ಬಿ.ನಾರಾಯಣರಾವ ಬೇಗ ಗುಣಮುಖರಾಗಲಿ : ಈಶ್ವರ ಖಂಡ್ರೆ
ಬಿ.ನಾರಾಯಣರಾವ ಬೇಗ ಗುಣಮುಖರಾಗಲಿ : ಈಶ್ವರ ಖಂಡ್ರೆ
ಬೀದರ: ಬಸವಕಲ್ಯಾಣ ಶಾಸಕ ಬಿ.ನಾರಾಯಣರಾವ ಅವರ ಆರೋಗ್ಯ ಸ್ಥಿತಿ ತೀವ್ರ ಚಿಂತಾಜನಕವಾಗಿದೆ ಎಂಬ ಸುದ್ದಿ ತಿಳಿದ ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ವಿಡಿಯೋ ಕಾಲ್ ಮೂಲಕ ವೈದ್ಯರನ್ನು ಸಂಪರ್ಕಿಸಿ ಮಾಹಿತಿ ಪಡೆದಿದ್ದಾರೆ.
ಕರೊನಾ ಸೋಂಕು ತಗುಲಿದ ಹಿನ್ನೆಲೆಯಲ್ಲಿ ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಗೆ ದಾಖಲಾಗಿದ ಶಾಸಕರು, ಕಳೆದ ರಾತ್ರಿಯಿಂದ ದಿಢೀರ್ ಆರೋಗ್ಯ ಸಮಸ್ಯೆ ಹೆಚ್ಚಾಗಿರುವ ಬಗ್ಗೆ ಮಾಹಿತಿ ಪಡೆದಿದ್ದಾರೆ.
ಚಿಕಿತ್ಸೆ ನೀಡುತ್ತಿರುವ ಆಸ್ಪತ್ರೆಯ ವೈದ್ಯರಾದ ಡಾ। ಮಹೇಶ್ ಅವರ ಜೊತೆ ಮಾತನಾಡಿ ಶಾಸಕರ ಆರೋಗ್ಯ ಕುರಿತು ವಿಚಾರಿಸದ್ದೇನೆ. ಐಸಿಯುನಲ್ಲಿದ್ದ ನಾರಾಯಣ್ ರಾವ್ ಅವರ ಸ್ಥಿತಿಯನ್ನ ವಿಡಿಯೋ ಕಾಲ್ ಮೂಲಕವೇ ಗಮನಿಸಿದ್ದೇನೆ. ಭಗವಂತ ಅವರಿಗೆ ಆಯುರಾರೋಗ್ಯ ನೀಡಲಿ ಎಂದು ಪ್ರಾರ್ಥಿಸುತ್ತೇನೆ ಎಂದು ಟ್ವಿಟ್ ಮಾಡಿದ್ದಾರೆ.
Date:23-092020 www.kknewsonline.in
ಹೂಗಾರ ಸಮಾಜ ಸಂಘಟನೆ: ಅಶೋಕ ಹೂಗಾರ ವಾರಕಾಲ ಸಂಚಾರ
ಬೀದರ: ಬೀದರ ಜಿಲ್ಲೆಯಲ್ಲಿ ಹೂಗಾರ ಸಮಾಜವನ್ನು ಸಂಘಟಿಸುವ ನಿಟ್ಟಿನಲ್ಲಿ ಅಖಿಲ ಕರ್ನಾಟಕ ಹೂಗಾರ ಸೇವಾ ಮಾಹಾ …
















