Home ನಿಮ್ಮ ಜಿಲ್ಲೆ ಬೀದರ ಹುಮನಾಬಾದ- ಮನೆಗೋಡೆ ಕುಸಿದು ಮಹಿಳೆ ಸಾವು

ಹುಮನಾಬಾದ- ಮನೆಗೋಡೆ ಕುಸಿದು ಮಹಿಳೆ ಸಾವು

ಮನೆಗೋಡೆ ಕುಸಿದು ಮಹಿಳೆ ಸಾವು

lಹುಮನಾಬಾದ/ಜು.21: ತಾಲೂಕಿನ ಕುಮಾರಚಿಂಚೋಳಿ ಗ್ರಾಮದಲ್ಲಿ ಮನೆಗೋಡೆಯೊಂದು ಕುಸಿದು ಬಿದ್ದಿದ್ದು ಒಬ್ಬ ಮಹಿಳೆ ಮೃತಪಟ್ಟಿದ್ದು ಇಬ್ಬರು ಮಕ್ಕಳು ಹಾಗೂ ತಂದೆ ಗಂಭೀರವಾಗಿ ಗಾಯಗೊಂಡಿದ್ದಾರೆ.

ಪಾರ್ವತಿ ವೈಜಿನಾಥ ಸ್ಥಳದಲ್ಲಿಯೇ ಮೃತಪಟ್ಟಿದ್ದಾಳೆ. ಮೃತಳ ಗಂಡ ವೈಜಿನಾಥ ಕಾಸಲೆ (45) ಇವರ ಇಬ್ಬರ ಮಕ್ಕಳಾದ
ಅಕ್ಷರಾ (7) ಹಾಗೂ ಅರ್ಚಾನಾ (4) ಗಂಭೀರವಾಗಿ ಗಾಯಗೊಂಡಿದ್ದು ಹೆಚ್ಚಿನ ಚಿಕಿತ್ಸೆಗಾಗಿ ಬೀದರ ಬ್ರಿಮ್ಸ್ ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ. ಘಟನಾ ಸ್ಥಳಕ್ಕೆ ಪಿಎಸ್ಐ ರವಿಕುಮಾರ ನಾಯ್ಕೋಡಿ, ತಹಸೀಲ್ದಾರ ನಾಗಯ್ಯಾ ಹಿರೇಮಠ, ತಾಲೂಕು ಪಂಚಾಯತ ಇಓ ಡಾ। ಗೋವಿಂದ್ ಭೇಟಿನೀಡಿ ಪರಿಶೀಲನೆ ನಡೆಸಿದ್ದಾರೆ. ಗಂಭೀರವಾಗಿ ಗಾಯಗೊಂಶವರನ್ನು ಬೀದರ ಬ್ರಿಮ್ಸ್ ಆಸ್ಪತ್ರೆಗೆ ರವಾನಿಸಲಾಗಿದ್ದು, ಈ ಕುರಿತು ಹುಮನಾಬಾದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 

Date: 21-072021: Time 12:15am: www.kknewsonline.in

Check Also

ಹೂಗಾರ ಸಮಾಜ ಸಂಘಟನೆ: ಅಶೋಕ ಹೂಗಾರ ವಾರಕಾಲ ಸಂಚಾರ

ಬೀದರ: ಬೀದರ‌ ಜಿಲ್ಲೆಯಲ್ಲಿ ಹೂಗಾರ ಸಮಾಜವನ್ನು ಸಂಘಟಿಸುವ ನಿಟ್ಟಿನಲ್ಲಿ ಅಖಿಲ ಕರ್ನಾಟಕ ಹೂಗಾರ ಸೇವಾ ಮಾಹಾ …