಮ ದಿನ ಹಿನ್ನೆಲೆಯಲ್ಲಿ ಸಾವಿರಾರು ಜನರು ಒಂದು ಕಡೇ ಸೇರಬಾರದು ಎಂಬ ನಿಟ್ಟಿನಲ್ಲಿ ನಾನೇ ಖುದ್ದು ವಿವಿಧ ಗ್ರಾಮಗಳಿಗೆ ಭೇಟಿನೀಡಿ ಗೆಳಯರ ಶುಭಾಯ ಪಡೆಯುತ್ತಿದ್ದೇನೆ. ಕನ್ನಡ ನಾಡು ನುಡಿಗಾಗಿ ನಾವುಗಳು ನಿರಂತರ ಹೊರಾಟ ನಡೆಸಬೇಕು. ನಮ್ಮ ಹೊರಾಟದ ಮೂಲಕ ನೊಂದವರಿಗೆ ನ್ಯಾಯ ದೊರೆಯಬೇಕು. ಸಂಘಟನೆಯಲ್ಲಿ ಯಾವುದೇ ರಾಜಕೀಯ ಪಕ್ಷದವರು ಇದ್ದರೂ ಕೂಡ ಸಂಘಟನೆಯಲ್ಲಿ ಮಾತ್ರ ರಾಜಕೀಯ ಬೇಡ. ನಾವುಗಳು ಒಂದು ಎಂಬ ಭಾವನೆಗಳು ಎಲ್ಲರಲ್ಲಿ ಇರಬೇಕು ಎಂದು ಸಲಹೆ ನೀಡಿದರು.

ಸುಮಾರು 25ಕ್ಕೂ ಅಧಿಕ ಗ್ರಾಮಗಳಲ್ಲಿ ನವೀನ ಬತಲಿ ಅವರ ಜನ್ಮ ದಿನಾಚರಣೆ ಆಚರಿಸಲಾಯಿತು. ಉದ್ಯಮಿ ಸಂದೀಪ ಬತಲಿ, ರಾಹುಲ ಪರಿಟ್, ಮಹೇಶ ಕಟ್ಟಿಮನಿ, ಅವಿನಾಶ ಧುಮಾಳೆ, ಪ್ರವೀಣ ಗುತ್ತೇದ್ದಾರ, ಉಮೇಶ ಕಟ್ಟಿಮನಿ, ಸೋಮು ಡಾಂಗೆ, ಕರಣ,  ರಾಜು ವಳಖೇಂಡಿ, ಸಿದ್ದು ರಾಂಪೂರೆ, ಲಕ್ಷ್ಮಣ ಗಾದಗಿ, ವಿಶಾಲ ಉಬಾಳೆ, ಪವನ ಮದಾಳೆ, ಸಿದ್ದು ಭಾಲ್ಕೇಶ್ವರ,  ಗುಂಡು ಸಾಟ್ಟೆ ಸೇರಿದಂತೆ ಅನೇಕರು ಇದ್ದರು.

Date: 21-09-2020  www.kknewsonline.in

Check Also

ಹೂಗಾರ ಸಮಾಜ ಸಂಘಟನೆ: ಅಶೋಕ ಹೂಗಾರ ವಾರಕಾಲ ಸಂಚಾರ

ಬೀದರ: ಬೀದರ‌ ಜಿಲ್ಲೆಯಲ್ಲಿ ಹೂಗಾರ ಸಮಾಜವನ್ನು ಸಂಘಟಿಸುವ ನಿಟ್ಟಿನಲ್ಲಿ ಅಖಿಲ ಕರ್ನಾಟಕ ಹೂಗಾರ ಸೇವಾ ಮಾಹಾ …