Home ನಿಮ್ಮ ಜಿಲ್ಲೆ ಬೀದರ ದೇವರ ಹುಂಡಿಗೆ ಕನ್ನ ಹಾಕಿದ ಕಳ್ಳರು.

ದೇವರ ಹುಂಡಿಗೆ ಕನ್ನ ಹಾಕಿದ ಕಳ್ಳರು.

ದೇವರ ಹುಂಡಿಗೆ ಕನ್ನ ಹಾಕಿದ ಕಳ್ಳರು.

ಬೀದರ: ಚಿಟಗುಪ್ಪ ತಾಲ್ಲೂಕಿನ ಸುಕ್ಷೇತ್ರ ರಾಮಪುರ ಗ್ರಾಮದ ಶ್ರೀ ರಾಮಲಿಂಗೇಶ್ವರ ದೇಗುಲದಲ್ಲಿ ಬುಧವಾರ ರಾತ್ರಿ ದೇವರ ಹುಂಡಿಗೆ ಕಳ್ಳರು ಕನ್ನ ಹಾಕಿದ ಘಟನೆ ಸಂಭವಿಸಿದೆ.

ಒಂದು ಹುಂಡಿ ದೇವಸ್ಥಾನದ ಸ್ಥಳದಲ್ಲಿಯೇ ಒಡೆದಿದ್ದು, ಇನ್ನೋಂದು ಹುಂಡಿಯನ್ನು ದೇವಾಲಯದ ಆವರಣ ಆಚೆಗೆ ಹುಂಡಿಯನ್ನು ಹೊತ್ತೊಯ್ಯದು ಹಣ ದೋಚಿದ್ದಾರೆ.

ಘಟನೆಯ ಮಾಹಿತಿ ಪಡೆದ ಚಿಟಗುಪ್ಪ ಪೊಲೀಸರು ಸ್ಥಳಕ್ಕೆ ಭೇಟಿನೀಡಿ ಪರಿಶೀಲನೆ ನಡೆಸಿದ್ದಾರೆ. ಅಲ್ಲದೆ, ಸ್ಥಳಕ್ಕೆ ಜಿಲ್ಲಾ ಶ್ವಾನದಳ, ವಿಧಿವಿಜ್ಞಾನ ತಂತ್ರಜ್ಞರು ಪರಿಶೀಲನೆ ನಡೆಸಿದರು.

ಸ್ಥಳಕ್ಕೆ ತಹಶೀಲ್ದಾರ್ ಹಾಗೂ ಡಿವೈಎಸ್ಪಿ ಸೋಮಲಿಂಗ್ ಕುಂಬಾರ್ ಭೇಟಿ ನೀಡಿದ್ದರು. ದೇವಾಲಯದ ಕಾರ್ಯದರ್ಶಿ ಜಗದೀಶ್, ವೃತ್ತ ನಿರೀಕ್ಷಕ ಶರಣಬಸವೇಶ್ವರ ಬಜಂತ್ರಿ ಇದ್ದರು.

date: 23-09-2020

Check Also

ಹೂಗಾರ ಸಮಾಜ ಸಂಘಟನೆ: ಅಶೋಕ ಹೂಗಾರ ವಾರಕಾಲ ಸಂಚಾರ

ಬೀದರ: ಬೀದರ‌ ಜಿಲ್ಲೆಯಲ್ಲಿ ಹೂಗಾರ ಸಮಾಜವನ್ನು ಸಂಘಟಿಸುವ ನಿಟ್ಟಿನಲ್ಲಿ ಅಖಿಲ ಕರ್ನಾಟಕ ಹೂಗಾರ ಸೇವಾ ಮಾಹಾ …