ಅಕ್ರಮ ಚಟುವಟಿಕೆಗಳ ಮೇಲೆ ಜಿಲ್ಲಾ ಪೊಲೀಸ್ ಹದ್ದಿನ ಕಣ್ಣು..!
ಅಕ್ರಮ ಚಟುವಟಿಕೆಗಳ ಮೇಲೆ ಜಿಲ್ಲಾ ಪೊಲೀಸ್ ಹದ್ದಿನ ಕಣ್ಣು..!
ಬೀದರ: ತೆಲಂಗಾಣಾದಿಂದ ಬೀದರ ಜಿಲ್ಲೆಗೆ ಗಾಂಜಾ ಸಾಗಿಸುತ್ತಿರುವ ಕುರಿತು ಖಚಿತ ಮಾಹಿತಿ ಹಿನ್ನೆಲೆಯಲ್ಲಿ ಬೀದರ ಸೈಬರ್ ಕ್ರೈಮ್ ಪೊಲೀಸರು ದಾಳಿ ನಡೆಸಿದ್ದು, 60ಸಾವಿರ ಮೌಲ್ಯದ 12 ಕೆ.ಜಿ ಗಾಂಜಾ ಹಾಗೂ ಎರೆಡು ದ್ವಿಚಕ್ರವಾಹನ ಜಪ್ತಿಮಾಡಿಕೊಂಡ ಘಟನೆ ನಡೆದಿದೆ.
ಈ ಘಟನೆ ಶನಿವಾರ ರಾತ್ರಿ ಔರಾದ ತಾಲೂಕಿನ ಚಿಕ್ಲಿ ಬಾಜಿರಾಂ ತಾಂಡಾ ಬಳಿ ನಡೆದಿದೆ. ಅಕ್ರಮ ಚಟುವಟಿಕೆಗಳ ಮೇಲೆ ಜಿಲ್ಲಾ ಪೊಲೀಸ್ ಹದ್ದಿನ ಕಣ್ಣಿಟ್ಟಿದ್ದಾರೆ.
https://play.google.com/store/apps/details?id=kknewsonline.in
ವಿವಿಧಡೆ ಪೊಲೀಸ್ ಅಧಿಕಾರಿಗಳ ಭೇಟಿ:-
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಿ.ಎಲ್ ನಾಗೇಶ ಸೇರಿದಂತೆ ಉನ್ನತ ಹಂತದ ಅಧಿಕಾರಿಗಳು ಜಿಲ್ಲೆಯ ವಿವಿಧಡೆ ಭೇಟಿನೀಡಿ ಅಕ್ರಮ ಚಟುವಟಿಗಳ ಕುರಿತು ಮಾಹಿತಿ ಪಡೆದುಕೊಂಡಿದ್ದಾರೆ.
ಔರಾದ ತಾಲೂಕಿನ ವಿವಿಧ ತಾಂಡಾಗಳಲ್ಲಿ ಗಾಂಜಾ ಬೆಳೆಸುವುವರ, ಸಾಗಾಟ ಮತ್ತು ಮಾರಾಟ ಕುರಿತು ದೂರುಗಳು ಬಂದ ಹಿನ್ನಲೆಯಲ್ಲಿ ರವಿವಾರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಿ.ಎಲ್ ನಾಗೇಶ ಖುದ್ದು ಭೇಟಿನೀಡಿ ಪರಿಶೀಲನೆ ನಡೆಸಿದರು. ವಿವಿಧ ಗ್ರಾಮಕ್ಕೆ ಭೇಟಿನೀಡಿದ ಸಂದರ್ಭದಲ್ಲಿ ಹಳೆ ಆರೋಪಿಗಳ ಬಗ್ಗೆ ಮಾಹಿತಿ ಪಡೆದುಕೊಂಡಿದ್ದಾರೆ. ಗಾಂಜಾ ಸಾಗಾಟ ಹಾಗೂ ಸಂಗ್ರ ಅಪರಾಧವಾಗಿದ್ದು, ಈ ಕೃತ್ಯದಲ್ಲಿ ತೊಡಗದಂತೆ ಎಚ್ಚರಿಕೆ ನೀಡಿದ್ದಾರೆ. ಸದ್ಯ ಜಿಲ್ಲೆಯ ವಿವಿಧೆಡೆ ಪರಿಶೀಲನೆ ನಡೆದಿದ್ದು, ಈ ವೇಳೆ ಯಾವುದೇ ಗಾಂಜಾ ಜಪ್ತಿ ಆಗಿಲ್ಲ ಎಂದು ಪೊಲೀಸ್ ವರಿಷ್ಠಾಧಿಕಾರಿ ಮಾಹಿತಿ ನೀಡಿದ್ದಾರೆ.
![]()
ಹೂಗಾರ ಸಮಾಜ ಸಂಘಟನೆ: ಅಶೋಕ ಹೂಗಾರ ವಾರಕಾಲ ಸಂಚಾರ
ಬೀದರ: ಬೀದರ ಜಿಲ್ಲೆಯಲ್ಲಿ ಹೂಗಾರ ಸಮಾಜವನ್ನು ಸಂಘಟಿಸುವ ನಿಟ್ಟಿನಲ್ಲಿ ಅಖಿಲ ಕರ್ನಾಟಕ ಹೂಗಾರ ಸೇವಾ ಮಾಹಾ …
















