Home ನಿಮ್ಮ ಜಿಲ್ಲೆ ಕಲಬುರಗಿ ಹೂಗಾರ ಸಮಾಜ ಸಂಘಟನೆ: ಅಶೋಕ ಹೂಗಾರ ವಾರಕಾಲ ಸಂಚಾರ

ಹೂಗಾರ ಸಮಾಜ ಸಂಘಟನೆ: ಅಶೋಕ ಹೂಗಾರ ವಾರಕಾಲ ಸಂಚಾರ

ಬೀದರ: ಬೀದರ‌ ಜಿಲ್ಲೆಯಲ್ಲಿ ಹೂಗಾರ ಸಮಾಜವನ್ನು ಸಂಘಟಿಸುವ ನಿಟ್ಟಿನಲ್ಲಿ ಅಖಿಲ ಕರ್ನಾಟಕ ಹೂಗಾರ ಸೇವಾ ಮಾಹಾ ಸಭಾದ ಸಂಘಟನಾ ಕಾರ್ಯದರ್ಶಿ ಅಶೋಕ ಹೂಗಾರ ಫೆ.21ರಿಂದ ಒಂದು ವಾರ ಕಾಲ ಬೀದರ ಜಿಲ್ಲಾ ಪ್ರವಾಸ ಕೈಗೊಂಡಿದ್ದಾರೆ ಎಂದು ಬೀದರ ಹೂಗಾರ ಸಮಾಜದ ಜಿಲ್ಲಾಧ್ಯಕ್ಷರಾದ ರಾಜಕುಮಾರ ಹೂಗಾರ ಮದಕಟ್ಟಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಕಲ್ಯಾಣ ಕರ್ನಾಟಕದ ಬೀದರ, ಕಲಬುರಗಿ, ರೈಯಚೂರ, ಯಾದಗಿರಿ, ಕೋಪ್ಪಳ, ಬಳ್ಳಾರಿ ಹಾಗೂ ವಿಜಯನಗರ ಜಿಲೆಗಳಲ್ಲಿ ಒಂದು ತಿಂಗಳ ಕಾಲ ಪ್ರವಾಸ ನಡೆಸಲ್ಲಿದ್ದು, ಶರಣರ ನಾಡು ಬೀದರ ಜಿಲ್ಲೆಯಿಂದ ಸಂಘಟನಾ ಕಾರ್ಯಕ್ಕೆ ಚಾಲನೆ ನೀಡಲಿದ್ದಾರೆ. ಜಿಲ್ಲೆಯ ಎಲ್ಲಾ ತಾಲೂಕು ಹಾಗೂ ಗ್ರಾಮೀಣ ಭಾಗದಲ್ಲಿನ ಹೂಗಾರ ಸಮಾಜದವರು ಸಂಘಟನಾ ಕಾರ್ಯಗಳ ಭೇಟಿಗೆ ಸೂಕ್ತ ಸ್ಪಂದನೆ ನೀಡಬೇಕು ಎಂದು ಪ್ರಕಟಣೆ ಮೂಲಕ ತಿಳಿಸಿದ್ದಾರೆ.

Check Also

ದಿನನಿತ್ಯ ಜೀವನದಲ್ಲಿ ಆಯುರ್ವೇದಕ್ಕೆ ಮಹತ್ವ ನೀಡಬೇಕು : ಡಾ| ಉಮಾಶಂಕರ

ದಿನನಿತ್ಯ ಜೀವನದಲ್ಲಿ ಆಯುರ್ವೇದಕ್ಕೆ ಮಹತ್ವ ನೀಡಬೇಕು : ಡಾ| ಉಮಾಶಂಕರ ಕಮಲಾಪೂರ್: ಮನುಷ್ಯನ ಜೀವನಕ್ಕೆ ಆಯು…