Home ಅಂಕಣಗಳು ಸೆ.30ರ ವರೆಗೆ ಮತದಾರರಪಟ್ಟಿ ವಿಶೇಷ ಪರಿಷ್ಕರಣೆ: ಜಿಲ್ಲಾಧಿಕಾರಿ

ಸೆ.30ರ ವರೆಗೆ ಮತದಾರರಪಟ್ಟಿ ವಿಶೇಷ ಪರಿಷ್ಕರಣೆ: ಜಿಲ್ಲಾಧಿಕಾರಿ

ಸಮಗ್ರ ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆ-೨೦೨೦ ಕಾರ್ಯಕ್ರಮಕ್ಕೆ ಜಿಲ್ಲಾಧಿಕಾರಿ ಡಾ| ಹೆಚ್.ಆರ್ ಮಹಾದೇವ್ ಭಾನುವಾರ ಜಿಲ್ಲಾ ರಂಗಮಂದಿರದಲ್ಲಿ ಚಾಲನೆ ನೀಡಿದರು.

ನಂತರ ಮಾತನಾಡಿದ ಅವರು, ಮತದಾರರ ಪಟ್ಟಿಯನ್ನು ಸ್ವಚ್ಛಗೊಳಿಸುವುದು ಹಾಗೂ ಶೇ.೧೦೦ರಷ್ಟು ಜನರನ್ನು ಮತದಾರರ ಪಟ್ಟಿಗೆ ಸೇರಿಸುವ ಉದ್ದೆÃಶದಿಂದ ಚುನಾವಣಾ ಆಯೋಗವು ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆ ಕಾರ್ಯಕ್ರಮವನ್ನು ಹಾಕಿಕೊಂಡಿದೆ. ಒಂದು ತಿಂಗಳವÀರೆಗೆ ಈ ಕಾರ್ಯಕ್ರಮ ನಡೆಯಲಿದ್ದು, ೨೦೨೦ರ ಜನವರಿ ೧ಕ್ಕೆ ೧೮ ವರ್ಷ ಪೂರ್ಣಗೊಳ್ಳುವವರು ಹೊಸ ಅರ್ಜಿ ಸಲ್ಲಿಸಬಹುದು. ಮತದಾರರ ಪಟ್ಟಿಯಲ್ಲಿ ಹೆಸರು, ವಿಳಾಸ ಅಥವಾ ಇನ್ನಿತರೆ ತಿದ್ದುಪಡಿಗಳಿದ್ದಲ್ಲಿ ಸರಿಪಡಿಸಿಕೊಳ್ಳಬಹುದು. ಮೃತರಾದವರ ಹೆಸರುಗಳನ್ನು ಮತದಾರರ ಪಟ್ಟಿಯಿಂದ ತೆಗೆಯಲು ಅವಕಾಶ ಕಲ್ಪಿಸಲಾಗಿದೆ ಎಂದು ತಿಳಿಸಿದರು.

ಬಿಎಲ್‌ಓಗಳು ಪ್ರತಿ ಮನೆಗೆ ಭೇಟಿ ನೀಡಿ ಮತದಾರರ ಪಟ್ಟಿಯಲ್ಲಿ ಏನಾದರೂ ದೋಷಗಳಿದ್ದಲ್ಲಿ ಅಗತ್ಯ ಸಲಹೆಗಳನ್ನು ನೀಡುವುದರ ಜೊತೆಗೆ ಸರಿಪಡಿಸಲು ಸಹಕರಿಸುತ್ತಾರೆ. ಇದು ಸಾರ್ವಜನಿಕರ ಕಾರ್ಯಕ್ರಮ ಆಗಿರುವುದರಿಂದ ಜನತೆ ಬಿಎಲ್‌ಒಗಳಿಗಾಗಿ ಕಾಯದೇ ತಾವೇ ಖುದ್ದಾಗಿ ಮತದಾರರ ಪಟ್ಟಿಯನ್ನು ಸರಿಪಡಿಸಿಕೊಳ್ಳಲು ಮುಂದಾಗಬೇಕು ಎಂದು ಸಲಹೆ ನೀಡಿದರು.

