ಹುಡಗಿ ಶ್ರೀಗಳ 91ನೇ ಜನ್ಮದಿನ ಆಚರಣೆ.
8ಹುಮನಾಬಾದ: ತಾಲೂಕಿನ ಹುಡಗಿ ಹಿರೇಮಠದ ವಿರುಪಾಕ್ಷ ಶಿವಾಚಾರ್ಯರ 91ನೇ ಜನ್ಮ ದಿನವನ್ನು ಕರಿಬಸವೇಶ್ವರ ಶಾಲೆ ವತಿಯಿಂದ ಆಚರಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಶ್ರೀಗಳು, ನಮ್ಮ ಜನ್ಮದಿನವನ್ನು ಜಗದ್ಗುರುಗಳಿಂದ ಆಗಬೇಕಿತ್ತು, ಆದರೆ ಅದು ಆಗಿಲ್ಲ ಎಂದು ಬೇಸರ ವ್ಯಕ್ತಪಡಿಸಿದ ಅವರು, ಶಾಲಾ ಮಕ್ಕಳು ಹಾಗೂ ಶಿಕ್ಷಕರು ಜನ್ಮದಿನ ಆಚರಣೆ ಮಾಡಿದ್ದು ಸಂತೋಷವಾಗಿದೆ ಎಂದರು.
ಈ ಸಂದರ್ಭದಲ್ಲಿ ಸೋಮನಾಥ ಪಾಟೀಲ, ಕಠೆಪ್ಪ ದಾನಾ, ವಿಠಲ ಹಳ್ಳಿಖೇಡ, ಶಿವಾನಂದ ಉಳಾಗಡ್ಡಿ, ಶಿವಾನಂದ ಪೆದ್ದಿ, ವಿಶ್ವನಾಥ ಸಾತಾ, ಜಗನ್ನಾಥ ಕೊರಿ, ಸಂತೋಷ ಮಾಸರೆಡ್ಡಿ, ದೀಪಕ ಜನ್ನಾ, ಪ್ರಕಾಶ ಚನ್ನಪನೂರ್, ಗಣಪತಿ ಪವಾರ, ಅನಿತಾ ಸಿಂದನಕೇರಾ, ಸುರೇಶ ಮಠಪತಿ, ಮಂಜೂಳಾ, ಮಹಾದೇವಿ, ಮಂಗಲ್ಲಾ, ಪ್ರೇಮಾ, ರೂಪಾ ಸೇರಿದಂತೆ ಅನೇಕರು ಇದ್ದರು.
Date: 02-02-200
ಹೂಗಾರ ಸಮಾಜ ಸಂಘಟನೆ: ಅಶೋಕ ಹೂಗಾರ ವಾರಕಾಲ ಸಂಚಾರ
ಬೀದರ: ಬೀದರ ಜಿಲ್ಲೆಯಲ್ಲಿ ಹೂಗಾರ ಸಮಾಜವನ್ನು ಸಂಘಟಿಸುವ ನಿಟ್ಟಿನಲ್ಲಿ ಅಖಿಲ ಕರ್ನಾಟಕ ಹೂಗಾರ ಸೇವಾ ಮಾಹಾ …
















