Home ನಿಮ್ಮ ಜಿಲ್ಲೆ ಬೀದರ ಕಡಿಮೆ ಬಡ್ಡಿದರದ ಗೃಹ, ಕಾರ್ ಸಾಲ ಮೇಳದ ಸದುಪಯೋಗ ಪಡೆದುಕೊಳ್ಳಿ

ಕಡಿಮೆ ಬಡ್ಡಿದರದ ಗೃಹ, ಕಾರ್ ಸಾಲ ಮೇಳದ ಸದುಪಯೋಗ ಪಡೆದುಕೊಳ್ಳಿ

ಕಡಿಮೆ ಬಡ್ಡಿದರದ ಗೃಹ, ಕಾರ್ ಸಾಲ
ಮೇಳದ ಸದುಪಯೋಗ ಪಡೆದುಕೊಳ್ಳಿ
ಬೀದರ: ತಮ್ಮ ಕನಸಿನ ಮನೆ ಮತ್ತು ವಾಹನ ಖರೀದಿಸಲು ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ಒಂದಾದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಬ್ಯಾಂಕ್ ನವರು ಹಮ್ಮಿಕೊಂಡಿರುವ ಸಾಲ ಮೇಳದ ಸದುಪಯೋಗ ಪಡೆದುಕೊಳ್ಳಬೇಕು ಎಂದು ಬೀದರ ಜಿಲ್ಲಾಧಿಕಾರಿ ರಾಮಚಂದ್ರನ್ ಆರ್  ತಿಳಿಸಿದರು.

ಜನವರಿ 16ರಂದು ಡಿಸಿ ಕಚೇರಿ ಹತ್ತಿರದ ಎಸ್.ಬಿ.ಐ. ಶಾಖೆಯಲ್ಲಿ ನಡೆದ “ಬ್ರಹತ್ ಗ್ರಹಸಾಲ ಮತ್ತು ಕಾರ್ ಸಾಲ ಮೇಳ”ಕ್ಕೆ ಚಾಲನೆ ನೀಡಿ ಮಾತನಾಡಿದರು.
ನಮ್ಮ ರಾಷ್ಟ್ರದ ಅತಿದೊಡ್ಡ ಬ್ಯಾಂಕ್ ಆಗಿರುವ ಎಸ್‌ಬಿಐ ಗ್ರಾಹಕರಿಗೆ ಈ ತರಹದ ಸೌಲಭ್ಯಗಳನ್ನು ಹೆಚ್ಚಿನ ರಿತಿಯಲ್ಲಿ ನಿಡುತ್ತದೆ. ದೇಶದ ಅಭಿವೃದ್ಧಿಗೆ ಬ್ಯಾಂಕ್ ಸೇವೆ ಅತಿದೊಡ್ಡ ಕೊಡುಗೆ ಎಂದರು. ಗ್ರಾಹಕರು ಕೂಡ ಸಾಲ ಮರುಪಾವತಿ ಮತ್ತು ಉಳಿತಾಯಕ್ಕೆ ಹೆಚ್ಚಿನ ಮಹತ್ವ ನೀಡಬೇಕೆಂದರು.

ಶಾಖಾ ವ್ಯವಸ್ಥಾಪಕ ಅನಿಲಕುಮಾರ ಮಾತನಾಡಿ, ಗ್ರಹ ಸಾಲಕ್ಕೆ ಅತಿ ಕಡಿಮೆ ಅಂದರೆ ಶೇ.6.80 ಬಡ್ಡಿದರ ಮತ್ತು ಕಾರ್ ಸಾಲಕ್ಕೆ ಶೇ.7.50 ಬಡ್ಡಿದರ ಇರಲಿದೆ. ಅಲ್ಲದೆ ಆರ್ಹ ಫಲಾನುಭವಿಗಳಿಗೆ ಗ್ರಹ ಸಾಲಕ್ಕೆ “ಪ್ರಧಾನ ಮಂತ್ರಿ ಅವಾಸ್ ಯೋಜನೆ “ಅಡಿಯಲ್ಲಿ ಸುಮಾರು ರೂ.2.68 ಲಕ್ಷ ದ ವರೆಗೆ ಸಹಾಯಧನ ದೊರೆಯಲಿದೆ. ಮನೆ ಖರೀದಿ , ಸೈಟ್ ಖರೀದಿ ಮತ್ತು ಕಟ್ಟಡ ನಿರ್ಮಾಣ , ಈಗಾಗಲೇ ಬೇರೆ ಬ್ಯಾಂಕ್ ನಲ್ಲಿ ಇರುವ ಗ್ರಹಸಾಲ ಇತ್ಯಾಧಿ ಸೌಲಭ್ಯಗಳನ್ನು ಈ ಸಂಧರ್ಭದಲ್ಲಿ ಒದಗಿಸಲಾಗುತ್ತಿದೆ ಎಂದು  ತಿಳಿಸಿದರು.
ನಂತರ ಪ್ರಾದೇಶಿಕ ವ್ಯವಸ್ಥಾಪಕ ಪ್ರದೀಪ ಕುಮಾರ್ ಗ್ರಾಹಕರಿಗೆ ಸಾಲ ಮಂಜೂರಾತಿ ಪತ್ರ ವಿತರಿಸಿದರು.
ಸ್ವಾಗತ ಮತ್ತು ಪ್ರಾಸ್ತಾವಿಕವಾಗಿ ಉಪ ವ್ಯವಸ್ಥಾಪಕ ರಮೇಶ ಶಿಂದೆ ಮಾತನಾಡಿದರು. ಶ್ರೀನಿವಾಸ ಬಾಬು ವಂದಿಸಿದರು. ಅಧಿಕಾರಿ ಶಿವರಾಜ್   ನಿರೂಪಿಸಿದರು. ಬ್ಯಾಂಕ್ ಅಧಿಕಾರಿ ಶಿವಪ್ರಸಾದ್ ಉಪಸ್ಥಿತರಿದ್ದರು.
Date: 17-01-2021 : www.kknewsonline.in

Check Also

ಹೂಗಾರ ಸಮಾಜ ಸಂಘಟನೆ: ಅಶೋಕ ಹೂಗಾರ ವಾರಕಾಲ ಸಂಚಾರ

ಬೀದರ: ಬೀದರ‌ ಜಿಲ್ಲೆಯಲ್ಲಿ ಹೂಗಾರ ಸಮಾಜವನ್ನು ಸಂಘಟಿಸುವ ನಿಟ್ಟಿನಲ್ಲಿ ಅಖಿಲ ಕರ್ನಾಟಕ ಹೂಗಾರ ಸೇವಾ ಮಾಹಾ …