Home ಅಂಕಣಗಳು ಚಿಂತನೆಗಳು ಕಲ್ಯಾಣ ವಿಧಾನ ಸಭಾ ಉಪ ಚುನಾವಣೆಗೆ ಉಮೇಶ ಬಿರ್ಬಿಟೆ ಅಟ್ಟೂರ್ ಸಜ್ಜು..?

ಕಲ್ಯಾಣ ವಿಧಾನ ಸಭಾ ಉಪ ಚುನಾವಣೆಗೆ ಉಮೇಶ ಬಿರ್ಬಿಟೆ ಅಟ್ಟೂರ್ ಸಜ್ಜು..?

ಕಲ್ಯಾಣ ವಿಧಾನ ಸಭಾ ಉಪ ಚುನಾವಣೆಗೆ ಉಮೇಶ ಬಿರ್ಬಿಟೆ ಅಟ್ಟೂರ್ ಸಜ್ಜು..?

ಸದ್ಯ ಭಾರತೀಯ ಆಹಾರ ನಿಗಮ ಮಂಡಳಿ ಸದಸ್ಯರಾಗಿರುವ ಉಮೇಶ ಬಿಜೆಪಿಯಿಂದ ಪೈಪೋಟಿ..?

ಬಸವಕಲ್ಯಾಣ: ಶಾಸಕ ಬಿ.ನಾರಾಯಣರಾವ ಅವರ ನಿಧನದ ನಂತರ ಬಸವಕಲ್ಯಾಣ ಕ್ಷೇತ್ರದಲ್ಲಿ ರಾಜಕೀಯ ಚುಟವಟಿಕೆಗಳು ಶುರುವಾಗಿದ್ದು, ಮುಂದಿನ ದಿನಗಳಲ್ಲಿ ನಡೆಯಲ್ಲಿರುವ ಮರು ಚುನಾವಣೆಯಲ್ಲಿ ಸ್ಪರ್ಧೆ ನಡೆಸಲು ಇದೀಗ ಹೊಸ ಮುಖ್ಯಗಳು ಹೆಚ್ಚಾಗಿ ಕಂಡು ಬರುತ್ತಿದ್ದು, ಈ ಮಧ್ಯೆ ಕೇಂದ್ರ ಆಹಾರ ನಿಗಮದ ಸದಸ್ಯ ಉಮೇಶ ಬಿರ್ಬಿಟೆ ಅಟ್ಟೂ ಕೂಡ ಮರು ಚುನಾವಣೆಯಲ್ಲಿ ಸ್ಪರ್ಧೆ ನಡೆಸಲು ತಯಾರಿ ನಡೆಸಿದ್ದಾರೆ.

ಬಸವಕಲ್ಯಾಣ ವಿಧಾನ ಸಭಾ ಕ್ಷೇತ್ರದಲ್ಲಿ ಕಳೆದ ಕೆಲ ತಿಂಗಳಂದ ಯುವ ಮುಖಂಡ, ಉದ್ಯಮಿ ಹಾಗೂ ಭಾರತೀಯ ಆಹಾರ ನಿಗಮ ಮಂಡಳಿಯ ನಾಮ ನಿರ್ದೇಶಕ ಸದಸ್ಯ ಉಮೇಶ ಬಿರ್ಬಿಟೆ ಅಟ್ಟೂರ್ ಕ್ಷೇತ್ರದ ವಿವಿಧಡೆ ಸಂಚಾರ ನಡೆಸಿದ್ದು, ಇಲ್ಲಿನ ಜನರ ಪ್ರೀತಿಗೆ ಪಾತ್ರರಾಗುತ್ತಿದ್ದಾರೆ.  ಲಿಂಗಾಯತ ಸಮುದಾಯದ ಉಮೇಶ ಬಿರ್ಬಿಟೆ ಅಟ್ಟೂರ್ ಅವರು ಮೂಲತಹ ಬಸವಕಲ್ಯಾಣ ತಾಲೂಕಿನ ಅಟ್ಟೂರ್ ಗ್ರಾಮದವರಾಗಿದ್ದಾರೆ.

ಬಿಬಿಎಂ ಪದವೀಧರರಾದ ಇವರು, ಜನಸ್ನೇಹಿಯಾಗಿ ಗುರುತಿಸಿಕೊಳ್ಳುತ್ತಿದ್ದಾರೆ. ರಾಜ್ಯದ ವಿವಿಧಡೆ ಉದ್ಯಮ ಕ್ಷೇತ್ರದಲ್ಲಿ ಕೂಡ ಕಾರ್ಯ ನಿರ್ವಹಿಸುತ್ತಿರುವ ಇವರು, ಇದೀಗ ಸ್ವ ಕ್ಷೇತ್ರದ ಕಡೆಗೆ ಮುಖಮಾಡಿದ್ದಾರೆ. ಅಲ್ಲದೆ, ಇಲ್ಲಿನ ಜನರು ಕೂಡ ಉತ್ತಮ ರೀತಿಯಲ್ಲಿ ಸ್ಪಂದಿಸುತ್ತಿದ್ದು, ಕಲ್ಯಾಣ ನಾಡಿನಲ್ಲಿ ಹೊಸ ಮುಖ ಬೆಳಕಿಗೆ ತರುವ ನಿಟ್ಟಿನಲ್ಲಿ ಕ್ಷೇತ್ರದ ವಿವಿಧ ಗ್ರಾಮಗಳ ಯುವಕರು ಇವರನ್ನು ಪ್ರೋತ್ಸಾಹ ನೀಡುತ್ತಿದ್ದಾರೆ. ನಮ್ಮವರು ಎಂಬ ಭಾವನೆಗಳು ವ್ಯಕ್ತಪಡಿಸುತ್ತಿದ್ದಾರೆ.

