ಕೆಎಸ್‌ಆರ್‌ಟಿಸಿ ಬಸ್ ಕೊರತೆ: ಹೆಚ್ಚಿದ ಖಾಸಗಿ ಆಟೊಗಳ ದರ್ಬಾರ್
ಕೆಎಸ್‌ಆರ್‌ಟಿಸಿ ಬಸ್ ಕೊರತೆ: ಹೆಚ್ಚಿದ ಖಾಸಗಿ ಆಟೊಗಳ ದರ್ಬಾರ್
ಕೆಎಸ್‌ಆರ್‌ಟಿಸಿ ಬಸ್ ಕೊರತೆ: ಹೆಚ್ಚಿದ ಖಾಸಗಿ ಆಟೊಗಳ ದರ್ಬಾರ್
ಕಸ್ತೂರಿ ಕಿರಣ ವಾರ್ತೆ
ಚಿಟಗುಪ್ಪ:
ತಾಲ್ಲೂಕಿನ ವ್ಯಾಪ್ತಿಯಲ್ಲಿ ಬರುವ ನಿರ್ಣಾ ಗ್ರಾಮದಿಂದ ಮನ್ನಾಎಖ್ಖೇಳಿ ಗ್ರಾಮಕ್ಕೆ ಹೋಗುವ ಪ್ರಯಾಣಿಕರಿಗೆ ಖಾಸಗಿ ಆಟೊ ಚಾಲಕರು ದುಬಾರಿ ಶುಲ್ಕ ವಸೂಲಿ ಮಾಡುವ ಮೂಲಕ ಪ್ರಯಾಣಿಕರನ್ನು ವಂಚಿಸುತ್ತಿದ್ದಾರೆ ಎಂದು ಪ್ರಯಾಣಿಕರು ಆರೋಪಿಸುತ್ತಿದ್ದಾರೆ.
ನಿರ್ಣಾ ಗ್ರಾಮದಿಂದ ಮನ್ನಾಎಖ್ಖೇಳಿ 12 ಕಿ.ಮೀ ದೂರವಿದ್ದು, ಈ ಮೊದಲು ಪ್ರತಿ ಪ್ರಯಾಣಿಕರಿಗೆ ರೂ.15 ದರ ಪಡೆಯುತ್ತಿದ್ದರು, ಕೋವಿಡ್ ಸಂದರ್ಭದಲ್ಲಿ ಏಕಾಏಕಿ ರೂ.25ಕ್ಕೆ ದರ ಹೆಚ್ಚಿಸಲಾಗಿದೆ.
ಆಗ ಕೆಎಸ್‌ಆರ್‌ಟಿಸಿ ಬಸ್ ಕೊರತೆ ಇದ್ದ ಕಾರಣ ಪ್ರಯಾಣಿಕರು ಅನಿವಾರ್ಯವಾಗಿ ಹೆಚ್ಚಾದ ದರಕ್ಕೆ ಒಪ್ಪಿಕೊಂಡು ಪ್ರಯಾಣಿಸುತ್ತಿದ್ದರು. ಈಗಲೂ ಅದೇ ದರ ಮುಂದುವರೆಸಿಕೊಂಡು ಬಂರುತ್ತಿರುವುದರಿಂದ ಕಷ್ಟವಾಗಿದೆ. ಬಸ್ ಗೆ ರೂ.15 ದರ ಇದ್ದು, ಖಾಸಗಿ ಆಟೊ ಚಾಲಕರು ರೂ.25 ಮಾಡಿದಕ್ಕೆ ಬೇಸರವಾಗಿದೆ. ಈ ಬಗ್ಗೆ ಸಂಬಂಧಿಸಿದ ಯಾವ ಇಲಾಖೆಯ ಅಧಿಕಾರಿಗಳೂ ಗಮನ ಹರಿಸುತ್ತಿಲ್ಲ, ದರ ನಿಯಂತ್ರಣಕ್ಕೆ ಕಡಿವಾಣ ಹಾಕುತ್ತಿಲ್ಲʼ ಎಂದು ಪ್ರಯಾಣಿಕ ಸಲಿಮ್ ಸೈಕಲವಾಲೆ ಆರೋಪಿಸುತ್ತಾರೆ.
