ಬೆಂಗಳೂರಿನಿಂದ-ಬೀದರಕ್ಕೆ ಹೊರಟ ಟ್ರೂಜೆಟ್ ವಿಮಾನ
ಬೀದರ: ಕೆಲ ಕ್ಷಣದಲ್ಲಿಯೇ ಬೀದರ್ ನಗರದಿಂದ ನಾಗರಿಕ ವಿಮಾನ ನಿಲ್ದಾಣಕ್ಕೆ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಚಾಲನೆ ನೀಡಲ್ಲಿದ್ದಾರೆ. ಬೆಳ್ಳಿಗೆ 10 ಗಂಟೆಗೆ ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಮುಖ್ಯಮಂತ್ರಿ. ಬಿಎಸ್. ಯಡಿಯೂರಪ್ಪ ಟ್ರೂಜೆಟ್ (ಟಿಆರ್ಜೆ 625) ವಿಮಾನದ ಮೂಲಕ ಪ್ರಾಯಣ ಬೆಳೆಸಿದ್ದು, 11:30 ಸುಮಾರಿಗೆ ಬೀದರ್ ವಿಮಾನ ನಿಲ್ದಾಣಕ್ಕೆ ಬಂದಿಳಿಯಲ್ಲಿದ್ದಾರೆ. ನಿಲ್ದಾಣದಲ್ಲಿ ಆಯೋಜಿಸಲಾಗಿರುವ ಕಾರ್ಯಕ್ರಮಗಳಲ್ಲಿ ಭಾಗಿಯಾಗಿ ವಿಮಾನ ನಿಲ್ದಾಣವನ್ನು ಲೋಕಾರ್ಪಣೆಗೊಳಿಸಲಿದ್ದಾರೆ.
ಉಡಾನ್ ಯೋಜನೆಯಡಿ ಕರ್ನಾಟಕದ ಇದು 7ನೇ ವಿಮಾನ ನಿಲ್ದಾಣವಾಗಿ ಕಾರ್ಯನಿರ್ವಹಿಸಲ್ಲಿದೆ. ಬೆಂಗಳುರು, ಮೈಸೂರು, ಮಂಗಳೂರು, ಬೆಳಗಾವಿ, ಹುಬ್ಬಳ್ಳಿ, ಬಳ್ಳಾರಿ, ಬೀದರ್ ವಿಮಾನ ನಿಲ್ದಾಣಗಳು ಇವೆ. ಇನ್ನು ಕೆಲವು ಆರಂಭ ಆಗಬೇಕಿವೆ. ಈ ವಿಮಾನ ನಿಲ್ದಾಣದ ಕಾರ್ಯ ಕಳೆದ ಒಂದು ವರೆ ದಶಕದಿಂದ ನಡೆಯುತ್ತಿದ್ದು, ಪ್ರಧಾನಿ ಮೋದಿ ಅವರು ಉಡಾನ್ ಯೋಜನೆ ಅಡಿಯಲ್ಲಿ ಸೇರ್ಪಡೆಮಾಡಿ ಪ್ರಗತಿ ಕಾರ್ಯಕ್ಕೆ ಬುನಾದಿ ಹಾಕಿದ್ದರು.
ಬೆಂಗಳೂರಿನಿಂದ ಸಂಸದ ಭಗವಂತ ಖೂಬಾ, ಮಾಜಿ ಸಚಿವರು ಹಾಗೂ ಹಾಲಿ ಶಾಸಕರಾದ ರಾಜಶೇಖರ ಪಾಟೀಲ, ಬಂಡೆಪ್ಪ ಖಾಶೆಂಪೂರ್, ರಹೀಮ್ ಖಾನ್, ಶಾಸಕ ಬಿ.ನಾರಾಯಣರಾವ, ಸೂರ್ಯಕಾಂತ ನಾಗಮಾರಪಳ್ಳಿ, ಎಂಎಲ್ಸಿ ವಿಜಯಸಿಂಗ್, ಅರವಿಂದಕುಮಾರ ಅರಳಿ, ಡಾ| ಚಂದ್ರಶೇಖರ ಪಾಟೀಲ, ರತ್ನಪ್ರಭಾ ಸೇರಿದಂತೆ ಅನೇಕ ನಾಯಕರು ಬೆಂಗೂರಿನಿಂದ ವಿಮಾನದಲ್ಲಿ ಬೀದರ ನಗರಕ್ಕೆ ಆಗಮಿಸುತ್ತಿದ್ದಾರೆ.
Date: 07-02-2020 Time: 10:15AM
ಎಲ್ಲ ಗ್ರಾಮ, ತಾಂಡಾಗಳಿಗೆ ಸ್ಮಶಾನಭೂಮಿ ಒದಗಿಸಿ: ಶಾಸಕ ಪ್ರಭು ಚವ್ಹಾಣ
*ಸ್ಮಶಾನ ಭೂಮಿ ಕೊರತೆಯ ಬಗ್ಗೆ ಅಧಿವೇಶನದಲ್ಲಿ ಧ್ವನಿ ಎತ್ತಿದ ಶಾಸಕರು* *ಎಲ್ಲ ಗ್ರಾಮ, ತಾಂಡಾಗಳಿಗೆ ಸ್ಮಶಾನ…
















