ಬೆಳಿಗ್ಗೆ 6 ರಿಂದ 10 ಪೆಟ್ರೋಲ್ ದೊರೆಯುವುದಿಲ್ಲ
ಬೀದರ: ಹುಮನಾಬಾದ ಪಟ್ಟಣದ ಪೆಟ್ರೊಲ್ ಬಂಕ್ ಗಳ ಮಾಲೀಕರು ಸಿಪಿಐ ಜೆ.ಎಸ್ ನ್ಯಾಮೆಗೌಡರ್ ಅವರನ್ನು ಭೇಟಿ ಮಾಡಿ ಯಾರಿಗೆ ಇಂಧನ ಪೂರೈಕೆ ಮಾಡಬೇಕು ಎಂದು ಚರ್ಚೆ ನಡೆಸಿದರು.
ಬಂಕ್ ಗಳಲ್ಲಿ ಕೆಲಸ ಮಾಡಲು ಯುವಕರು ಬರುತ್ತಿಲ. ಯಾವ ವಾಹನಗಳಿಗೆ ಇಂಧನ ಹಾಕಬೇಕು ಎಂಬುವುದು ಸ್ಪಷ್ಟಪಡಿಸಿ ಎಂದು ಹೇಳಿದರು. ಇದಕ್ಕೆ ಪ್ರತಿಕ್ರಿಯೆ ನೀಡಿದ ಸಿಪಿಐ ಅನಾವಶಕ ವಾಹನಗಳಿಗೆ ಯಾವುದೇ ಕಾರಣಕ್ಕೂ ಇಂಧನ ಪೂರೈಕೆ ಆಗಬಾರದು. ತಾಲೂಕು ಆಡಳಿತ ಹಾಗೂ ಜಿಲ್ಲಾಡಳಿತ ಪಾಸ್ ನೀಡಿದವರಿಗೆ ಇಂಧನ ನೀಡಿ. ಅಗತ್ಯ ವಸ್ತುಗಳು ಸಂಚಾರ ಮಾಡುವ ವಾಹನಗಳಿಗೆ ಇಂಧನ ನೀಡಿ ಎಂದು ತಿಳಿಸಿದರು.
ಬಂಕ್ ಬಂದ್ ಮಾಡಿಸಿದರೆ ಸೂಕ್ತವಾಗುತ್ತೆ. ನಮಗೆಲ್ಲ ಹೇದರಿಕೆ ಇದೇ. ಕೆಲಸ ಮಾಡುವರು ಹೆದರುತ್ತಿದ್ದಾರೆ ಎಂದು ರಮೇಶ ಗಾದಾ ಹೇಳಿದರು. ಸಿಪಿಐ ಮಾತಾಡಿ, ನಾವುಗಳು ಕೊರೊನಾ ನಮ್ಮಭಾಗಕ್ಕೆ ಬರಬಾರದು ಎಂದು ಕೆಲಸ ಮಾಡುತ್ತಿದ್ದೇವೆ. ನಮ್ಮ ಸ್ಥಿತಿ ಕೂಡ ತಿಳಿದುಕೊಂಡು ಕೊರೊನಾ ಭೀತಿಯಿಂದ ಹೊರ ಬರುವ ವರೆಗೆ ಎಲ್ಲರೂ ಸಹಕಾರ ನೀಡಿ ಎಂದು ಹೇಳಿ.
6 ರಿಂದ 10 ಇಂಧನ ಸಿಗಲ್ಲ: ಪಟ್ಟಣದ ಎಲ್ಲಾ ಬಂಕ್ ಗಳಲ್ಲಿ ಬೆಳಿಗ್ಗೆ 6 ಗಂಟೆಯಿಂದ 10 ರ ವರೆಗೆ ಬಂಕ್ ಗಳಲ್ಲಿ ಇಂಧನ ದೊರೆಯುವುದಿಲ್ಲ. ಜನರು ಗೊಂದಲ ಸೃಷ್ಟಿಸುತಂತಿರುವ ಹಿನ್ನೆಲೆಯಲ್ಲಿ ಎಲ್ಲಾ ಬಂಕ್ ಮಾಲೀಕರು ಬಂಕ್ ಬಂದ್ ಮಾಡುವುದಾಗಿ ಪೊಲೀಸ್ ಅಧಿಕಾರಿಗಳಿಗೆ ತಿಳಿಸಿದ್ದಾರೆ.ನಂತರದ ಅವಧಿಯಲ್ಲಿ ಅಗತ್ಯ ಸೇವೆ ಮಾಡುವ ಸಿಬ್ಬದಿಗಳಿಗೆ ಹಾಗೂ ಸರ್ಕಾರಿ ನೌಕರರಿಗೆ ಇಂಧನ ನೀಡುವುದಾಗಿ ತಿಳಿಸಿದರು.
ಹೂಗಾರ ಸಮಾಜ ಸಂಘಟನೆ: ಅಶೋಕ ಹೂಗಾರ ವಾರಕಾಲ ಸಂಚಾರ
ಬೀದರ: ಬೀದರ ಜಿಲ್ಲೆಯಲ್ಲಿ ಹೂಗಾರ ಸಮಾಜವನ್ನು ಸಂಘಟಿಸುವ ನಿಟ್ಟಿನಲ್ಲಿ ಅಖಿಲ ಕರ್ನಾಟಕ ಹೂಗಾರ ಸೇವಾ ಮಾಹಾ …
















