ಬೀದರನಲ್ಲಿ ಕೋವಿಡ್-19 ಸೋಂಕಿತ ಮಗು ಗುಣಮುಖ
ಬೀದರನಲ್ಲಿ ಕೋವಿಡ್-19 ಸೋಂಕಿತ ಮಗು ಗುಣಮುಖ
ಬೀದರ: ಮಗುವೊಂದಕ್ಕೆ ಕೋವಿಡ್-19 ಕರೋನಾ ಸೋಂಕು ಇರುವುದು ದೃಢಪಟ್ಟ ಬಳಿಕ ಬೀದರನ ಕೋವಿಡ್ ನಿಗದಿತ ಆಸ್ಪತ್ರೆಯಲ್ಲಿ ಪರಿಣಾಮಕಾರಿಯಾಗಿ ಚಿಕಿತ್ಸೆ ನೀಡಿ ಮಗುವನ್ನು ಗುಣಮುಖಪಡಿಸಲಾಗಿದೆ.
ಮಕ್ಕಳ ವಿಭಾಗದ ಮುಖಸ್ಥರಾದ ಡಾ| ಶಾಂತಲ ಕೌಜಲಗಿ ಮಾರ್ಗದರ್ಶನದಲ್ಲಿ ಡಾ| ಶರಣ ಬುಳ್ಳಾ, ಡಾ| ಪ್ರಿಯಾಂಕ, ಡಾ| ರವಿಕಾಂತ, ಡಾ| ಜಗದೀಶ ಕೋಟೆ ಮತ್ತು ಡಾ| ಸೈಫ್ ಉದ್ದಿನ್ ಮತ್ತು ಶುಶ್ರೂಷಕ ಶುಶ್ರೂಷಿಕಿಯರು ಮಗು ಗುಣಮುಖಕ್ಕಾಗಿ ಶ್ರಮಿಸಿದ್ದಾರೆ. ವೈದ್ಯರು ಮತ್ತು ಸಿಬ್ಬಂದಿಯ ಕಾರ್ಯವೈಖರಿಗೆ ಬ್ರೀಮ್ಸ್ ನಿರ್ದೇಶಕ ಡಾ| ಶಿವಕುಮಾರ, ಜಿಲ್ಲಾ ಶಸ್ತ್ರಚಿಕಿತ್ಸಕ ಡಾ| ರತಿಕಾಂತ ಸ್ವಾಮಿ, ವೈದ್ಯಕೀಯ ಅಧಿಕ್ಷಕ ಡಾ| ವಿಜಯಕುಮಾರ ಅಂತಪ್ಪ ಸಂತಸ ವ್ಯಕ್ತಪಡಿಸಿದ್ದಾರೆ.
ಏನಾಗಿತ್ತು: ಜೂನ್ 30ರಂದು ಬಸವಕಲ್ಯಾಣ ತಾಲ್ಲೂಕಿನ ಖಾನಪೂರ ಗ್ರಾಮದ ರಸ್ತೆ ಬದಿಯಲ್ಲಿ ಅಂದಾಜು ಒಂದು ತಿಂಗಳು ಹದಿನೈದು ದಿವಸದ ಅಪರಿಚಿತ ಹೆಣ್ಣು ಮಗು ಪತ್ತೆಯಾಗಿರುವುದನ್ನು ಬಸವಕಲ್ಯಾಣ ತಾಲೂಕು ಸಾರ್ವಜನಿಕ ಆಸ್ಪತ್ರೆಯಲ್ಲಿ ದಾಖಲಿಸಿ ಹೆಚ್ಚಿನ ಚಿಕಿತ್ಸೆಗಾಗಿ ಬ್ರೀಮ್ಸ್ ಆಸ್ಪತ್ರೆ ಬೀದರಗೆ ಜುಲೈ 1ರಂದು ದಾಖಲು ಮಾಡಲಾಗಿತ್ತು. ಮಗುವಿನ ಸ್ಥಿತಿ ಚಿಂತಾಜನವಾಗಿತ್ತು ಅಲ್ಲದೆ, ಹೊಟ್ಟೆ ಊದಿಕೊಂಡಿತ್ತು. ತಪಾಸಣೆ ನಂತರ ಮಗು ರಕ್ತಹೀನತೆ ಹಾಗೂ ಕೋವಿಡ್ ರೋಗದಿಂದ ಬಳಲುತ್ತಿದಿದ್ದು ಪತ್ತೆ ಹಚ್ಚಿದ ವೈದ್ಯರು. ಮಕ್ಕಳ ವಿಭಾಗದ ಪ್ರತ್ಯೇಕ ಶಿಶು ತೀವ್ರ ನಿಗಾ ಘಟಕದಲ್ಲಿ ಮಗುವನ್ನು ದಾಖಲಿಸಿ ಚಿಕಿತ್ಸೆ ನೀಡಿದ್ದಾರೆ. ಇದೀಗ ಮಗು ಗುಖಮುಖವಾದ ಹಿನ್ನೆಲೆಯಲ್ಲಿ ಮಗುವನ್ನು ಜಿಲ್ಲಾ ಮಕ್ಕಳ ಸಂರಕ್ಷಣಾಧಿಕಾರಿ ಗೌರಿ ಶಂಕರ ಅವರಿಗೆ ಒಪ್ಪಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Date: 16-07-2020 www.kknewsonline.in
ಹೂಗಾರ ಸಮಾಜ ಸಂಘಟನೆ: ಅಶೋಕ ಹೂಗಾರ ವಾರಕಾಲ ಸಂಚಾರ
ಬೀದರ: ಬೀದರ ಜಿಲ್ಲೆಯಲ್ಲಿ ಹೂಗಾರ ಸಮಾಜವನ್ನು ಸಂಘಟಿಸುವ ನಿಟ್ಟಿನಲ್ಲಿ ಅಖಿಲ ಕರ್ನಾಟಕ ಹೂಗಾರ ಸೇವಾ ಮಾಹಾ …
















