ವಾಹನಗಳ ಜಪ್ತಿಗೆ ಮುಂದಾದ ಪೊಲೀಸರು..!
ಬೀದರ: ಹುಮನಾಬಾದ ಹಾಗೂ ಬಸವಕಲ್ಯಾಣ ನಗರಗಳಲ್ಲಿ ಅನಾವಶಕವಾಗಿ ರಸ್ತೆಗೆ ಇಳಿಯುತ್ತಿರುವ ದ್ವಿಚಕ್ರವಾಹನಗಳ ಜಪ್ತಿಗೆ ಪೊಲೀಸರು ಮುಂದಾಗಿದ್ದಾರೆ.
ಕೊರೊನಾ ಸೋಂಕು ಹರಡದಂತೆ ಮುಂಜಾಗ್ರತವಾಗಿ ದೇಶದಲ್ಲಿ ಎ.14ರ ವರೆಗೆ ಲಾಕ್ ಡೌನ್ ಮಾಡಲಾಗಿದ್ದು, ಸಾರ್ವಜನಿಕರು ಅನಾವಶಕವಾಗಿ ರಸ್ತೆಗೆ ಬರುತ್ತಿರುವುದು ಪೊಲೀಸ್ ಅಧಿಕಾರಿಗಳಿಗೆ ಹಾಗೂ ಸಿಬ್ಬಂದಿಗಳಿಗೆ ಉಂಟಾಗಿದೆ. ಕಳೆದ ಒಂದು ವಾರದಿಂದ ಸಾರ್ವಜನಿಕರು ಯಾರು ಅನಾವಶಕವಾಗಿ ರಸ್ತೆಗೆ ಬರದಂತೆ ತಿಳುವಳಿಕೆ ನೀಡಿದ್ದಾರೆ. ಆದರೂ ಕೆಲ ಜನರು ಪೊಲೀಸರ ಮಾತಿಗೆ ಗೌರವ ನೀಡದೆ. ರಸ್ತೆಯಲ್ಲಿ ಸಂಚಾರ ಮಾಡುತ್ತಿರುವ ವಾಹನಗಳನ್ನು ಇದೀಗ ಜಪ್ತಿ ಮಾಡಲು ಮುಂದಾಗಿದ್ದಾರೆ.
ಈಗಾಗಲೇ ಬಸವಕಲ್ಯಾಣದಲ್ಲಿ ವಾಹನಗಳ ಜಪ್ತಿ ಮಾಡಲಾಗಿದೆ ಎಂದು ಮಾಹಿತಿ ತಿಳಿದು ಬಂದಿದ್ದು, ಹುಮನಾಬಾದ ಪಟ್ಟಣದಲ್ಲಿ ಕೂಡ ವಾಹನ ಜಪ್ತಿಗೆ ಮುಂದಾಗಿದ್ದಾರೆ.
ಅನಾವಶಕ ಸಂಚಾರ ಬೇಡ: ಸಾರ್ವಜನಿಕರು ಯಾರು ಅನಾವಶಕವಾಗಿ ಯಾರು ದ್ವಿಚಕ್ರ ವಾಹನ ತೆಗೆದುಕೊಂಡು ರಸ್ತಗೆ ಬರದಿರಿ. ರಸ್ತೆಗೆ ಅನಾವಶಕ ಸಂಚಾರ ಕಂಡುಬರುವ ವಾಹನಗಳನ್ನು ಜಪ್ತಿ ಮಾಡಲಾಗುವುದು ಎಂದು ಸಿಪಿಐ ಜೆ.ಎಸ್ ನ್ಯಾಮೆಗೌಡರ್ ತಿಳಿಸಿದ್ದು, ವಾಹನ ಮಾಲೀಕರ ವಿರುದ್ದ ಕ್ರಮ ಕೈಗೊಳ್ಳಲಾಗುವುದು.
ಪೆಟ್ರೋಲ್ ಬಂಕ್ ಗಳಿಗೆ ಎಚ್ಚರಿಕೆ: ಪಟ್ಟಣದ
ವಿವಿಧ ಪೆಟ್ರೋಲ್ ಬಂಕ್ ಗಳಲ್ಲಿ ಸಾರ್ವಜನಿಕರಿಗೆ ಪೆಟ್ರೋಲ್ ಪೂರೈಕೆ ಮಾಡುತ್ತಿರುವ ಮಾಹಿತಿ ಹಿನ್ನೆಲೆಯಲ್ಲಿ ಸಿಪಿಐ ಜೆ.ಎಸ್ ನ್ಯಾಮಗೌಡರ್ ಬಂಕ್ ಗಳಿಗೆ ಭೇಟಿನೀಡಿ ಕಾನೂನು ಪಾಲನೆ ಮಾಡದಿದ್ದರೆ ಅಧಿಕಾರಿಗಳಿಗೆ ಮಾಹಿತಿ ನೀಡಿ ಬಂಕ್ ಬಂದ ಮಾಡಿಸಲಾಗುವುದು ಎಂದು ಎಚ್ಚರಿಸಿದರು.
Date: 31-03-2020
ಎಲ್ಲ ಗ್ರಾಮ, ತಾಂಡಾಗಳಿಗೆ ಸ್ಮಶಾನಭೂಮಿ ಒದಗಿಸಿ: ಶಾಸಕ ಪ್ರಭು ಚವ್ಹಾಣ
*ಸ್ಮಶಾನ ಭೂಮಿ ಕೊರತೆಯ ಬಗ್ಗೆ ಅಧಿವೇಶನದಲ್ಲಿ ಧ್ವನಿ ಎತ್ತಿದ ಶಾಸಕರು* *ಎಲ್ಲ ಗ್ರಾಮ, ತಾಂಡಾಗಳಿಗೆ ಸ್ಮಶಾನ…

















