ಕೋವಿಡ್‌ ಲಸಿಕೆ ಪಡೆಯಲು ಜಿಲ್ಲಾಧಿಕಾರಿಯ ಪಾದಯಾತ್ರೆ ಜಾಗೃತಿ

ಕಸ್ತೂರಿ ಕಿರಣ ವಾರ್ತೆ

ಬೀದರ್:

ತಾಲ್ಲೂಕಿನ ಮನ್ನಾಎಖ್ಖೇಳಿ ಗ್ರಾಮದಲ್ಲಿ ಜಿಲ್ಲಾಧಿಕಾರಿ ರಾಮಚಂದ್ರನ್‌ ಮಂಗಳವಾರ ಅವರು ಪಾದಯಾತ್ರೆ ನಡೆಸಿ ಗ್ರಾಮದ ವಿವಿಧ ಬಡಾವಣೆಗಳ ನಿವಾಸಿಗರ ಮನೆಗಳಿಗೆ ಭೇಟಿ ನೀಡಿ ಕೋವಿಡ್‌ ಲಸಿಕೆ ಹಾಕಿಸಿದರು.

ಗ್ರಾಮದ ಆಲ್‌ ಅಮೀನ್‌ ಶಾಲೆ ಸುತ್ತಲಿನ ನಿವಾಸಿಗರು ಲಸೀಕೆ ಪಡೆಯಲು ನಿರಾಕರಿಸಿದ ದೂರಿನನ್ವಯ ಜಿಲ್ಲಾಧಿಕಾರಿಗಳು ಮನೆಗಳಿಗೆ, ಮಸೀದಿಗಳಿಗೆ ಭೇಟಿ ನೀಡಿ ಸಂಜೆ ವರೆಗೂ ಮುಸ್ಲಿಮ್‌ ಸಮುದಾಯದ ನಾಗರಿಕರಿಗೆ ಲಸಿಕೆ ಕುರಿತು ಮಾಹಿತಿ ನೀಡಿ ಅವರಲ್ಲಿ ಅರಿವು ಮೂಡಿಸಿ ಸ್ಥಳದಲ್ಲಿಯೇ ಲಸಿಕೆ ಕೊಡಿಸಿದರು.

ಗ್ರಾಮದ 150 ನಾಗರಿಕರಿಗೆ ಲಸೀಕೆ ಹಾಕಿಸಿ ಮಾತನಾಡಿ,ʼ ಕೋವಿಡ್‌ ಲಸಿಕೆ ಬಗ್ಗೆ ಯಾವುದೇ ಅನುಮಾನಗಳಿಗೆ ಅವಕಾಶ ಕೊಡುವಂತಿಲ್ಲ, ಎಲ್ಲರ ಆರೋಗ್ಯ ರೋಗ ಮುಕ್ತವಾಗಿಸಲು ವೈಜ್ಞಾನಿಕವಾಗಿ ತಜ್ಞರು ಆಳವಾದ ಸಂಶೋಧನೆ ನಡೆಸಿ ಸಿದ್ಧಪಡಿಸಲಾಗಿದೆ, ಯಾವುದೇ ಅಡ್ಡಪರಿಣಾಮಗಳಿಲ್ಲ ಹೀಗಾಗಿ ಭಯಪಡುವಂತಿಲ್ಲ ಎಲ್ಲರೂ ಸ್ವಯಂ ಜಾಗೃತಿ ವಹಿಸಿ ಲಸೀಕೆ ಪಡೆಯಬೇಕುʼ ಎಂದರು.

ಜಿಲ್ಲಾ ವೈದ್ಯಾಧಿಕಾರಿ ವಿ.ಜಿ.ರೆಡ್ಡಿ, ತಾಲ್ಲೂಕು ವೈದ್ಯಾಧಿಕಾರಿ ಶಿವಕುಮಾರ್‌, ತಹಶೀಲ್ದಾರ ರವಿಕುಮಾರ ದಾಮಾ, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಡಾ. ಗೋವಿಂದ್‌, ಆಶಾ ಕಾರ್ಯಕರ್ತೆಯರು, ಕಂದಾಯ ಇಲಾಖೆ, ಆರೋಗ್ಯ ಇಲಾಖೆ ಸಿಬ್ಬಂದಿ ಇದ್ದರು.

Check Also

ಎಲ್ಲ ಗ್ರಾಮ, ತಾಂಡಾಗಳಿಗೆ ಸ್ಮಶಾನಭೂಮಿ ಒದಗಿಸಿ: ಶಾಸಕ ಪ್ರಭು ಚವ್ಹಾಣ

*ಸ್ಮಶಾನ ಭೂಮಿ ಕೊರತೆಯ ಬಗ್ಗೆ ಅಧಿವೇಶನದಲ್ಲಿ ಧ್ವನಿ ಎತ್ತಿದ ಶಾಸಕರು* *ಎಲ್ಲ ಗ್ರಾಮ, ತಾಂಡಾಗಳಿಗೆ ಸ್ಮಶಾನ…