ʼಡೀಸೆಲ್ ಬೆಲೆ ನಿತ್ಯ ಹೆಚ್ಚುತ್ತಿರುವುದರಿಂದ ಪ್ರಯಾಣಿಕರಿಗೆ ಬೆಲೆ ಹೆಚ್ಚು ಮಾಡಬೇಕಾದ ಅನಿವಾರ್ಯತೆ ಇದೆ, ವಾಹನ ಖರೀದಿಗೆ ಪಡೆದ ಬ್ಯಾಂಕ್ ಸಾಲವೂ ತಿರಿಸುವುದು ಕಷ್ಟವಾಗುತ್ತಿದೆʼ ಎಂದು ಆಟೊ ಚಾಲಕ ರಾಜಕುಮಾರ್ ತಿಳಿಸಿದ್ದಾರೆ.
ʼನಿರ್ಣಾ ಗ್ರಾಮದಿಂದ ಮನ್ನಾಎಖ್ಖೇಳಿ ಗ್ರಾಮಕ್ಕೆ ದಿನವೂ ಕನಿಷ್ಠ ಒಂದು ಸಾವಿರಕ್ಕೂ ಹೆಚ್ಚಿನ ಪ್ರಯಾಣಿಕರು ಸಂಚರಿಸುತ್ತಾರೆ ಆದರೆ ಕೆಎಸ್‌ಆರ್‌ಟಿಸಿ ಬೀದರ್ ಡೀಪೊ ದಿಂದ ದಿನಕ್ಕೆ ಮೂರು ಬಾರಿ ಮಾತ್ರ ಬಸ್ ಓಡಿಸಲಾಗುತ್ತಿದೆ ಹೀಗಾಗಿ ಗ್ರಾಮೀಣ ಭಾಗಕ್ಕೆ ಸಮರ್ಪಕ ಬಸ್ ಸೌಕರ್ಯವಿಲ್ಲದ ಕಾರಣ ಸಾರ್ವಜನಿಕರು ಅನಿವಾರ್ಯವಾಗಿ ಖಾಸಗಿ ವಾಹನಗಳಲ್ಲಿ ಪ್ರಯಾಣಿಸುವ ಪರಿಸ್ಥಿತಿಯಿದೆ. ಆಟೊ ಚಾಲಕರು ಪರಿಸ್ಥಿತಿಯ ಲಾಭ ಪಡೆದು ಪ್ರಯಾಣಿಕರಿಂದ ದುಪ್ಪಟ್ಟು ಹಣ ವಸೂಲಿ ಮಾಡುತ್ತಿದ್ದಾರೆʼ ಎಂದು ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಶಂಕರರಾವ್ ತಿಳಿಸುತ್ತಾರೆ.
ʼಹುಮನಾಬಾದ್ ಘಟಕದಿಂದ ಮನ್ನಾಎಖ್ಖೇಳಿ – ನಿರ್ಣಾ ಮಧ್ಯೆ ನಿರಂತರವಾಗಿ ಬಸ್ ಓಡಿಸುವ ಕಾರ್ಯ ಆರಂಭಿಸಬೇಕು, ಇದರಿಂದ ಪ್ರಯಾಣಿಕರಿಗೆ ಅನುಕೂಲವಾಗುತ್ತದೆ, ಸಾರಿಕೆ ಸಂಸ್ಥೆಗೂ ಆದಾಯ ಹೆಚ್ಚುತ್ತದೆ, ಖಾಸಗಿ ವಾಹನಗಳ ಕಾಟವೂ ತಪ್ಪುತ್ತದೆʼ ಎಂದು ಮನ್ನಾಎಖ್ಖೇಳಿ ಗ್ರಾಮದ ಶಿವಕುಮಾರ್ ನುಡಿಯುತ್ತಾರೆ.
ಎಲ್ಲ ಗ್ರಾಮ, ತಾಂಡಾಗಳಿಗೆ ಸ್ಮಶಾನಭೂಮಿ ಒದಗಿಸಿ: ಶಾಸಕ ಪ್ರಭು ಚವ್ಹಾಣ
*ಸ್ಮಶಾನ ಭೂಮಿ ಕೊರತೆಯ ಬಗ್ಗೆ ಅಧಿವೇಶನದಲ್ಲಿ ಧ್ವನಿ ಎತ್ತಿದ ಶಾಸಕರು* *ಎಲ್ಲ ಗ್ರಾಮ, ತಾಂಡಾಗಳಿಗೆ ಸ್ಮಶಾನ…

