ಚುನಾವಣೆಯಿಂದ ಚುನಾವಣೆಗೆ ದಿಕ್ಕು ಬದಲಿಸುವ ರಾಜಕೀಯ ಗಾಳಿ ಇದೀಗ ಮತ್ತೆ ಕಲ್ಯಾಣ ವಿಧಾನ ಸಭಾ ಕ್ಷೇತ್ರದಲ್ಲಿ ನಡೆಯಲ್ಲಿದ್ದು, ಮುಂಬರುವ ವಿಧಾನ ಸಭಾ ಚುನಾವಣೆಯಲ್ಲಿ ಇಲ್ಲಿನ ಜನರು ಹೊಸ ಮುಖಕ್ಕೆ ಪ್ರಾಮುಖ್ಯತೆ ನೀಡುವ ಲಕ್ಷಣಗಳು ಅರೆತುಕೊಂಡ ಅವರು, ವಿಧಾನ ಸಭೆ ಮರು ಚುನಾವಣೆಯಲ್ಲಿ ಸ್ಪರ್ಧೆ ನಡೆಸು ನಿಟ್ಟಿನಲ್ಲಿ ಈಗಾಗಲೇ ಪೂರ್ವ ತಯಾರಿಗಳು ಸಿದ್ಧಮಾಡಿಕೊಳ್ಳುತ್ತಿದ್ದಾರೆ. ಕಲ್ಯಾಣ ನಗರದಲ್ಲಿ ಕಚೇರಿ, ವಾಸ್ತವ್ಯ ವ್ಯವಸ್ಥೆಗಳು ಮಾಡಿಕೊಂಡಿರುವುದಾಗಿ ಮೂಲಗಳು ತಿಳಿಸಿವೆ.

ಕೇಂದ್ರ ಆಹಾರ ನಿಗಮದ ಸದಸ್ಯರಾದ ನಂತರ ಕಲ್ಯಾಣ ಕ್ಷೇತ್ರದಲ್ಲಿ ಸುತ್ತಾಡಿದ ಇವರು, ಕೇಂದ್ರ ಸರ್ಕಾರದಿಂದ ಬಡವರಿಗೆ ಪೂರೈಕೆ ಆಗುತ್ತಿರುವ ಆಹಾರ ಧಾನ್ಯ ಕುರಿತು ಪರಿಶೀಲನೆ ನಡೆಸಿ, ಅರ್ಹ ಬಡ ಜನರಿಗೆ ಆಹಾರ ಧಾನ್ಯ ದೊರೆಯುವಂತೆ, ಅಲ್ಲದೆ, ಪಡಿತರ ಚೀಟಿ ಸೇರಿಂತೆ ವಿವಿಧ ಸೌಲಭ್ಯಗಳು ಕಲ್ಪಿಸುವ ಕೆಲಸ ಮಾಡಿರುವುದಾಗಿ ಉಮೇಶ ಬಿರ್ಬಿಟೆ ಅಟ್ಟೂರ್ ತಿಳಿಸಿದ್ದಾರೆ.

ಸದ್ಯ ಬಸವಕಲ್ಯಾಣದ ಕಡೆ ವಿವಿಧ ಪಕ್ಷಗಳಲ್ಲಿ ಹೊಸ ಮುಖಗಳು ಕಂಡು ಬರುತ್ತಿದ್ದು, ಒಂದು ಟಿಕೆಟ್‌ಗೆ ಹತ್ತಾರು ಜನರು ಆಕಾಂಕ್ಷಿಗಳಾಗಿದ್ದಾರೆ. ಯಾವ ಪಕ್ಷದಿಂದ ಯಾರು ಟಿಕೆಟ್ ತರಯತ್ತಾರೆ ಎಂಬ ಚರ್ಚೆ ಒಂದೆಡೆಯಾದರೆ, ಈ ಬಾರಿಯ ಕಲ್ಯಾಣದ ಉಪ ಚುನಾವಣೆ ಜಿದ್ದಾಜಿದ್ದಿನಿಂದ ನಡೆಯುವುದು ಮಾತ್ರ ಖಚಿತವಾಗಿದೆ.

Date:01-10-2020 : Time:10:30: ಹೆಚ್ಚಿನ ಸುದ್ದಿಗಾಗಿ ಓದಿ ಕಸ್ತೂರಿ ಕಿರಣ ಪತ್ರಿಕೆ

Check Also

ಎಲ್ಲ ಗ್ರಾಮ, ತಾಂಡಾಗಳಿಗೆ ಸ್ಮಶಾನಭೂಮಿ ಒದಗಿಸಿ: ಶಾಸಕ ಪ್ರಭು ಚವ್ಹಾಣ

*ಸ್ಮಶಾನ ಭೂಮಿ ಕೊರತೆಯ ಬಗ್ಗೆ ಅಧಿವೇಶನದಲ್ಲಿ ಧ್ವನಿ ಎತ್ತಿದ ಶಾಸಕರು* *ಎಲ್ಲ ಗ್ರಾಮ, ತಾಂಡಾಗಳಿಗೆ ಸ್ಮಶಾನ…