Home ನಿಮ್ಮ ಜಿಲ್ಲೆ ಬೀದರ ಗ್ರಾಪಂ ಅಧ್ಯಕ್ಷ, ಉಪಾಧ್ಯಕ್ಷರ ಮೀಸಲಾತಿ ಹಂಚಿಕೆ

ಗ್ರಾಪಂ ಅಧ್ಯಕ್ಷ, ಉಪಾಧ್ಯಕ್ಷರ ಮೀಸಲಾತಿ ಹಂಚಿಕೆ

ಬಸವಕಲ್ಯಾಣದ 31, ಹುಲಸೂರನ 7 ಗ್ರಾಮ ಪಂಚಾಯತಿಗಳ ಮೀಸಲು ನಿಗದಿಗೊಳಿಸಿ ಆದೇಶಿಸಿದ ಜಿಲ್ಲಾಧಿಕಾರಿಗಳಾದ ರಾಮಚಂದ್ರನ್ ಆರ್.

ಬೀದರ: ರಾಜ್ಯ ಚುನಾವಣಾ ಆಯೋಗವು 2020ರ ಗ್ರಾಮ ಪಂಚಾಯತಿಗಳ ತಾಲ್ಲೂಕುವಾರು ನಿಗದಿಪಡಿಸಿರುವ ಅಧ್ಯಕ್ಷ ಹಾಗು ಉಪಾಧ್ಯಕ್ಷರ ಮಿಸಲಾತಿಯನ್ನು ಗ್ರಾಮ ಪಂಚಾಯಿತಿವಾರು ನಿಯಮಾನುಸಾರ ಮರು ಹಂಚಿಕೆ ಮಾಡುವ ಪ್ರಕ್ರಿಯೆಯು ಜನವರಿ 18 ರಂದು ಬಸವಕಲ್ಯಾಣ ನಗರದಲ್ಲಿ ಸುಗಮವಾಗಿ ನಡೆಯಿತು.


ಜಿಲ್ಲಾ ಚುನಾವಣಾಧಿಕಾರಿಗಳು ಹಾಗೂ ಜಿಲ್ಲಾಧಿಕಾರಿಗಳಾದ ರಾಮಚಂದ್ರನ್ ಆರ್ ಅವರು, ರಾಜ್ಯ ಚುನಾವಣಾ ಆಯೋಗದ ಮಾರ್ಗಸೂಚಿಗಳನ್ವಯ ಬಸವಕಲ್ಯಾಣ ತಾಲೂಕಿನ 31 ಹಾಗು ಹುಲಸೂರ ತಾಲೂಕಿನ 7 ಗ್ರಾಮ ಪಂಚಾಯತಿಗಳಿಗೆ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಗಳ ಮೀಸಲಾತಿಯನ್ನು ಬಸವಕಲ್ಯಾಣ ತಾಲೂಕಿನ ಬಸವಕಲ್ಯಾಣ ಥೇರ್ ಮೈದಾನದ ಸಭಾಭವನದಲ್ಲಿ ಗ್ರಾಮಪಂಚಾಯತ್ ನೂತನ ಸದಸ್ಯರ ಸಭೆ ಜರುಗಿಸಿ, ಅವರ ಸಮ್ಮುಖದಲ್ಲಿಯೇ ಮೀಸಲಾತಿ ನಿಗದಿಪಡಿಸಿ ಪ್ರಕಟಿಸಿದರು.

