ಹೊಲದಲ್ಲಿ ದನಗಳ ಮೂಳೆಗಳು ಸಂಗ್ರಹ – ಪ್ರಕರಣ ದಾಖಲು
ಹೊಲದಲ್ಲಿ ದನಗಳ ಮೂಳೆಗಳು ಸಂಗ್ರಹ – ಪ್ರಕರಣ ದಾಖಲು
ಹುಮನಾಬಾದ: ತಾಲೂಕಿನ ಇಂದಿರಾನಗರ ಗ್ರಾಮದ ಹೊರ ಪ್ರದೇಶದಲ್ಲಿ ಖಾಸಗಿ ವ್ಯಕ್ತಿಯ ಹೊಲದಲ್ಲಿ ದನಗಳ ಕಡಿದ ರುಂಡ ಮತ್ತು ಎಲುಬುಗಳು ಶೇಖರಣೆಮಾಡಿ ಸುತ್ತಲ್ಲಿನ ಪ್ರದೇಶದಲ್ಲಿ ದುರ್ವಾಸನೆ ಹರಡಿಸುತ್ತಿರು ದೂರು ಹಿನ್ನೆಲೆಯಲ್ಲಿ ಪಿಎಸ್ಐ ರವಿಕುಮಾರ ನಾಯ್ಕೋಡಿ ಭೇಟಿನೀಡಿ ಪರಿಶಿಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
![]()
https://play.google.com/store/apps/details?id=kknewsonline.in
ಪ್ರಕರಣಕ್ಕೆ ಸಂಬಂಧಿಸಿದಂತೆ ಮಹಿತಾಬ ಸಾಬ್, ರಹಿಮಾನ ಖೂರೇಶಿ ಸೇರಿ ಒಟ್ಟು ನಾಲ್ಕು ಜನರ ವಿರುದ್ಧ ಪ್ರಕರಣ ದಾಖಲಾಗಿದೆ. ಗ್ರಾಮದ ಸರ್ವೇ ಸಂಖ್ಯೆ 136ರಲ್ಲಿ ದನಗಳ ಕಡಿದ ಮೂಳೆಗಳು ಹಾಗೂ ತಲೆಗಳು ಕಂಡುಬಂದಿದ್ದು, ಈ ಕುರಿತು ಪೊಲೀಸ್ ಅಧಿಕಾರಿಗಳು ಹೆಚ್ಚಿನ ತನಿಖೆ ನಡೆಸಿದ್ದಾರೆ. ಅಲ್ಲದೆ, ಸ್ಥಳದಲ್ಲಿ 5 ದನಗಳನ್ನು ರಕ್ಷಣೆ ಮಾಡಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಘಟನಾ ಸ್ಥಳಕ್ಕೆ ಸಿಪಿಐ ಮಲ್ಲಿಕಾರ್ಜುನ ಯಾತನೂರ್ ಹಾಗೂ ಪಶು ವೈದ್ಯ ಪ್ರಥ್ವೀರಾಜ ಘಟನಾಸ್ಥಳಕ್ಕೆ ಭೇಟಿನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಕುರಿತು ಹುಮನಾಬಾದ ಪೊಲೀಸ್ ಠಾಣೆಯಲ್ಲಿ ಪ್ರಕರಣದ ದಾಖಲಾಗಿದೆ.
Date:06-10-2020:
ಹೂಗಾರ ಸಮಾಜ ಸಂಘಟನೆ: ಅಶೋಕ ಹೂಗಾರ ವಾರಕಾಲ ಸಂಚಾರ
ಬೀದರ: ಬೀದರ ಜಿಲ್ಲೆಯಲ್ಲಿ ಹೂಗಾರ ಸಮಾಜವನ್ನು ಸಂಘಟಿಸುವ ನಿಟ್ಟಿನಲ್ಲಿ ಅಖಿಲ ಕರ್ನಾಟಕ ಹೂಗಾರ ಸೇವಾ ಮಾಹಾ …

















