ಕೋರೋನಾ ಹಿನ್ನೆಲೆ: ಸಾರ್ವಜನಿಕರಿಗೆ ಸಹಾಯವಾಣಿ ಆರಂಭ
ಬೀದರಃ ಕೋರೋನಾ ವೈರಸ್ ಹಿನ್ನೆಲೆಯಲ್ಲಿ ಸಾರ್ವಜನಿಕರಿಗೆ ಅನುಕೂಲವಾಗಲು ಮತ್ತು ಯಾರಿಗಾದರು ಏನಾದರು ಸಮಸ್ಯೆಗಳಿದ್ದಲ್ಲಿ ಅದನ್ನು ತಿಳಿಸಲು ಸಹಾಯವಾಣಿ (ಹೆಲ್ಪಲೈನ್)ಗಳನ್ನು ಮತ್ತು ನಿಯಂತ್ರಾಣ ಕೊಠಡಿ (ಕಂಟ್ರೋಲ್ ರೂಂ)ಯ ದೂರವಾಣಿ ಸಂಖ್ಯೆಗಳನ್ನು ಆರಂಭಿಸಲಾಗಿದೆ.
ಸಹಾಯವಾಣಿ (ಹೆಲ್ಪಲೈನ್) ಸಂಖ್ಯೆ ನಂ: 18004254316 ಅಥವಾ 18004254317 ಅಥವಾ 18004254318, 18004254319 ಸಂಖ್ಯೆಗೆ ಜನರು ಸಂಪರ್ಕಕಿಸಬಹುದಾಗಿದೆ. ಅಗತ್ಯ ವಸ್ತುಗಳ ಪೂರೈಕೆಯಲ್ಲಿ ವ್ಯತ್ಯಯ ಉಂಟಾದರೆ, ಯಾವುದಾದರು ಕಾಯಿಲೆ ಬಗ್ಗೆ ಚಿಕಿತ್ಸೆಗೆ ತೊಂದರೆಯಾದರೆ, ಚೆಕ್ಪೋಸ್ಟಗಳು ಸರಿಯಾಗಿ ಕಾರ್ಯನಿರ್ವಹಿಸದೇ ಇದ್ದರೆ, ಹೊರದೇಶಗಳಿಂದ ಬಂದಿದ್ದವರ ಬಗ್ಗೆ ಮಾಹಿತಿ ಕೊಡುವುದು ಸೇರಿದಂತೆ ಕೋರೋನಾ ಹಿನ್ನೆಲೆಯಲ್ಲಿ ಯಾವುದೇ ದೂರು ದುಮ್ಮಾನಗಳು ಮತ್ತು ಸಲಹೆ ಸೂಚನೆಗಳಿದ್ದ ಸಾರ್ವಜನಿಕರು ಈ ಸಹಾಯವಾಣಿಗಳ ಮೂಲಕ ತಿಳಿಸಬಹುದಾಗಿದೆ ಎಂದು ಪ್ರಕಟಣೆ ತಿಳಿಸಿದೆ.
Date: 29-03-2020
ಹೂಗಾರ ಸಮಾಜ ಸಂಘಟನೆ: ಅಶೋಕ ಹೂಗಾರ ವಾರಕಾಲ ಸಂಚಾರ
ಬೀದರ: ಬೀದರ ಜಿಲ್ಲೆಯಲ್ಲಿ ಹೂಗಾರ ಸಮಾಜವನ್ನು ಸಂಘಟಿಸುವ ನಿಟ್ಟಿನಲ್ಲಿ ಅಖಿಲ ಕರ್ನಾಟಕ ಹೂಗಾರ ಸೇವಾ ಮಾಹಾ …
