ಬಸವಕಲ್ಯಾಣ ತಾಲೂಕು:
೧.ಬೆಟಬೆಳಕುಂದಾ: ಸಾಮಾನ್ಯ
ಅಧ್ಯಕ್ಷ, ಪರಿಶಿಷ್ಟ ಪಂಗಡ ಮಹಿಳೆ ಉಪಾಧ್ಯಕ್ಷ,
೨.ನಾರಾಯಣಪುರ: ಸಾಮಾನ್ಯ ಅಧ್ಯಕ್ಷ, ಪರಿಶಿಷ್ಟ ಜಾತಿ ಮಹಿಳೆ ಉಪಾಧ್ಯಕ್ಷ,
೩.ಯರಬಾಗ್: ಸಾಮಾನ್ಯ ಅಧ್ಯಕ್ಷ, ಪರಿಶಿಷ್ಟ ಜಾತಿ ಮಹಿಳೆ ಉಪಾಧ್ಯಕ್ಷ,
೪.ಖೇಡ್ರಾ(ಬಿ): ಸಾಮಾನ್ಯ ಅಧ್ಯಕ್ಷ, ಪರಿಶಿಷ್ಟ ಜಾತಿ ಮಹಿಳೆ ಉಪಾಧ್ಯಕ್ಷ
೫.ಚಂಡಕಾಪೂರ: ಸಾಮಾನ್ಯ ಅಧ್ಯಕ್ಷ, ಪರಿಶಿಷ್ಟ ಜಾತಿ ಮಹಿಳೆ ಉಪಾಧ್ಯಕ್ಷ.
೬.ಮುಡಬಿ: ಸಾಮಾನ್ಯ ಅಧ್ಯಕ್ಷ, ಪರಿಶಿಷ್ಟ ಜಾತಿ ಮಹಿಳೆ ಉಪಾಧ್ಯಕ್ಷ.
೭.ಎಕಲೂರ: ಸಾಮಾನ್ಯ ಅಧ್ಯಕ್ಷ, ಪರಿಶಿಷ್ಟ ಪಂಗಡ ಮಹಿಳೆ ಉಪಾಧ್ಯಕ್ಷ.
೮.ಕಿಟ್ಟಾ: ಸಾಮಾನ್ಯ ಮಹಿಳೆ ಅಧ್ಯಕ್ಷ, ಪರಿಶಿಷ್ಟ ಜಾತಿ ಉಪಾಧ್ಯಕ್ಷ
೯.ಪರತ್ತಾಪೂರ: ಸಾಮಾನ್ಯ ಮಹಿಳೆ ಅಧ್ಯಕ್ಷ, ಪರಿಶಿಷ್ಟ ಜಾತಿ ಉಪಾಧ್ಯಕ್ಷ.
೧೦.ಇಸ್ಲಾಂಪೂರ: ಸಾಮಾನ್ಯ ಮಹಿಳೆ ಅಧ್ಯಕ್ಷ, ಪರಿಶಿಷ್ಟ ಪಂಗಡ ಮಹಿಳೆ ಉಪಾಧ್ಯಕ್ಷ.
೧೧.ಯರಂಡಿ: ಸಾಮಾನ್ಯ ಮಹಿಳೆ ಅಧ್ಯಕ್ಷ, ಪರಿಶಿಷ್ಟ ಜಾತಿ ಉಪಾಧ್ಯಕ್ಷ.
೧೨.ರಾಜೋಳಾ: ಸಾಮಾನ್ಯ ಮಹಿಳೆ ಅಧ್ಯಕ್ಷ , ಪರಿಶಿಷ್ಟ ಪಂಗಡ ಉಪಾಧ್ಯಕ್ಷ.
೧೩.ಭೋಸಗಾ: ಸಾಮಾನ್ಯ ಮಹಿಳೆ ಅಧ್ಯಕ್ಷ,ಪರಿಶಿಷ್ಟ ಜಾತಿ ಉಪಾಧ್ಯಕ್ಷ.
೧೪.ರಾಜ್ಜೇಶ್ವರ: ಪರಿಶಿಷ್ಟ ಜಾತಿ ಅಧ್ಯಕ್ಷ, ಸಾಮಾನ್ಯ ಮಹಿಳೆ ಉಪಾಧ್ಯಕ್ಷ.
