ಮಾಣಿಕಪ್ರಭುಗಳ ದರ್ಶನಪಡೆದ ರವಿಶಂಕರ ಶ್ರೀಗಳು
ಹುಮನಾಬಾದ: ಇಂದು ಮಾಣಿಕನಗರಕ್ಕೆ ಆರ್ಟ್ ಆಫ್ ಲಿವಿಂಗ್ ಆಶ್ರಮದ ರವಿಶಂಕರ ಗುರೂಜಿ ಭೇಟಿನೀಡಿ ಮಾಣಿಕ ಪ್ರಭುಗಳ ಸಂಜೀವಿನಿ ಸಮಾಧಿಯ ದರ್ಶನ ಪಡೆದರು. ನಂತರ ದಿ| ಮಾಣಿಕ ಪಬ್ಲಿಕ್ ಶಾಲೆಯ ವರಣದಲ್ಲಿನ ಮಾಣಿಕ ದರ್ಶನ ಧ್ಯಾನಮಂದಿರ ಉದ್ಘಾನೆ ನೆರೆವರಿಸಿದರು.
ನಂತರ ಅಲ್ಲಿ ಸೇರಿದ ಗಣ್ಯರು ಹಾಗೂ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿ, ಧ್ಯಾನದ ಮಹತ್ವದ ಕುರಿತು ತಿಳಿಸಿದರು. ನಂತರ ಮಾಣಿಕಪ್ರಭು ಸಂಸ್ಥಾನದ ಡಾ. ಜ್ಞಾನರಾಜ ಮಾಣಿಕಪ್ರಭುಗಳು ಆಶೀರ್ವಚನ ನೀಡಿದರು.
ಹೆಲಿಕ್ಯಾಪ್ಟರ್ ಮೂಲಕ ಆಗಮಿಸಿದ ಶ್ರೀಗಳನ್ನು ಶಾಸಕ ರಾಜಶೇಖರ ಪಾಟೀಲ ಸ್ವಾಗತಿಸಿದರು. ಈ ಸಂದರ್ಭದಲ್ಲಿ ಚೇತನರಾಜ್ ಮಾಣಿಕಪ್ರಭುಗಳು ಸೇರಿದಂತೆ ಅನೇಕ ಗಣ್ಯರು ಭಾಗವಹಿಸಿದರು.
Date: 03-02-2020
ಎಲ್ಲ ಗ್ರಾಮ, ತಾಂಡಾಗಳಿಗೆ ಸ್ಮಶಾನಭೂಮಿ ಒದಗಿಸಿ: ಶಾಸಕ ಪ್ರಭು ಚವ್ಹಾಣ
*ಸ್ಮಶಾನ ಭೂಮಿ ಕೊರತೆಯ ಬಗ್ಗೆ ಅಧಿವೇಶನದಲ್ಲಿ ಧ್ವನಿ ಎತ್ತಿದ ಶಾಸಕರು* *ಎಲ್ಲ ಗ್ರಾಮ, ತಾಂಡಾಗಳಿಗೆ ಸ್ಮಶಾನ…
















