ಭಾರತೀಯ ರೈಲ್ವೆ ಹೊಸ ಸಹಾಯವಾಣಿ 139
ಭಾರತೀಯ ರೈಲ್ವೆ ಹೊಸ ಸಹಾಯವಾಣಿ 139
ನವದೆಹಲಿ: ರೈಲು ಪ್ರಯಾಣಿಕರ
ನೆರವಿಗಾಗಿ ಭಾರತೀಯ ರೈಲ್ವೆ ಹೊಸ ಸಹಾಯವಾಣಿ ಪ್ರಕಟಿಸಿದ್ದು, ರೈಲು ಪ್ರಯಾಣಿಕರ ಸುರಕ್ಷತೆಗಾಗಿ ಬಳಕೆಯಲ್ಲಿದ್ದ 182 ಸಂಖ್ಯೆ ಬದಲಿಗೆ 139 ಸಂಖ್ಯೆ ಬಳಸುವಂತೆ ರೈಲ್ವೆ ಇಲಾಖೆ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
182 ಸಂಖ್ಯೆ ಏಪ್ರಿಲ್ 1, 2021ರಿಂದ ಸಂಪೂರ್ಣವಾಗಿ ಬಂದ್ ಆಗಲ್ಲಿದ್ದು, ಅಗತ್ಯ ನೆರವು, ದೂರು, ದುಮ್ಮಾನ ಹೇಳಿಕೊಳ್ಳಲು 139 ಏಕಿಕೃತ ಸಹಾಯವಾಣಿಯನ್ನು ಆಯ್ಕೆಮಾಡಿ ಪ್ರಕಟಿಸಲಾಗಿದೆ.

ರೈಲು ಪ್ರಯಾಣಿಕರಿಗೆ ಯಾವುದೇ ರೀತಿಯ ತೊಂದರೆ ಉಂಟಾದಲ್ಲಿ, ಅಪರಾಧ ಕೃತ್ಯಗಳು ಕಂಡಲ್ಲಿ, ಕಿರುಕುಳವಾದಲ್ಲಿ ಸಹಾಯವಾಣಿಗೆ ಸಂಪರ್ಕಿಸಬಹುದಾಗಿದೆ. ಸಹಾಯವಾಣಿ 139ಗೆ ಕರೆ ಮಾಡಿದರೆ ಆರ್‌ಪಿಎಫ್ ನಿಯಂತ್ರಣ ಕೊಠಡಿಗೆ ಕರೆ ಹೋಗುತ್ತದೆ. ಸಮಸ್ಯೆ ಏನಾಗಿದೆ? ಎನ್ನುವುದನ್ನು ಸಹಾಯವಾಣಿ ನಿಯಂತ್ರಕರಿಗೆ ತಿಳಿಸಬೇಕು. ಆ ಕೂಡಲೇ ಕಾರ್ಯ ಪ್ರವೃತ್ತರಾಗುವ ರೈಲ್ವೆ ರಕ್ಷಣಾ ದಳದ ಅಧಿಕಾರಿಗಳು ಅಗತ್ಯವಿದ್ದಲ್ಲಿ ಮುಂದಿನ ನಿಲ್ದಾಣದಲ್ಲಿ ರೈಲು ನಿಲ್ಲುವ ವೇಳೆಯಲ್ಲಿ ಕರೆ ಮಾಡಿದವರನ್ನು ಭೇಟಿ ಮಾಡಿ ಮಾಹಿತಿ ಪಡೆದು ಕಾರ್ಯಾಚರಣೆ ನಡೆಸುವರು. ಒಟ್ಟು 12 ಭಾಷೆಗಳಲ್ಲಿ ಸಹಾಯವಾಣಿ ಕಾರ್ಯ ನಿರ್ವಹಿಸಲ್ಲಿದೆ.
Date: 09-03-2021 www.kknewsonline.in
ಎಲ್ಲ ಗ್ರಾಮ, ತಾಂಡಾಗಳಿಗೆ ಸ್ಮಶಾನಭೂಮಿ ಒದಗಿಸಿ: ಶಾಸಕ ಪ್ರಭು ಚವ್ಹಾಣ
*ಸ್ಮಶಾನ ಭೂಮಿ ಕೊರತೆಯ ಬಗ್ಗೆ ಅಧಿವೇಶನದಲ್ಲಿ ಧ್ವನಿ ಎತ್ತಿದ ಶಾಸಕರು* *ಎಲ್ಲ ಗ್ರಾಮ, ತಾಂಡಾಗಳಿಗೆ ಸ್ಮಶಾನ…

















