ನವರಾತ್ರಿ ಉತ್ಸವ: ದೇವಿಗೆ ವಿಶೇಷ ಪೂಜೆ
ನವರಾತ್ರಿ ಉತ್ಸವದ ಪ್ರಯುಕ್ತ ಪಟ್ಟಣದ ಐತಿಹಾಸಿಕ ಭವಾನಿ ಮಂದಿರದಲ್ಲಿ ಸಿಂಹಾರೂಢ ದೇವಿಯ ಮೂರ್ತಿ ಪ್ರತಿಷ್ಠಾಪನೆ ಮಾಡಿದ್ದು, ಗರ್ಭಗುಡಿಯಲ್ಲಿ ಘಟಸ್ಥಾಪನೆ ಮಾಡಿ ಒಂಬತ್ತು ದಿನಗಳು ನಿತ್ಯ ಮುಂಜಾನೆ, ರಾತ್ರಿ ವಿಶೇಷ ಪೂಜೆ ಸಲ್ಲಿಸಲಾಗುತ್ತದೆ. ನಿತ್ಯ ಒಂದೊಂದು ರೀತಿಯಲ್ಲಿ ದೇವಿ ಮೂರ್ತಿಗೆ ಅಲಂಕಾರ ಮಾಡಲಾಗುತ್ತದೆ.
‘ಈ ಬಾರಿಯ ಕೊವೀಡ್ ಪರಿಣಾಮ ಯಾವುದೇ ಉತ್ಸವ, ಮೆರವಣಿಗೆ, ಸಭೆ ಸಮಾರಂಭಗಳು ಒಂಬತ್ತು ದಿನಗಳ ವರೆಗೆ ದಸರಾ ಉತ್ಸವ ಸಮಿತಿಯಿಂದ ನಡೆಸುತ್ತಿಲ್ಲ. ಸರಳವಾಗಿ ಶರನ್ನವರಾತ್ರಿ ಆಚರಿಸುತ್ತಿದ್ದು, ಎಲ್ಲವೂ ದೇಗುಲದಲ್ಲಿ ಘಟಸ್ಥಾಪನೆ ನಡೆಸಿ ಪೂಜೆಗೆ ಮಾತ್ರ ಸೀಮಿತಗೊಳಿಸಲಾಗಿದೆ, ಹುಣ್ಣಿಮೆಯಂದು ಸಾಂಕೇತಿಕವಾಗಿ ಪಲ್ಲಕ್ಕಿ ಮೆರವಣಿಗೆ ಒಂದು ಗಂಟೆ ಅವಧಿಯಲ್ಲಿ ನಡೆಸಲಾಗುತ್ತಿದೆ’ ಎಂದು ಭವಾನಿ ಮಂದಿರದ ಬಹುಸಾರ ಕ್ಷತ್ರಿಯ ಸಮಾಜ ಅಧ್ಯಕ್ಷ ಉತ್ತಮಕುಮಾರ್ ಧುಮಾಳೆ ತಿಳಿಸಿದ್ದಾರೆ.
ದೇಗುಲದಲ್ಲಿ ದರ್ಶನಕ್ಕೆ ಬರುವ ಭಕ್ತರಿಗೆ ಅಂತರ ಕಾಯ್ದುಕೊಂಡು, ಮಾಸ್ಕ್ ಧರಿಸಿ ದೇಗುಲದಲ್ಲಿ ಪ್ರವೇಶಿಸಿ ದೇವಿ ದರ್ಶನ ಪಡೆಯಲು ಅವಕಾಶ ಕಲ್ಪಿಸಲಾಗಿದೆ.
ತೀರ್ಥ ಪ್ರಸಾದ ನಿಷೇಧಿಸಲಾಗಿದೆ.
ನಿರ್ಣಾ: ತಾಲ್ಲೂಕಿನ ನಿರ್ಣಾ ಗ್ರಾಮದ ಭವಾನಿ ಮಂದಿರದಲ್ಲಿ ಶನಿವಾರ ಘಟಸ್ಥಾಪನೆ ನಡೆಸಿ ದೇವಿಗೆ ಉಡಿತುಂಬಿ ವಿಶೇಷ ಅಭಿಷೇಕ ಪೂಜೆ ನಡೆಯಿತು.
ಹೂಗಾರ ಸಮಾಜ ಸಂಘಟನೆ: ಅಶೋಕ ಹೂಗಾರ ವಾರಕಾಲ ಸಂಚಾರ
ಬೀದರ: ಬೀದರ ಜಿಲ್ಲೆಯಲ್ಲಿ ಹೂಗಾರ ಸಮಾಜವನ್ನು ಸಂಘಟಿಸುವ ನಿಟ್ಟಿನಲ್ಲಿ ಅಖಿಲ ಕರ್ನಾಟಕ ಹೂಗಾರ ಸೇವಾ ಮಾಹಾ …
















