ಆದಿವಾಸಿ ಕುಟುಂಬಕ್ಕೆ ದವಸ ಧಾನ್ಯ ವಿತರಣೆ.
ಮಡಿಕೇರಿಃ ಚಾಮರಾಜನಗರ ಜಿಲ್ಲೆಯಿಂದ ಕೊಡಗು ಜಿಲ್ಲೆಗೆ ಕೂಲಿ ಅರಸಿಕೊಂಡು ಬಂದಿರುವ ಆದಿವಾಸಿ 75 ಕುಟುಂಬಗಳ 159 ಜನರು ಲಾಕ್ ಡೌನ್ ನಿಂದ ಸಂಕಷ್ಟಕ್ಕೊಳಗಾಗಿದ್ದು, ಈ ಕುಟುಂಬಗಳಿಗೆ ಕೊಡಗು ಜಿಲ್ಲೆಯ ಗಿರಿಜನ ಕಲ್ಯಾಣ ಇಲಾಖೆಯಿಂದ ಪ್ರತೀ ಕುಟುಂಬಕ್ಕೆ 08 ಕೆ.ಜಿ ಅಕ್ಕಿ, 03 ಕೆ.ಜಿ ಬೇಳೆ, 01 ಕೆ.ಜಿ ಸಕ್ಕರೆ, 01 ಕೆ.ಜಿ ಬೆಲ್ಲ, ಕಡಲೆ ಕಾಳು, ಹುರುಳಿಕಾಳು, 30 ಮೊಟ್ಟೆ, 02 ಲೀ. ಅಡುಗೆ ಎಣ್ಣೆ, 500 ಗ್ರಾಂ ತುಪ್ಪ ಗಳನ್ನೊಳಗೊಂಡ ಎರಡೆರಡು ಆಹಾರದ ಕಿಟ್ ಗಳನ್ನು ವಿತರಿಸಿ ಜನರ ಸಂಕಷ್ಟಕ್ಕೆ ಸ್ಪಂದಿಸಿದ್ದಾರೆ. ಅಧಿಕಾರಿಗಳ ಕಾರ್ಯಕ್ಕೆ ನೊಂದ ಕುಟುಂಗಳು ಸಂತಸ ವ್ಯಕ್ತಪಡಿಸಿದ್ದಾರೆ
Date: 29-03-2020
ಎಲ್ಲ ಗ್ರಾಮ, ತಾಂಡಾಗಳಿಗೆ ಸ್ಮಶಾನಭೂಮಿ ಒದಗಿಸಿ: ಶಾಸಕ ಪ್ರಭು ಚವ್ಹಾಣ
*ಸ್ಮಶಾನ ಭೂಮಿ ಕೊರತೆಯ ಬಗ್ಗೆ ಅಧಿವೇಶನದಲ್ಲಿ ಧ್ವನಿ ಎತ್ತಿದ ಶಾಸಕರು* *ಎಲ್ಲ ಗ್ರಾಮ, ತಾಂಡಾಗಳಿಗೆ ಸ್ಮಶಾನ…

















