17 ನಿಮಿಷ್ಯದಲ್ಲಿ ನಡೆದ ಅತೀ ಸರಳ ಮದುವೆ.
ತಾಳಿ ಕಟ್ಟುವ ಬದಲಿಗೆ ರಕ್ಷಾ ಬಂಧನ ಎಂದು ಕೈಗೆ ದಾರ ಕಟ್ಟಿ ಮದುವೆ.
ಹುಮನಾಬಾದ: ಮದುವೆಯ ವಧುವಿಗೆ ಒಡುವೆಗಳಿಲ್ಲ, ವಸ್ತ್ರಾಲಂಕಾರವೂ ಇಲ್ಲ, ಪರಸ್ಪರ ಹೂಮಾಲೆ, ಬಂಗಾರ ತಾಳಿ, ಬೆಳ್ಳಿ ಕಾಲುಂಗುರ, ಬಾಜಾ ಭಜಂತ್ರಿ, ಪುರೋಹಿತರೂ ಕೂಡ ಇಲ್ಲದೇ ಅತೀ ಸರಳವಾಗಿ 17 ನಿಮಿಷ್ಯದಲ್ಲಿ ಮದುವೆಯೊಂದು ನಡೆದ ಪ್ರಸಂಗ ಪಟ್ಟಣದಲ್ಲಿ ಭಾನುವಾರ ನಡೆದಿದೆ.
ಪಟ್ಟಣ ಹೊರವಲಯದ ನೂರ್ ಗಾರ್ಡ್ನ ಫಂಕ್ಷನ್ ಹಾಲ್ನಲ್ಲಿ ಭಾನುವಾರ ಹರಿಯಾಣದ ಸತ್ಯಲೋಕ ಆಶ್ರಮ, ಮುನಿಂದರ್ ಧರ್ಮಾಥ ಟ್ರಸ್ಟ್ ನೇತೃತ್ವದಲ್ಲಿ ಹೊಸ ಮಾದರಿ ಮದುವೆ ನಡೆದಿದೆ. ಮಹಾರಾಷ್ಟ್ರದ ನಿಲಂಗಾ ತಾಲೂಕಿನ ಹಣುಮಂತವಾಡಿ ಗ್ರಾಮದ ಕೃಷ್ಣಾ ಬಾಬುರಾವ ಹಾಗೂ ಬಸವಕಲ್ಯಾಣ ತಾಲೂಕಿನ ನಿಲಕಂಠವಾಡಿ ಗ್ರಾಮದ ಉಜ್ವಲಾ ದಗುಡು ಅವರು, ಹರಿಯಾಣದ ಮೂಲದ ಸಂತ ರಾಮ್ಪಾಲ್ ಮಹಾರಾಜರ ಸತ್ಸಂಗದಲ್ಲಿ ಭಾಗವಹಿಸಿ ಅವರ ಪ್ರೇರಣೆಯಿಂದ ಅತಿ ಸರಳ ಮದುವೆಗೆ ಒಪ್ಪಿರುವುದಾಗಿ ಮಾಧ್ಯಮಗಳಿಗೆ ತಿಳಿಸಿದ್ದಾರೆ.ಮದುವೆಯಲ್ಲಿ ತಾಳಿ ಕಟ್ಟುವ ಬದಲಿಗೆ ರಕ್ಷಾ ಬಂಧನ ಎಂದು ಕೈಗೆ ದಾರ ಕಟ್ಟಿಹುಮನಾಬಾದ್ ಪಟ್ಟಣದಲ್ಲಿ ಅತಿ ಸರಳ ಮದುವೆ ದ್ದು ಬಿಟ್ಟರೆ ಬೇರೆಯಾವುದೆ ಆಡಂಬರಗಳು ಇಲ್ಲಿ ಕಂಡುಬಂದಿಲ್ಲ.
ಕಳೆದ ಎರೆಡು ತಿಂಗಳಿಂದ ಹುಮನಾಬಾದ ಪಟ್ಟಣದಲ್ಲಿ ಸಂತ ರಾಮ್ಪಾಲ್ ಮಹಾರಾಜರ ಸತ್ಸಂಗ ನಡೆಯುತ್ತಿದ್ದು, ರಾಜ್ಯದ ವಿವಿಧ ಜಿಲ್ಲೆಗಳ ಜನರು ಹಾಗೂ ನೆರೆ ರಾಜ್ಯದ ಜನರು ಕೂಡ ಭಾಗವಹಿಸುತ್ತಿದ್ದು, ಅನುಯಾಯಿಗಳು ಶ್ರೀಗಳ ಮಾರ್ಗದರ್ಶನದಂತೆ ಜೀವನ ಸಾಗಿಸಬೇಕು ಎಂಬ ನಿಟ್ಟಿನಲ್ಲಿ ಇತಂಹ ಮಾದರಿ ಮದುವೆ ಮಾಡಲಾಗಿದೆ ಎಂದು ಸಂಸ್ಥೆಯ ಮುಖ್ಯಸ್ಥರು ಮಾಹಿತಿ ನೀಡಿದ್ದಾರೆ.