ಸಾರ್ವಜನಿಕರ ಅನುಕೂಲಕ್ಕಾಗಿ ಪೋರ್ಟಾಲ್ ಆರಂಭಿಸಲಾಗಿದೆ. ವೆಬ್‌ಸೈಟ್:ತಿತಿತಿ.ಟಿvsಠಿ.iಟಿ ಅಥವಾ ಮತದಾರರ ಸಹಾಯವಾಣಿ ಸಂಖ್ಯೆ:೧೯೫೦ಗೆ ಕರೆ ಮಾಡುವ ಮೂಲಕ ಪರಿಶೀಲಿಸಿ ದೃಢೀಕರಿಸಿಕೊಳ್ಳಬಹುದಾಗಿದೆ. ಮತದಾರರ ಪಟ್ಟಿಗೆ ಹೆಸರು ಸೇರ್ಪಡೆಗೊಳಿಸಲು ಅರ್ಜಿಯೊಂದಿಗೆ ಚುನಾವಣಾ ಆಯೋಗವು ಗುರುತಿಸಿರುವ ದಾಖಲಾತಿಗಳಲ್ಲಿ ಯಾವುದಾದರೂ ಒಂದನ್ನು ಸಲ್ಲಿಸಬಹುದು ಎಂದು ಸ್ಪಷ್ಪಪಡಿಸಿದರು.

ಚುನಾವಣೆ ಸಂದರ್ಭದಲ್ಲಿ ಮತದಾನ ಮಾಡಲು ಮತಗಟ್ಟೆಗೆ ತೆರಳಿದಾಗ ಮತದಾರರ ಪಟ್ಟಿಯಲ್ಲಿ ದೋಷವಿರುವ ಕಾರಣಕ್ಕೆ ಹಲವರು ಮತದಾನದಿಂದ ವಂಚನೆಗೊಳಗಾದ ಘಟನೆಗಳು ಸಾಕಷ್ಟು ನಡೆದಿರುತ್ತವೆ. ಇಂತಹದನ್ನು ತಪ್ಪಿಸುವ ನಿಟ್ಟಿನಲ್ಲಿ ಮತದಾರರ ಪಟ್ಟಿಯ ಪರಿಷ್ಕರಣೆ ನಡೆಸಲಾಗುತ್ತಿದೆ. ಸಾರ್ವಜನಿಕರು ಇದರ ಲಾಭ ಪಡೆಯಬೇಕು ಎಂದು ಜಿಲ್ಲಾಧಿಕಾರಿಗಳು ಹೇಳಿದರು.

ಜಿಲ್ಲಾ ಚುನಾವಣಾ ಮಾಸ್ಟರ್ ಟ್ರೆÃನರ್ ಡಾ| ಗೌತಮ ಅರಳಿ ಮಾತನಾಡಿದರು. ಈ ಸಂದರ್ಭದಲ್ಲಿ ಅಪರ ಜಿಲ್ಲಾಧಿಕಾರಿ ರುದ್ರೆÃಶ ಗಾಳಿ, ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ಸೂರ್ಯಕಾಂತ್, ತಹಸೀಲ್ದಾರರಾದ ಕೀರ್ತಿ ಚಾಲಕ್, ಚುನಾವಣಾ ಮಾಸ್ಟರ್ ಟ್ರೇನರ್ ರಮೇಶಕುಮಾರ ಮಠಪತಿ ಹಾಗೂ ಇತರರು ಇದ್ದರು.

Check Also

ಇಂದಿಗೂ ನಡೆಯದ ಜಾತ್ರಾ ಪೂರ್ವಭಾವಿ ಸಭೆ

ಇಂದಿಗೂ ನಡೆಯದ ಜಾತ್ರಾ ಪೂರ್ವಭಾವಿ ಸಭೆ ಸಭೆಯ ಅಧ್ಯಕ್ಷರ ನೇಮಕ ಕುರಿತು ಗೊಂದಲ ಸೃಷ್ಟಿ – ಅಧಿಕಾರಿಗಳು ಹೈರಾ…