ಘೋಡವಾಡಿಯಲ್ಲಿ 3.5 ಕೆಜಿ ಗಾಂಜಾ ಜಪ್ತಿ
ಘೋಡವಾಡಿಯಲ್ಲಿ 3.5 ಕೆಜಿ ಗಾಂಜಾ ಜಪ್ತಿ
ಹುಮನಾಬಾದ: ತಾಲೂಕಿನ ಘೋಡವಾಡಿ ಗ್ರಾಮದಲ್ಲಿ ಗಾಂಜಾ ಮಾರಾಟದ ಖಚಿತ ಮಾಹಿತಿ ಹಿನ್ನೆಲೆಯಲ್ಲಿ ಪಿಎಸ್ಐ ರವಿಕಾಮಾರ ನೇತೃತ್ವದಲ್ಲಿ ದಾಳಿ ನಡೆಸಿ ವ್ಯಕ್ತಿಯೊಬ್ಬನನ್ನು ಬಂಧಿಸಲಾಗಿದೆ.
ಘೋಡವಾಡಿ ಗ್ರಾಮದ ಎಂ.ಡಿ ಗೌಸ್ ಬಂಧಿತ ಆರೋಪಿ. ಇತನಿಂದ 4970 ನಗದು ಹಣ ಹಾಗೂ 35 ಸಾವಿರ ಅಂದಾಜಿನ 3.5 ಕೆ.ಜಿ ಗಾಂಜ ಜಪ್ತಿಮಾಡಿಕೊಂಡಿದ್ದಾರೆ. ಗಾಂಜ ಖರೀದಿ ಮಾರಾಟ ಬಗ್ಗೆ ಪೊಲೀಸ್ ಅಧಿಕಾರಿಗಳು ತನಿಖೆ ನಡೆಸಿದ್ದಾರೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಿ.ಎಲ್ ನಾಗೇಶ ಮಾರ್ಗದರ್ಶನದಲ್ಲಿ ದಾಳಿ ನಡೆದಿದೆ. ಡಿವೈಎಸ್ಪಿ ಬಸವೇಶ್ವರ ಹೀರಾ, ಸಿಪಿಐ ಬಶವೇಶ್ವರ ಭಜಂತ್ರಿ, ಅಪರಾಧ ಪಿಎಸ್ಐ ಕಿರಣ ಸೇರಿದಂತೆ ಸಿಬ್ಬಂದಿಗಳು ಇದ್ದರು.
Date: 14-09-2020
ಹೂಗಾರ ಸಮಾಜ ಸಂಘಟನೆ: ಅಶೋಕ ಹೂಗಾರ ವಾರಕಾಲ ಸಂಚಾರ
ಬೀದರ: ಬೀದರ ಜಿಲ್ಲೆಯಲ್ಲಿ ಹೂಗಾರ ಸಮಾಜವನ್ನು ಸಂಘಟಿಸುವ ನಿಟ್ಟಿನಲ್ಲಿ ಅಖಿಲ ಕರ್ನಾಟಕ ಹೂಗಾರ ಸೇವಾ ಮಾಹಾ …
















