Home ನಿಮ್ಮ ಜಿಲ್ಲೆ ಬೀದರ ಬೆಳೆ ಹಾನಿ : ಮನನೊಂದ ರೈತ ಆತ್ಮಹತ್ಯೆ

ಬೆಳೆ ಹಾನಿ : ಮನನೊಂದ ರೈತ ಆತ್ಮಹತ್ಯೆ

ಬೆಳೆ ಹಾನಿ : ಮನನೊಂದ ರೈತ ಆತ್ಮಹತ್ಯೆ

ಹುಮನಾಬಾದ: ತಾಲೂಕಿನ ಕುಮಾರಚಿಂಚೋಳ್ಳಿ ಗ್ರಾಮದ ರೈತನೊಬ್ಬ ಅತಿವೃಷ್ಟಿಯಿಂದ ಬೆಳೆ ಹಾನಿ ಸಂಭವಿಸಿರುವ ಹಿನ್ನೆಲೆಯಲ್ಲಿ ಮನನೊಂದು ತನ್ನ ಹೋಟೆಲನಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಭಾನುವಾರ ತಡ ರಾತ್ರಿ ನಡೆದಿದೆ.

ಅನಿತ ಮಾಣಿಕಪ್ಪ ಹುಣಜಿ (43) ಆತ್ಮಹತ್ಯೆ ಮಾಡಿಕೊಂಡ ರೈತ. ಗ್ರಾಮದಲ್ಲಿ 3 ಎಕರೆ ಭೂಮಿ ತಂದೆ ಮಾಣಿಕಪ್ಪ ಹುಣಜಿ ಅವರ ಹೆಸರಲ್ಲಿ ಹೊಂದಿದ್ದು, ಹಂದಿಕೇರಾ ವಿ.ಎಸ್.ಎಸ್.ಎನ್, ದುಬಲಗುಂಡಿ ಕರ್ನಾಟಕ ಗ್ರಾಮೀಣ ಬ್ಯಾಂಕ್ ಹಾಗೂ ಎಸ್.ಬಿ.ಐ ಬ್ಯಾಂಕುಗಳಲ್ಲಿ ಒಟ್ಟಾರೆ ಸುಮಾರು 2.5 ಲಕ್ಷ ಸಾಲ ಪಡೆದು ಕೃಷಿ ಚಟುವಟಿಕೆ ನಡೆಸಿದ್ದ. ಹೊಲದಲ್ಲಿ ಸೋಯಾ, ಹೆಸರು ಬೆಳೆಗಳು ಹಾಳದ ಹಿನ್ನೆಲೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಕುಟುಂಬ ಸದಸ್ಯರು ನೀಡಿದ ದೂರಿನ ಹಿನ್ನೆಲೆಯಲ್ಲಿ ಹುಮನಾವಾದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Date: 04-10-2021 : www.kknewsonline.in

Check Also

ಹೂಗಾರ ಸಮಾಜ ಸಂಘಟನೆ: ಅಶೋಕ ಹೂಗಾರ ವಾರಕಾಲ ಸಂಚಾರ

ಬೀದರ: ಬೀದರ‌ ಜಿಲ್ಲೆಯಲ್ಲಿ ಹೂಗಾರ ಸಮಾಜವನ್ನು ಸಂಘಟಿಸುವ ನಿಟ್ಟಿನಲ್ಲಿ ಅಖಿಲ ಕರ್ನಾಟಕ ಹೂಗಾರ ಸೇವಾ ಮಾಹಾ …