೧೫.ಅಳಗೂಡ್: ಪರಿಶಿಷ್ಟ ಜಾತಿ ಅಧ್ಯಕ್ಷ,ಪರಿಶಿಷ್ಟ ಪಂಗಡ ಮಹಿಳೆ ಉಪಾಧ್ಯಕ್ಷ.
೧೬.ಉಜಳಂಬ: ಪರಿಶಿಷ್ಟ ಜಾತಿ ಅಧ್ಯಕ್ಷ, ಸಾಮಾನ್ಯ ಉಪಾಧ್ಯಕ್ಷ.
೧೭.ಹಣಮಂತ ವಾಡಿ(ಆರ್):ಸಾಮಾನ್ಯ ಅಧ್ಯಕ್ಷ, ಸಾಮಾನ್ಯ ಮಹಿಳೆ ಉಪಾಧ್ಯಕ್ಷ
೧೮.ಧನ್ನೂರಾ(ಕೆ): ಪರಿಶಿಷ್ಟ ಜಾತಿ ಮಹಿಳೆ ಅಧ್ಯಕ್ಷ, ಸಾಮಾನ್ಯ ಉಪಾಧ್ಯಕ್ಷ.
೧೯.ತಡೋಳಾ: ಪರಿಶಿಷ್ಟ ಜಾತಿ ಮಹಿಳೆ ಅಧ್ಯಕ್ಷ, ಸಾಮಾನ್ಯ ಉಪಾಧ್ಯಕ್ಷ.
೨೦.ಹರಕೂಡ: ಪರಿಶಿಷ್ಟ ಜಾತಿ ಮಹಿಳೆ ಅಧ್ಯಕ್ಷ, ಪರಿಶಿಷ್ಟ ಪಂಗಡ ಉಪಾಧ್ಯಕ್ಷ.
೨೧.ಕಲಕೋರಾ: ಪರಿಶಿಷ್ಟ ಜಾತಿ ಮಹಿಳೆ ಅಧ್ಯಕ್ಷ , ಸಾಮಾನ್ಯ ಉಪಾಧ್ಯಕ್ಷ.
೨೨.ಲಾಡವಂತಿ: ಪರಿಶಿಷ್ಟ ಜಾತಿ ಮಹಿಳೆ ಅಧ್ಯಕ್ಷ, ಸಾಮಾನ್ಯ ಉಪಾಧ್ಯಕ್ಷ.
೨೩.ಮೋರಖಂಡಿ: ಪರಿಶಿಷ್ಟ ಪಂಗಡ ಅಧ್ಯಕ್ಷ, ಸಾಮಾನ್ಯ ಮಹಿಳೆ ಉಪಾಧ್ಯಕ್ಷ.
೨೪.ಮಂಠಾಳ: ಪರಿಶಿಷ್ಟ ಪಂಗಡ ಅಧ್ಯಕ್ಷ, ಸಾಮಾನ್ಯ ಮಹಿಳೆ ಉಪಾಧ್ಯಕ್ಷ.
೨೫.ಕೋಹಿನೂರ: ಪರಿಶಿಷ್ಟ ಪಂಗಡ ಅಧ್ಯಕ್ಷ, ಸಾಮಾನ್ಯ ಮಹಿಳೆ ಉಪಾಧ್ಯಕ್ಷ.
೨೬.ಚಿಕ್ಕಣೇಗಾಂವ್: ಪರಿಶಿಷ್ಟ ಪಂಗಡ ಅಧ್ಯಕ್ಷ, ಸಾಮಾನ್ಯ ಮಹಿಳೆ ಉಪಾಧ್ಯಕ್ಷ.
೨೭.ನೀರಗುಡಿ: ಪರಿಶಿಷ್ಟ ಪಂಗಡ ಮಹಿಳೆ ಅಧ್ಯಕ್ಷ, ಪರಿಶಿಷ್ಟ ಪಂಗಡ ಉಪಾಧ್ಯಕ್ಷ.
