ಮಳೆಯ ಅಬ್ಬರಕ್ಕೆ ಉಕ್ಕಿ ಹರಿಯುತ್ತಿರೋ ನದಿ, ಹಳ್ಳಕೊಳ್ಳಗಳು- ಜನ ಜೀವನ ಅಸ್ತವ್ಯಸ್ತ
ಮಳೆಯ ಅಬ್ಬರಕ್ಕೆ ಉಕ್ಕಿ ಹರಿಯುತ್ತಿರೋ ನದಿ, ಹಳ್ಳಕೊಳ್ಳಗಳು- ಜನ ಜೀವನ ಅಸ್ತವ್ಯಸ್ತ
ಹುಮನಾಬಾದ: ರಾಜ್ಯದ ಹಲವೆಡೆ ಧಾರಾಕಾರ ಮಳೆಯಾಗುತ್ತಿದ್ದು, ಜನರ ಜೀವನ ಅಸ್ತವ್ಯಸ್ತವಾಗಿತ್ತದೆ. ಬೀದರ ಜಿಲ್ಲೆಯಲ್ಲಿ ಕೂಡ ಮಳೆಯಿಂದ ಅನೇಕ ನದಿಗಳು ತುಂಬಿ ಹರಿಯುತ್ತಿವೆ.
ಕಳೆದ ಎರಡು ದಿನಗಳಿಂದ ಅಬ್ಬರದ ಮಳೆ ಸುರಿಯುತ್ತಿದೆ. ಹುಮನಾಬಾದ
ತಾಲೂಕಿನ ಕಾರಂಜಾ ಜಲಾಶಯದ ಹಿನ್ನಿರಿನಲ್ಲಿ ಗ್ರಾಮಗಳ ಸಂಪರ್ಕ ಕಡಿತಗೊಂಡಿದೆ. ಅಲ್ಲದೆ ಮಾಣಿಕನಗರ-ಹುಮನಾಬಾದ, ಚಿಟಗುಪ್ಪ ಉಡಬಾಳ ಸೇರಿದಂತೆ ವಿವಿಧಡೆ ಮಳೆ ನೀರಿನಿಂದ ವಾಹನ ಸಂಚಾರ ಬಂದ್ ಆಗಿತ್ತು.
ಅಬ್ಬರದ ಮಳೆಗೆ ತಾಲೂಕಿನ ಎಲ್ಲಾ ನದಿ ಹಾಗೂ ಹಳ್ಳಗಳು ಉಕ್ಕಿ ಹರಿಯುತ್ತಿವೆ. ಪರಿಣಾಮ ತಗ್ಗು ಪ್ರದೇಶದ ಗ್ರಾಮಗಳ ಮನೆಗಳಿಗೆ ನೀರು ನುಗ್ಗಿದ್ದು, ಜನಜೀವನ ಅಸ್ತವ್ಯಸ್ತವಾಗಿದೆ.
ಭಾರಿ ಮಳೆಯ ಪರಿಣಾಮ ಬಹುತೇಕ ರೈತರ ಕೃಷಿ ಭೂಮಿಯಲ್ಲಿ ನೀರು ನಿಂತಿದೆ. ಕಬ್ಬು ಬೆಳೆದ ರೈತರಿಗೂ ಮಂಗಳವಾರ ರಾತ್ರಿ ಸುರಿದ ಮಳೆ ಆಘಾತ ಮೂಡಿಸಿದೆ. ಕಬ್ಬು ನೆಲಕಚ್ಚಿದೆ. ಒಂದು ರಾತ್ರೆಯ ಮಳೆ ಭಾರಿ ಪ್ರಮಾಣದ ಹಾನಿ ಸಂಭವಿಸುವಂತೆ ಮಾಡಿದ್ದು, ತಹಶೀಲ್ದಾರ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರುಗಳು ಹಾನಿಯ ಕುರಿತು ಪರಿಶೀಲನೆ ನಡೆಸಿದ್ದಾರೆ.
Date:14-10-2020
ಹೂಗಾರ ಸಮಾಜ ಸಂಘಟನೆ: ಅಶೋಕ ಹೂಗಾರ ವಾರಕಾಲ ಸಂಚಾರ
ಬೀದರ: ಬೀದರ ಜಿಲ್ಲೆಯಲ್ಲಿ ಹೂಗಾರ ಸಮಾಜವನ್ನು ಸಂಘಟಿಸುವ ನಿಟ್ಟಿನಲ್ಲಿ ಅಖಿಲ ಕರ್ನಾಟಕ ಹೂಗಾರ ಸೇವಾ ಮಾಹಾ …

















