ದಿನನಿತ್ಯ ಜೀವನದಲ್ಲಿ ಆಯುರ್ವೇದಕ್ಕೆ ಮಹತ್ವ ನೀಡಬೇಕು : ಡಾ| ಉಮಾಶಂಕರ
ದಿನನಿತ್ಯ ಜೀವನದಲ್ಲಿ ಆಯುರ್ವೇದಕ್ಕೆ ಮಹತ್ವ ನೀಡಬೇಕು : ಡಾ| ಉಮಾಶಂಕರ
ಕಮಲಾಪೂರ್: ಮನುಷ್ಯನ ಜೀವನಕ್ಕೆ ಆಯುರ್ವೇದ ಔಷಧಿಗಳ ಮಹತ್ವದಾಗಿದ್ದು, ಅವುಗಳ ಕುರಿತು ಇಂದಿನ ಜನರು ತಿಳಿದುಕೊಳ್ಳಬೇಕಾಗಿದೆ. ಮನೆಯಲ್ಲಿನ ಅನೇಕ ಔಷಧಿಗಳಿಂದ ಅನೇಕ ರೋಗಗಳು ತಡೆಯಬಹುದು ಎಂದು ಡಾ| ಉಮಾಶಂಕರ ಹಿರೇಮಠ ತಿಳಿಸಿದರು.
ಕಲಬುರ್ಗಿ ಜಿಲ್ಲೆಯ ಕಮಲಾಪೂರ್ ಪಟ್ಟಣದ ಸರಕಾರಿ ಆಯುರ್ವೇದ ಆಯುಷ್ ಆಸ್ಪತ್ರೆಯ ವತಿಯಿಂದ ಸರ್ಕಾರಿ ಕನ್ಯ ಪೌಢಶಾಲೆಯಲ್ಲಿ ಏರ್ಪಡಿಸಿದ 9ನೇ ರಾಷ್ಟಿçÃಯ ಆಯುರ್ವೇದ ದಿನಾಚರಣಿ ನಿಮಿತ್ಯ ಜಾಗತಿ, ಆರೋಗಕ್ಕಾಗಿ ಆಯುರ್ವೇದ ಆಯುಷ್ಕಾಗಳ ಕುರಿತು ಅವರು ಮಾತನಾಡಿದರು.
ಇಂದಿನ ದಿನಗಳಲ್ಲಿನ ಆಹಾರ ಪದ್ಧತಿ ಬದಲಾಗಿದೆ. ಗುಣಮಟ್ಟದ ಆಹಾರ ದೊರೆಯದೆ ಅನೇಕ ಆರೋಗ್ಯ ಸಮಸ್ಯೆಗಳು ಜನರಿಗೆ ಕಾಡುತ್ತಿವೆ. ಆಧುನೀಕ ಭರಾಟೆಯಲ್ಲಿ ನಾವು ನಮ್ಮ ಆರೋಗ್ಯದ ಕುರಿತು ಜಾಗೃತಿ ವಹಿಸಬೇಕಾಗಿದೆ. ಯಾವದನ್ನು ಸೇವಿಸದರೆ ಏನಾಗುತ್ತದೆ ಎಂಬುವುದು ಕೂಡ ತಿಳಿದುಕೊಳ್ಳಬೇಕು. ಮನುಷ್ಯನ ಜೀವನದಲ್ಲಿ ಆಯುರ್ವೇ ಪದ್ಧತಿ ಅಳವಡಿಸಿಕೊಂಡರೆ ದಿರ್ಘ ಆಯುಸ್ಸು, ಉತ್ತಮ ಜೀವನಕ್ಕೆ ಸಹಾರಿ ಆಗುತ್ತದೆ ಎಂದರು. ಇದೇ ಸಂದರ್ಭದಲ್ಲಿ ಡಾ| ಮುಕುಂದ ಕುಲಕರ್ಣಿ ಮಾತನಾಡಿ ಆಯುರ್ವೇದ ಕುರಿತು ವಿಷೇಶ ಉಪನ್ಯಾಸ ನೀಡಿದರು. ಕಾಲೇಜಿನ ಪ್ರಾಚಾರ್ಯರು ಸಿಬ್ಬಂದಿ ವರ್ಗದವರು ಹಾಗೂ ನೂರಾರು ವಿದ್ಯಾರ್ಥಿಗಳು ಭಾಗವಹಿಸಿದರು.
Date: 24-10-2024 ;
ಎಲ್ಲ ಗ್ರಾಮ, ತಾಂಡಾಗಳಿಗೆ ಸ್ಮಶಾನಭೂಮಿ ಒದಗಿಸಿ: ಶಾಸಕ ಪ್ರಭು ಚವ್ಹಾಣ
*ಸ್ಮಶಾನ ಭೂಮಿ ಕೊರತೆಯ ಬಗ್ಗೆ ಅಧಿವೇಶನದಲ್ಲಿ ಧ್ವನಿ ಎತ್ತಿದ ಶಾಸಕರು* *ಎಲ್ಲ ಗ್ರಾಮ, ತಾಂಡಾಗಳಿಗೆ ಸ್ಮಶಾನ…
















