Home ಸುದ್ದಿಗಳು ರಾಜ್ಯ ಸುದ್ದಿ ಬೀದರ: ಭೀಕರ ರಸ್ತೆ ಅಪಘಾತ–3 ಮಂದಿ ಸ್ಥಳದಲ್ಲೇ ಸಾವು

ಬೀದರ: ಭೀಕರ ರಸ್ತೆ ಅಪಘಾತ–3 ಮಂದಿ ಸ್ಥಳದಲ್ಲೇ ಸಾವು

ಬೀದರ: ರಾಷ್ಟ್ರೀಯ ಹೆದ್ದಾರಿ 65ರ ಮೀನಕೇರಾ ಕ್ರಾಸ್ ಫ್ಲೈ ಓವರ್ ಮೇಲೆ ಬುಧವಾರ ಮುಂಜಾನೆ ಭೀಕರ ರಸ್ತೆ ಅಪಘಾತ ಸಂಭವಿಸಿದ್ದು,  ಸ್ಥಳದಲ್ಲಿಯೆ ಮೂರು ಜನ ಮೃತಪಟ್ಟಿದ ದಾರುಣ ಘಟನೆ ನಡೆದಿದೆ.

ಬೆಳಗಿನ ಜಾವ 03:45 ಗಂಟೆಗೆ ಮೀನಕೇರಾ ಕ್ರಾಸ್ ಫ್ಲೈ ಓವರ್ ಮೇಲುಗಡೆ ಅಪಘಾತ ಸಂಭವಿಸಿದೆ. ಮನ್ನಾಎಖೇಳ್ಳಿ ಕಡೆಗೆ ಹೊರಟಿದ್ದ ಅಶೋಕ್ ಲೀಲ್ಯಾಂಡ್ ಕೆಎ 39 8824 ಗೂಡ್ಸ್ ವಾಹನ ಪಂಪ್ಚರ್ ಗಿದ್ದು, ಪಂಪ್ಚರ್ ರೀಪೆರಿಮಾಡುವ ಸಂದರ್ಭದಲ್ಲಿ ಅಪಘಾತ ಸಂಭವಿಸಿದೆ. ಅನ್ಸರ್ (24) ಬಸಂತಪೂರ್ ತಾಂಡ,  ವಿಜಯ್ ಕುಮಾರ್ (32) ಬಸಂತಪೂರ್, ಇಸ್ಮೈಲ್ (25) ಚಾಂಗ್ಲೆರ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಈ ಕುರಿತು ಬಗ್ದಲ್ ಪೊಲೀಸ್ ಠಾಣೆಯ. ಪಿಎಸ್ಐ ಇಂದಿರಾಬಾಯಿ ಮತ್ತು ಗ್ರಾಮೀಣ ವೃತ್ತ ನಿರೀಕ್ಷಕರಾದ ರಾಮಪ್ಪ ಸಾವಳಗಿ ಭೇಟಿ ಪರಿಶೀಲನೆ ನಡೆಸಿದ್ದಾರೆ. ಬಗ್ದಲ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 

Date: 22-01-2020 Time:9:30AM

Check Also

ಎಲ್ಲ ಗ್ರಾಮ, ತಾಂಡಾಗಳಿಗೆ ಸ್ಮಶಾನಭೂಮಿ ಒದಗಿಸಿ: ಶಾಸಕ ಪ್ರಭು ಚವ್ಹಾಣ

*ಸ್ಮಶಾನ ಭೂಮಿ ಕೊರತೆಯ ಬಗ್ಗೆ ಅಧಿವೇಶನದಲ್ಲಿ ಧ್ವನಿ ಎತ್ತಿದ ಶಾಸಕರು* *ಎಲ್ಲ ಗ್ರಾಮ, ತಾಂಡಾಗಳಿಗೆ ಸ್ಮಶಾನ…