ಹೂಗಾರ ಸಮಾಜ ಅಭಿವೃದ್ಧಿಗೆ ಸರಕಾರ ಸ್ಪಂದಿಸಬೇಕು: ಶಂಕರ್ ಹೂಗಾರ
ಶರಣ ಮದಾಯ್ಯನವರ ಜಯಂತಿ ಸರ್ಕಾರದಿಂದ ಆಚರಣೆ ಆಗಬೇಕು
ಬೆಂಗಳೂರು: ಹೂಗಾರ ಸಮುದಾಯದ ಅಭಿವೃದ್ಧಿಗೆ 2025-26ನೇ ಸಾಲಿನ ಬಜೆಟ್‌ನಲ್ಲಿ ಅನುದಾನ ನೀಡುವಂತೆ ಮತ್ತು ಪ್ರತ್ಯೇಕ ಹೂಗಾರ ಅಭಿವೃದ್ಧಿ ನಿಗಮ ಹೆಸರಿಸಿ ಅನುಷ್ಠಾನ ಮಾಡುವಂತೆ ಅಖೀಲ ಕರ್ನಾಟಕ ಹೂಗಾರ ಸೇವಾ ಮಹಾಸಭಾ ರಾಜ್ಯಾಧ್ಯಕ್ಷರಾದ ಶಂಕರ್ ಹೂಗಾರ ಅವರು ಮುಖ್ಯಮಂತ್ರಿಗಳಿಗೆ ಗುರುವಾರ ಮನವಿ ಪತ್ರ ಸಲ್ಲಿಸಿದ್ದಾರೆ.
ಮನವಿ ಪತ್ರದಲ್ಲಿನ ಪ್ರಮುಖ ಬೇಡಿಕೆಗಳು :
1. ಹಿಂದುಳಿದ ಸಮುದಾಯಗಳ ಆರ್ಥಿಕ ಅಭಿವೃದ್ಧಿಗಾಗಿ ಸರ್ಕಾರವು ನೀಡಿರುವ 2ಎ ಪ್ರಮಾಣ ಪತ್ರವನ್ನು ಸರ್ಕಾರ ಹಿಂದೂ ಹೂಗಾರ ಎಂಬುದಾಗಿ ಸಮರ್ಪಕವಾಗಿ ಅನುಷ್ಠಾನಗೊಳಿ ಸರಳೀಕರಿಸುವುದು.
2. ಹೂಗಾರ ಸಮುದಾಯವನ್ನು ಎಸ್.ಟಿ. ಪಟ್ಟಿಗೆ ಸೇರ್ಪಡೆಗೊಳಿಸಬೇಕು.
3. ಸಮುದಾಯವನ್ನು ಸರ್ಕಾರ ಈಗಿರುವ ಹೂಗಾರರ ಅಭಿವೃದ್ಧಿ ನಿಗಮವನ್ನು ಪ್ರತ್ಯೇಕಗೊಳಿಸಿ ಅನುಷ್ಠಾನಗೊಳಿಸಿ ಸೂಕ್ತ ಅನುದಾನವನ್ನು ಕಲ್ಪಿಸುವ ಕಾರ್ಯ ಸರಕಾರ ಮಾಡಬೇಕು.
4. ಸಮಾಜದ ಬಾಂಧವರು ಹೂ ಬೆಳೆಯಲು ಜಮೀನು ಹಾಗೂ ಮಾರಾಟ ಮಾಡಲು ಸೂಕ್ತ ಮಾರುಕಟ್ಟೆ ಜತೆಗೆ ಹೂಗಳ ಸಂರಕ್ಷಣೆಗಾಗಿ ಪ್ರತ್ಯೇಕ ಶಿಥಲೀಕರಣ ಘಟಕ ಸ್ಥಾಪಿಸಬೇಕು.
5. ರಾಜ್ಯದ ಎಲ್ಲಾ ಬಸ್ ನಿಲ್ದಾಣಗಳಲ್ಲಿ ಹೂಗಾರ ಸಮುದಾಯದವರಿಗೆ ಹೂ ಮಾರಾಟ ಮಾಡಲು ಮಳಿಗೆಗಳನ್ನು ತೆರೆಯಲು ಅವಕಾಶ ಮಾಡಿಕೊಡಬೇಕು.
6. ಪುಷ್ಪ ಕೃಷಿಗೆ ಹಾಗೂ ರಫ್ತುಗೆ ಸರ್ಕಾರ ಆರ್ಥಿಕ ನೆರವು ನೀಡಬೇಕು.
7. ಹೂಗಾರ ಮಾದಯ್ಯನವರ ಜಯಂತಿಯನ್ನು ಸರಕಾರ ಅಧಿಕೃತವಾಗಿ ಘೋಷಣೆ ಮಾಡಿ, ಸರಕಾರದಿಂದ ಶರಣ ಮಾದಯ್ಯನವರಿಗೆ ಗೌರವ ಸೂಚಿಸುವ ಮಹತ್ವದ ಕಾರ್ಯ ಆಗಬೇಕು ಎಂದು ಹತ್ತಾರು ಬೇಡಿಕೆಗಳು ಸರಕಾರದ ಗಮನಕ್ಕೆ ತರುವ ಮಹತ್ವದ ಕೆಲಸ *ಶ್ರೀ ಶಂಕರ್ ಹೂಗಾರ* ಸರ್ ಮಾಡಿದ್ದಾರೆ.
ಈ ಕುರಿತು ಮಾಹಿತಿ ನೀಡಿದ ಅವರು, ರಾಜ್ಯದಲ್ಲಿ ಹೂಗಾರ ಸಮುದಾಯಕ್ಕೆ ಸರಕಾರದ ಸಹಾಯ ಹಸ್ತ ಅವಶ್ಯಕತೆ ಹೆಚ್ಚಿದೆ. ಕಳೆದ ಅನೇಕ ವರ್ಷಗಳಿಂದ ಸಮಾಜದ ಜನರಿಗಾಗಿ ಸಂಘಟನೆ ಹೋರಾಟ ಮಾಡಿಕೊಂಡು ಬರುತ್ತಿದ್ದು, ಹೂಗಾರ ಸಮಾಜಕ್ಕೆ ಸಾಮಾಜಿಕ ನ್ಯಾಯನೀಡುವಂತೆ ಮನವಿ ಮಾಡಲಾಗಿದೆ ಎಂದು ತಿಳಿಸಿದ್ದಾರೆ.
ದಿನಾಂಕ: 12-02-2026
ಎಲ್ಲ ಗ್ರಾಮ, ತಾಂಡಾಗಳಿಗೆ ಸ್ಮಶಾನಭೂಮಿ ಒದಗಿಸಿ: ಶಾಸಕ ಪ್ರಭು ಚವ್ಹಾಣ
*ಸ್ಮಶಾನ ಭೂಮಿ ಕೊರತೆಯ ಬಗ್ಗೆ ಅಧಿವೇಶನದಲ್ಲಿ ಧ್ವನಿ ಎತ್ತಿದ ಶಾಸಕರು* *ಎಲ್ಲ ಗ್ರಾಮ, ತಾಂಡಾಗಳಿಗೆ ಸ್ಮಶಾನ…
