ಈ ಸಂದರ್ಭದಲ್ಲಿ ಮಾತನಾಡಿದ ಟ್ರಸ್ಟ್ ಸದಸ್ಯ ಭಾಸ್ಕರ್ರೆಡ್ಡಿ ಮಾತನಾಡಿ, ಸತ್ಯಲೋಕ ಆಶ್ರ್ರಮ ಹರಿಯಾಣ ರಾಜ್ಯದ ಹಿಸಾರ್ ಜಿಲ್ಲೆಯಲ್ಲಿದ್ದು, ದೇಶದ ಎಲ್ಲಾ ರಾಜ್ಯಗಳಲ್ಲಿ ಸತ್ಸಂಗಗಳು ನಡೆಯುತ್ತಿವೆ. ಆನ್ಲೈನ್ ಮೂಲಕ ಶ್ರೀಗಳ ಪ್ರವಚನ ಎಲ್ಲಾ ಕಡೆಗಳಲ್ಲಿ ವೀಕ್ಷಣೆ ಮಾಡಲಾಗುತ್ತಿದೆ. ಇಂದು ಸತ್ಸಂಗ ನಂತರ ನಡೆದ ಮದುವೆ ಅತಿ ಸರಳ, ಇಲ್ಲಿ ಯಾವುದೇ ಜಾರಿ ಧರ್ಮಕ್ಕೆ ಮಹತ್ವ ಇಲ್ಲ. ಹಣ, ಆಸ್ತಿಗೆ ಬೆಲೆ ನೀಡುವುದಿಲ್ಲ. ಸಮಾಜದಲ್ಲಿನ ಜಾತಿ ಭೇದವನ್ನು ಅಳಿಸುವುದು. ಸಮಾಜದಲ್ಲಿ ಶಾಂತಿ ಹಾಗೂ ಸಹೋದರತ್ವ ಸ್ಥಾಪಿಸುವುದು. ಸಮಾಜದಿಂದ ವರದಕ್ಷಿಣಾ ರೂಪಿ ಪಿಡುಗನ್ನು ಮುಕ್ತಾಯಗೊಳಿಸುವುದು ನಮ್ಮ ಸಂಸ್ಥೆಯ ಮುಖ್ಯ ಉದ್ದೇಶವಾಗಿದೆ. ದೇಶದ ವಿವಿಧಡೆ ಇಂತಹ ಅನೇಕ ಮದುವೆಗಳು ನಡೆದಿದ್ದು, ನಮ್ಮ ಸಂಸ್ಥೆಯಿಂದ ರಾಜ್ಯದಲ್ಲಿ ಇದು ಮೊದಲ ಮದುವೆಯಾಗಿದೆ. 17 ನಿಮಿಷ್ಯಗಳಲ್ಲಿ ಮದುವೆ ಕಾರ್ಯ ಮುಗಿದಿದ್ದು, ಆನ್ಲೈನ್ ಮೂಲಕ ಶ್ರೀಗಳ ಮಂತ್ರಪಠಣದಿಂದ ಮದುವೆ ಕಾರ್ಯ ಸಂಪನಗೊಂಡಿದೆ ಎಂದು ವಿವರಿಸಿದ್ದಾರೆ.
ವಿಶ್ವಕ್ಕೆ ಸದ್ಭಕ್ತಿ ಕೊಟ್ಟು ಮೋಕ್ಷ ಪ್ರದಾನ ಮಾಡುವುದು. ಸಮಾಜದಿಂದ ಪಾಕಂಡವಾದ ಮುಕ್ತಾಯಗೊಳಿಸುವುದು. ಯುವಕರಲ್ಲಿ ನೈತಿಕ ಹಾಗೂ ಆಧ್ಯಾತ್ಮಿಕ ಜಾಗೃತಿ ತರುವುದು. ಭ್ರಷ್ಟಾಚಾರವನ್ನು ಮುಜ್ತಾಯಗೊಳಿಸುವುದು. ಸಾಮಾಜಿಕ ಪಿಡುಗುಗಳನ್ನು ತೊಡೆದುಹಾಕುವ ಮೂಲಕ ಸ್ವಚ್ಛ ಸಮಾಜವನ್ನು ನಿರ್ಮಿಸುವುದೇ ಶ್ರೀಗಳ ಮುಖ್ಯ ಉದ್ದೇಶವಾಗಿದ್ದು, ಎಲ್ಲಾ ರಾಜ್ಯಗಳಲ್ಲಿ ಶ್ರೀಗಳ ಆದೇಶಗಳ ಅನುಸಾರ ಕಾರ್ಯಕ್ರಮಗಳು ಜರುಗುತ್ತಿವೆ. ಮುಂದಿನ ದಿನಗಳಲ್ಲಿ ಇಂತಹ ಅನೇಕ ಮದುವೆಗಳು ಮಾಡುವ ಮೂಲಕ ಬಡವರಿಗೆ ಆಸರೆಯಾಗುವ ಕಾರ್ಯ ಸಂಸ್ಥೆ ಮಾಡಲ್ಲಿದೆ ಎಂದು ವಿಷ್ಟುರೆಡ್ಡಿ, ರಾಮರೆಡ್ಡಿ, ರಾಜಶೇಖರ ವಿವರಿಸಿದರು.
Date: 04-10-2021 : www.kknewsonline.in
ಎಲ್ಲ ಗ್ರಾಮ, ತಾಂಡಾಗಳಿಗೆ ಸ್ಮಶಾನಭೂಮಿ ಒದಗಿಸಿ: ಶಾಸಕ ಪ್ರಭು ಚವ್ಹಾಣ
*ಸ್ಮಶಾನ ಭೂಮಿ ಕೊರತೆಯ ಬಗ್ಗೆ ಅಧಿವೇಶನದಲ್ಲಿ ಧ್ವನಿ ಎತ್ತಿದ ಶಾಸಕರು* *ಎಲ್ಲ ಗ್ರಾಮ, ತಾಂಡಾಗಳಿಗೆ ಸ್ಮಶಾನ…

