೨೮.ಸಸ್ತಾಪೂರ: ಪರಿಶಿಷ್ಟ ಪಂಗಡ ಮಹಿಳೆ ಅಧ್ಯಕ್ಷ, ಪರಿಶಿಷ್ಟ ಪಂಗಡ ಉಪಾಧ್ಯಕ್ಷ.
೨೯.ಗುಂಡುರ್: ಪರಿಶಿಷ್ಟ ಪಂಗಡ ಅಧ್ಯಕ್ಷ, ಸಾಮಾನ್ಯ ಉಪಾಧ್ಯಕ್ಷ.
೩೦.ಘೊಟಾಳಾ: ಪರಿಶಿಷ್ಟ ಪಂಗಡ ಮಹಿಳೆ ಅಧ್ಯಕ್ಷ, ಪರಿಶಿಷ್ಟ ಪಂಗಡ ಮಹಿಳೆ ಉಪಾಧ್ಯಕ್ಷ.
೩೧.ಬೆಟ್ ಗೇರಾ: ಪರಿಶಿಷ್ಟ ಪಂಗಡ ಮಹಿಳೆ ಅಧ್ಯಕ್ಷ, ಸಾಮಾನ್ಯ ಉಪಾಧ್ಯಕ್ಷ.
*ಹುಲಸೂರ ತಾಲೂಕು:*
೧ ಹುಲಸೂರ ಸಾಮಾನ್ಯ ಅಧ್ಯಕ್ಷ, ಸಾಮಾನ್ಯ ಮಹಿಳೆ ಉಪಾಧ್ಯಕ್ಷ,
೨ ಮೀರಕಲ್ ಸಾಮಾನ್ಯ ಅಧ್ಯಕ್ಷ, ಪರಿಶಿಷ್ಟ ಪಂಗಡ ಮಹಿಳೆ ಉಪಾಧ್ಯಕ್ಷ,
೩ ಬೇಲೂರ ಸಾಮಾನ್ಯ ಮಹಿಳೆ ಅಧ್ಯಕ್ಷ, ಪರಿಶಿಷ್ಟ ಜಾತಿ ಮಹಿಳೆ ಉಪಾಧ್ಯಕ್ಷ,
೪ ಗೋರತಾ ಬಿ ಸಾಮಾನ್ಯ ಮಹಿಳೆ ಅಧ್ಯಕ್ಷ, ಪರಿಶಿಷ್ಟ ಜಾತಿ ಉಪಾಧ್ಯಕ್ಷ,
೫ ತೊಗ್ಲೂರ್ ಪರಿಶಿಷ್ಟ ಜಾತಿ ಅಧ್ಯಕ್ಷ, ಸಾಮಾನ್ಯ ಮಹಿಳೆ ಉಪಾಧ್ಯಕ್ಷ,
೬ ಗಡಿಗೊಂದಗಾಂವ ಪರಿಶಿಷ್ಟ ಜಾತಿ ಮಹಿಳೆ ಅಧ್ಯಕ್ಷ, ಸಾಮಾನ್ಯ ಉಪಾಧ್ಯಕ್ಷ
೭ ಮುಚಲಾಂಬ ಪರಿಶಿಷ್ಟ ಪಂಗಡ ಮಹಿಳೆ ಅಧ್ಯಕ್ಷ, ಸಾಮಾನ್ಯ ಉಪಾಧ್ಯಕ್ಷ

Date:18-01-2021 : www.kknewsonline.in

Check Also

ಹೂಗಾರ ಸಮಾಜ ಸಂಘಟನೆ: ಅಶೋಕ ಹೂಗಾರ ವಾರಕಾಲ ಸಂಚಾರ

ಬೀದರ: ಬೀದರ‌ ಜಿಲ್ಲೆಯಲ್ಲಿ ಹೂಗಾರ ಸಮಾಜವನ್ನು ಸಂಘಟಿಸುವ ನಿಟ್ಟಿನಲ್ಲಿ ಅಖಿಲ ಕರ್ನಾಟಕ ಹೂಗಾರ ಸೇವಾ ಮಾಹಾ …