ಕ್ರಿಮಿನಾಶ ಸಿಂಪಡಣೆಗೆ ಸಂಜಯ ಖೇಣಿ ಸಹಕಾರ.
ಬೀದರಃ ಕೊರೊನಾ ವೈರಸ್ ಸೋಂಕು ಹರಡದಂತೆ ಹುಮನಾಬಾದ ತಾಲೂಕಿನ ಹಳ್ಳಿಖೇಡ(ಬಿ) ಪಟ್ಟಣ ಹಾಗೂ ಸೀತಾಳಗೇರಾ ಗ್ರಾಮ ಸೇರಿದಂತೆ ಇತರೆ ಗ್ರಾಮಗಳಲ್ಲಿ ಸಾಂಕ್ರಮಿಕ ಬಳಸಿ ರೋಗಗಳ ವೈರಾಣು ನಾಶಕ್ಕೆ ಉದ್ಯಮಿ ಸಂಜಯ ಖೇಣಿ ಮುಂದೆ ಬಂದಿದ್ದು, ವಿವಿಧಡೆ ಕ್ರಿಮಿನಾಶಕ ಸಿಂಪಡಣೆಗೆ ಸಹಕಾರ ನೀಡುತ್ತಿದ್ದಾರೆ.
ಕಳೆದ ಎರೆಡು ದಿನಗಳಿಂದ ಸೀತಾಳರೇಗಾ ಹಾಗೂ ಹಳ್ಳಿಖೇಡ(ಬಿ) ಪಟ್ಟಣದಲ್ಲಿ ಕ್ರಿಮಿನಾಶ ಸಿಂಪಡನೆ ಕಾರ್ಯ ನಡೆಯುತ್ತಿದ್ದು. ಕ್ರಿಮಿನಾಶ ಸಿಂಪಡಣೆಗೆ ಬೇಕಾದ ಟ್ಯಾಕ್ಟರ್, ಇಂಧನ ಹಾಗೂ ಕ್ರಿಮಿನಾಶವನ್ನು ಮಿಶ್ರಣವನ್ನು ಸಂಜಯ ಖೇಣಿ ಸ್ವಂತ ಹಣದಲ್ಲಿ ಖರೀದಿಮಾಡಿ ಎಲ್ಲಾವನ್ನು ಪುರಸಭೆ ಹಾಗೂ ಗ್ರಾಮ ಪಂಚಾಯ್ತಿಗಳ ಅಧಿಕಾರಿಗಳಿಗೆ ಒಪ್ಪಿಸಿ ನಿಮ್ಮ ವ್ಯಾಪ್ತಿಗಳಲ್ಲಿ ಕ್ರಿಮಿನಾಶಕ ಸಿಂಪಡಣೆಮಾಡಿಕೊಂಡು ರೋಗ ಬರದಂತೆ ಮುಂಜಾಗ್ರತೆ ವಹಿಸಿ ಎಂದು ಮನವಿ ಮಾಡಿದ್ದಾರೆ.
ಪುರಸಭೆ ಹಾಗೂ ಗ್ರಾಮ ಪಂಚಾಯತ ಅಧಿಕಾರಿಗಳು ಖುದ್ದು ಎದುರಿದ್ದು ಎಲ್ಲಾ ಕಡೆಗಳಲ್ಲಿ ವೈರಾಣುಗಳು ಹರಡದಂತೆ ಸಿಂಪಡನೆ ಮಾಡಿಸಿದ್ದಾರೆ. ಈ ಕಾರ್ಯಕ್ಕೆ ಜನರ ಮೆಚ್ಚಿಗೆ ವ್ಯಕ್ತವಾಡಗಿದ್ದು, ಪಟ್ಟಣದ ಪ್ರದೇಶದಲ್ಲಿ ಆಗದ ಕಾರ್ಯ ಗ್ರಾಮೀಣ ಭಾಗದಲ್ಲಿ ಕ್ರಿಮಿನಾಶ ಬಳಸಲಾಗಿದೆ ಎಂದು ಪುರಸಭೆ ಮುಖ್ಯಾಧಿಕಾರಿ ಯೂಸುಫ್ ಮಾಹಿತಿ ನೀಡಿದ್ದಾರೆ.
ಈ ಕುರಿತು ಪ್ರತಿಕ್ರಿಯೆ ನೀಡಿದ ಉದ್ಯಮಿ ಸಂಜಯ ಖೇಣಿ, ಪ್ರಚಾರಕ್ಕಾಗಿ ನಾನು ಈ ಕೆಲಸ ಮಾಡುತ್ತಿಲ್ಲ. ರೋಗದ ಸೋಂಕು ಎಲ್ಲಾ ಕಡೆಗಳಲ್ಲಿ ಹರಡದಿರಲ್ಲಿ ಎಂದು ಕ್ರಿಮಿನಾಶ ಸಿಂಪಡಣೆಗೆ ಮುಂದಾಗಿದ್ದೇನೆ. ನನ್ನ ಸೇವೆಯನ್ನು ಅಧಿಕಾರಿಗಳು ಸೂಕ್ತವಾಗಿ ಬಳಸಿಕೊಂಡಿದ್ದು, ಅವರಿಗೆ ಅಭಿನಂದನೆ ಸಲ್ಲಿಸುವುದಾಗಿ ತಿಳಿಸಿದ ಅವರು, ಕೊರೊನಾ ಶಂಕಿತರ ಚಿಕಿತ್ಸೆಗಾಗಿ ಹಳ್ಳಿಖೇಡ(ಬಿ) ಪಟ್ಟಣದಲ್ಲಿನ ಶಾಲೆಯ ಎಲ್ಲಾ ವರ್ಗ ಕೊಠಡಿಗಳನ್ನು ಬಳಸಿಕೊಳ್ಳಿ. ಅಲ್ಲದೆ, ಇತರೆ ಯಾವುದೇ ಸೇವೆ ಬೇಕಾದರೆ ನೆನಪಿಸಿ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪಂಚಾಯತ ಅಧಿಕಾರಿಗಳಿಗೆ ಪತ್ರ ಬರೆದಿರುವುದಾಗಿ ತಿಳಿಸಿದ್ದಾರೆ.
Date: 29-03-2020
ಹೂಗಾರ ಸಮಾಜ ಸಂಘಟನೆ: ಅಶೋಕ ಹೂಗಾರ ವಾರಕಾಲ ಸಂಚಾರ
ಬೀದರ: ಬೀದರ ಜಿಲ್ಲೆಯಲ್ಲಿ ಹೂಗಾರ ಸಮಾಜವನ್ನು ಸಂಘಟಿಸುವ ನಿಟ್ಟಿನಲ್ಲಿ ಅಖಿಲ ಕರ್ನಾಟಕ ಹೂಗಾರ ಸೇವಾ ಮಾಹಾ …
















