Home ಸುದ್ದಿಗಳು ರಾಷ್ಟ್ರೀಯಸುದ್ದಿ ಬೀದರ ಜಿಲ್ಲೆಯಲ್ಲಿ 11 ಕರೊನಾ ಪಾಜಿಟಿವ್.

ಬೀದರ ಜಿಲ್ಲೆಯಲ್ಲಿ 11 ಕರೊನಾ ಪಾಜಿಟಿವ್.

ಬೀದರ: ನಿಜಾಮುದ್ದೀನ್ ಸಭೆಗೆ ತೆರಳಿದ್ದ 27 ಜನರ ಪೈಕಿ 11 ಜನರಿಗೆ ಕೊರೊನಾ ಸೋಂಕು ಖಚಿತವಾಗಿದೆ ಎಂದು ಜಿಲ್ಲಾಧಿಕಾರಿ ಡಾ। ಎಚ್.ಆರ್ ಮಹಾದೇವ ಸ್ಪಷ್ಟಪಡಿಸಿದ್ದಾರೆ.

9 ಜನ ಬೀದರ್ ನಗರದವರಾಗಿದ್ದಾರೆ. ಒಬ್ಬರು ಬಸವಕಲ್ಯಾಣ, ಇನ್ನೊಬ್ಬರು ಚಿಟಗುಪ್ಪ ತಾಲೂಕಿನ ಮನ್ನಾಎಖ್ಖೇಳಿ ಗ್ರಾಮದವರು ಎಂದು ಮಾಹಿತಿ ನೀಡಿದ್ದಾರೆ.

ಬಿಗಿ ಬಂದೋಬಸ್ತ್ : ಬೀದರ, ಬಸವಕಲ್ಯಾಣ ಹಾಗೂ ಮನ್ನಾಎಖ್ಖೆಳಿ ಗ್ರಾಮದಲ್ಲಿ ಬಿಗಿ ಬಂದೊಬಸ್ತ ನಡೆದಿದೆ. ಮನೆಯಿಂದ ಜನರು ಹೊರಬರದಂತೆ ಸೂಚಿಸಲಾಗುತ್ತಿದೆ ಎಂದು ತಿಳಿದುಬಂದಿದೆ. ಬಸವಕಲ್ಯಾಣದಲ್ಲಿ ಹೈ ಅಲರ್ಟ್ ಘೋಷಣೆ ಮಾಡಿಲಾಗಿದೆ.

ಆತಂಕದಲ್ಲಿ ಜನತೆ: ಇಷ್ಟು ದಿನ ಒಂದು ಪ್ರಕರಣ ಬೆಳಕಿಗೆ ಬರದ ಬೀದರ ಜಿಲ್ಲೆಯಲ್ಲಿ ಒಂದೇ ಬಾರಿಗೆ 11 ಪ್ರಕರಣಗಳು ಬೆಳಕಿಗೆ ಬಂದಿದ್ದು ಜನರಿಗೆ ಆತಂಕ ಉಂಟುಮಾಡಿದೆ. 11 ಜನರು ಎಷ್ಟು ಜನರ ಸಂಪರ್ಕ ಮಾಡಿದ್ದಾರೆ ಎಂಬುವುದು ಅಧಿಕಾರಿಗಳು ತನಿಖೆಗೆ ಮುಂದಾಗಿದ್ದಾರೆ.

Date: 02-04-2020

Check Also

ಭಾರತೀಯ ರೈಲ್ವೆ ಹೊಸ ಸಹಾಯವಾಣಿ 139

ಭಾರತೀಯ ರೈಲ್ವೆ ಹೊಸ ಸಹಾಯವಾಣಿ 139 ನವದೆಹಲಿ: ರೈಲು ಪ್ರಯಾಣಿಕರ ನೆರವಿಗಾಗಿ ಭಾರತೀಯ ರೈಲ್ವೆ ಹೊಸ ಸಹಾಯವಾಣ…