Home ನಿಮ್ಮ ಜಿಲ್ಲೆ ಬೀದರ ಅಬಕಾರಿ ಅಧಿಕಾರಿಗಳಿಂದ ಎರೆಡು ಗಾಂಜ್ ಕೇಸ್.

ಅಬಕಾರಿ ಅಧಿಕಾರಿಗಳಿಂದ ಎರೆಡು ಗಾಂಜ್ ಕೇಸ್.

9ಅಬಕಾರಿ ಅಧಿಕಾರಿಗಳಿಂದ ಎರೆಡು ಗಾಂಜ್ ಕೇಸ್.

ಬೀದರ: ನೆರೆ ಜಿಲ್ಲೆ ಕಲಬುರಗಿ ಸೇರಿದಂತೆ ರಾಜ್ಯದ ವಿವಿಧಡೆ ಭಾರಿ ಪ್ರಮಾಣದಲ್ಲಿ ಗಾಂಜಾ ಪತ್ತೆಯಾಗುತ್ತಿರುವ ಹಿನ್ನೆಲೆಯಲ್ಲಿ ಗಡಿ ಜಿಲ್ಲೆಯಲ್ಲಿ ಕೂಡ ಪೊಲೀಸ್ ಅಧಿಕಾರಿಗಳು ಹಾಗೂ ಅಬಕಾರಿ ಅಧಿಕಾರಿಗಳು ವಿವಿಧಡೆ ಕಾರ್ಯಚರಣೆ ಶುರುಮಾಡಿದ್ದಾರೆ.

ಹುಮನಾಬಾದ ತಾಲೂಕಿನ ಜಲಸಂಗಿ ಗ್ರಾಮದ ಮಹೇಬೂಬ್ ಎಂಬ ವ್ಯಕ್ತಿಯ ಹೊಲದಲ್ಲಿ ಕಬ್ಬಿನ ಮಧ್ಯೆ ಗಾಂಜಾ ಗಿಡ ಬೆಳೆಸಿದ ಖಚಿತ ಮಾಹಿತಿ ಹಿನ್ನೆಲೆಯಲ್ಲಿ ಅಬಕಾರಿ ಡಿಸಿ ಮಂಜುನಾಥ ನೇತೃತ್ವದಲ್ಲಿ ದಾಳಿ ನಡೆಸಿದ್ದು, ಹೊಲದಲ್ಲಿನ 10 ಗಾಂಜಾ ಗಿಡಗಳು ಪತ್ತೆಹಚ್ಚಿದ್ದಾರೆ. ಸುಮಾರು 32 ಕೆಜಿ ತೂಕ ಇದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಬೀದರ-ಹುಮನಾಬಾದ ಹೆದ್ದಾರಿಯಲ್ಲಿ ಕಾರಿನಲ್ಲಿ 4.5 ಕೆ.ಜಿ ಗಾಂಜಾ ಸಾಗಿಸುತ್ತಿದ ಖಚಿತ ಮಾಹಿತಿ ಹಿನ್ನೆಲೆಯಲ್ಲಿ ಅಬಕಾರಿ  ಡಿವೈಎಸ್ಪಿ ಅನಿಲಕುಮಾರ ಪೊದ್ದಾರ್, ಸಿಪಿಐ ದೇವಿದಾಸ ಭೂಸ್ಲೆ,  ಪಿಎಸ್ಐ ಜೇಟ್ಟೆಪ್ಪಾ ಬೇಲೂರ್  ಹಾಗೂ ಅಬಕಾರಿ ನೀರಿಕ್ಷಕ ಶಿವರಾಮ ರೆಡ್ಡಿ ನೇತೃತ್ವದಲ್ಲಿ ತಾಲೂಕಿನ ಜಲಸಂಗಿ ಕ್ರಾಸ್ ಹತ್ತಿರ ದಾಳಿ ನಡೆಸಿದ್ದಾರೆ. ಜಯಪ್ರಯಾಶ ಪೊಸ್ತೆ ಎಂಬ ಆರೋಪಿಯನ್ನು ಬಂದಿಸಿ 4.5 ಕೆಜಿ ಗಾಂಜಾ ಹಾಗೂ ಕಾರು ವಶಪಡಿಸಿಕೊಂಡಿದ್ದಾರೆ.

https://play.google.com/store/apps/details?id=kknewsonline.in

Date:16-09-2020 : www.kknewsonline.in

Check Also

ಹೂಗಾರ ಸಮಾಜ ಸಂಘಟನೆ: ಅಶೋಕ ಹೂಗಾರ ವಾರಕಾಲ ಸಂಚಾರ

ಬೀದರ: ಬೀದರ‌ ಜಿಲ್ಲೆಯಲ್ಲಿ ಹೂಗಾರ ಸಮಾಜವನ್ನು ಸಂಘಟಿಸುವ ನಿಟ್ಟಿನಲ್ಲಿ ಅಖಿಲ ಕರ್ನಾಟಕ ಹೂಗಾರ ಸೇವಾ ಮಾಹಾ …