ಹೆಚ್ಚಿನ ದರದಲ್ಲಿ ಮಾಸ್ಕ್ ಮಾರಿದರೆ ಕ್ರಮ: ಜಿಲ್ಲಾಧಿಕಾರಿ
ಬೀದರ- ಹೆಚ್ಚಿನ ದರದಲ್ಲಿ ಮಾಸ್ಕ್‍ಗಳನ್ನು ಮಾರಾಟ ಮಾಡುವವರ ಬಗ್ಗೆ ಮಾಹಿತಿ ಸಿಕ್ಕಲ್ಲಿ ಅಂತವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿಗಳಾದ ಡಾ.ಹೆಚ್.ಆರ್.ಮಹಾದೇವ್ ಎಚ್ಚರಿಸಿದ್ದಾರೆ.
ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಮಾ.16ರಂದು ಜಿಲ್ಲಾಧಿಕಾರಿಗಳು ಸುದ್ದಿಗೋಷ್ಠಿ ನಡೆಸಿದ ವೇಳೆ, ಕೆಲವು ವ್ಯಾಪಾರಸ್ಥರು ಕರೋನಾ ವೈರಸ್ ಹರಡುತ್ತಿರುವ ಈ ಪರಿಸ್ಥಿತಿಯ ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ. ಕಡಿಮೆ ಬೆಲೆಯ ಮಾಸ್ಕಗಳನ್ನು ಹೆಚ್ಚಿನ ಬೆಲೆಗೆ ಮಾರಿ, ಜನತೆಗೆ ಮೋಸ ಮಾಡುತ್ತಿದ್ದಾರೆ ಎಂದು ಸುದ್ದಿಗಾರರು ಸಭೆಗೆ ತಿಳಿಸಿದರು.
ಜನರು ಅನಗತ್ಯ ಭಯಪಡಬಾರದು. ಕೆಮ್ಮು, ನೆಗಡಿ, ಜ್ವರ ಇರುವವರು ಮಾತ್ರ ಮಾಸ್ಕ ಧರಿಸಿದರೆ ಸಾಕು. ಇದರಿಂದ ಅದು ಇತರರಿಗೆ ಹರಡುವುದಿಲ್ಲ. ಇನ್ನುಳಿದ ಜನರು ಕರವಸ್ತ್ರಗಳನ್ನು ಮೂಗು ಬಾಯಿಗೆ ಹಾಕಿಕೊಳ್ಳಬೇಕು. ಜೇಬಿನಲ್ಲಿ ನಾಲ್ಕು ಕರವಸ್ತ್ರಗಳನ್ನು ಇಟ್ಟುಕೊಂಡು ಆರು ಗಂಟೆಗೊಮ್ಮೆ ಬದಲಿಸಬೇಕು ಎಂದು ತಿಳಿಸಿದರು. ಮಾಸ್ಕ ಹಾಕಿಕೊಳ್ಳುವವರು ಅದನ್ನು ಬಳಸಿದ ಬಳಿಕ ಎಲ್ಲೆಂದರಲ್ಲಿ ಬೀಸಿ ಹಾಕಬಾರದು. ಅದನ್ನು ವೈಜ್ಞಾನಿಕ ರೀತಿಯಲ್ಲಿ ವಿಲೇ ಮಾಡಲು ಕೂಡ ಒತ್ತು ಕೊಡಬೇಕು ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.
ಪತ್ರಕರ್ತರಿಗೂ ಮಾಹಿತಿ: ಮಾ.16ರಂದು ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಕೋರೋನಾ ವೈರಸ್ ಕುರಿತಂತೆ ನಗರದ ಪತ್ರಕರ್ತರಿಗೆ ಪ್ರಾತ್ಯಕ್ಷಿಕೆ ಮೂಲಕ ಜಿಲ್ಲಾಡಳಿತದಿಂದ ಮಾಹಿತಿ ನೀಡಲಾಯಿತು. ಈ ವೇಳೆ ಡಾ.ಮಹೇಶ ತೊಂಡಾರೆ ಅವರು ಮಾಹಿತಿ ನೀಡಿ, ಸಾರ್ವಜನಿಕರಿಗೆ ಅರಿವು ಮೂಡಿಸುವ ನಿಟ್ಟಿನಲ್ಲಿ ಮಾಧ್ಯಮಗಳ ಪಾತ್ರ ಅತ್ಯಂತ ಮಹತ್ವದ್ದು ಆದ್ದರಿಂದ ಪತ್ರಕರ್ತರು ಕರೋನಾ ವೈರಸ್ ಕುರಿತಂತೆ ಜನತೆಗೆ ಸಾಧ್ಯವಾದಷ್ಟು ತಿಳಿವಳಿಕೆ ಮೂಡಿಸಬೇಕು ಎಂದು ಮನವಿ ಮಾಡಿದರು.
ಸರಳ ವಿವಾಹಕ್ಕೆ ಮನವಿ: ರೋಗ ಹರಡದಂತೆ ಮುನ್ನೆಚ್ಚರಿಕೆ ಕ್ರಮವಾಗಿ ವಿವಾಹಗಳನ್ನು ಸರಳವಾಗಿ ಆಚರಿಸುವುದು ಸೂಕ್ತ. ವೈಭವಯುತ ಆಚರಣೆಗಳನ್ನು ಬಿಟ್ಟು ತಮ್ಮ ಮನೆಯಲ್ಲಿಯೇ ಸರಳವಾಗಿ ವಿವಾಹ ಕಾರ್ಯಕ್ರಮಗಳನ್ನು ಏರ್ಪಡಿಸುವಂತೆ ಜಿಲ್ಲಾಧಿಕಾರಿಗಳು ಇದೆ ವೇಳೆ ಮನವಿ ಮಾಡಿದರು.
Date: 16-03-2020
ಹೂಗಾರ ಸಮಾಜ ಸಂಘಟನೆ: ಅಶೋಕ ಹೂಗಾರ ವಾರಕಾಲ ಸಂಚಾರ
ಬೀದರ: ಬೀದರ ಜಿಲ್ಲೆಯಲ್ಲಿ ಹೂಗಾರ ಸಮಾಜವನ್ನು ಸಂಘಟಿಸುವ ನಿಟ್ಟಿನಲ್ಲಿ ಅಖಿಲ ಕರ್ನಾಟಕ ಹೂಗಾರ ಸೇವಾ ಮಾಹಾ …

















