ಆನ್ಲೈನ್ ಶಿಕ್ಷಣ ಕುರಿತು ಅನಿಸಿಕೆ ತಿಳಿಸಿ.
ಆನ್ಲೈನ್ ಶಿಕ್ಷಣ ಕುರಿತು ಅನಿಸಿಕೆ ತಿಳಿಸಿ.
ಬೀದರ: ಕಲಬುರಗಿ ಆಕಾಶವಾಣಿ ಕೇಂದ್ರದ ಬಾಲಲೋಕ ಮಕ್ಕಳ ಕಾರ್ಯಕ್ರಮದ ಪುಟಾಣಿ ಪ್ರಪಂಚದಲ್ಲಿ ಜುಲೈ 19 ರಂದು ಬೆಳಿಗ್ಗೆ 09.05 ಕ್ಕೆ ಆನ್ಲೈನ್ ಶಿಕ್ಷಣ ಮಕ್ಕಳ ಮುಕ್ತ ಅನಿಸಿಕೆ ವಿಶೇಷ ಕಾರ್ಯಕ್ರಮ ಪ್ರಸಾರವಾಗಲಿದೆ.
ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ಆಸಕ್ತ ಮಕ್ಕಳ ಅನಿಸಿಕೆಗಳನ್ನು ಶುಕ್ರವಾರ (ಜು.17 ರಂದು) ಮಧ್ಯಾಹ್ನ 3 ರಿಂದ 4 ಗಂಟೆಯ ವರೆಗೆ ಧ್ವನಿ ಮುದ್ರಣ ಮಾಡಿಕೊಳ್ಳಲಾಗುವುದು. ಮಕ್ಕಳು ಕರೆ ಮಾಡಲು ದೂರವಾಣಿ ಸಂಖ್ಯೆ – 241853 ಹಾಗೂ 241854 ಎಸ್.ಟಿ.ಡಿ. ಸಂಖ್ಯೆ -08472. ಬಹು ಚರ್ಚೆಗೆ ಒಳಗಾದ ಆನ್ ಲೈನ್ ಶಿಕ್ಷಣದ ಕುರಿತಾಗಿ ಮಕ್ಕಳು ತಮ್ಮ ಮುಕ್ತ ಅಭಿಪ್ರಾಯಗಳನ್ನು ತಿಳಿಸುವ ವಿಶೇಷ ವೇದಿಕೆ ಇದಾಗಿದೆ. ತಜ್ಞರು ಕೂಡಾ ಆನ್ ಲೈನ್ ಶಿಕ್ಷಣದ ಬಗ್ಗೆ ಮಾಹಿತಿ ನೀಡಲಿದ್ದಾರೆ. ವಿದ್ಯಾರ್ಥಿಗಳಿಗೆ ಉಪಯುಕ್ತವಾದ ಈ ಕಾರ್ಯಕ್ರಮದಲ್ಲಿ ಮಕ್ಕಳು ಅನಿಸಿಕೆ ವ್ಯಕ್ತಪಡಿಸಲು ಕೋರಲಾಗಿದೆ ಎಂದು ಕಾರ್ಯಕ್ರಮ ನಿರ್ವಾಹಕರಾದ ಡಾ| ಸದಾನಂದ ಪೆರ್ಲ ತಿಳಿಸಿದ್ದಾರೆ.
ಹೂಗಾರ ಸಮಾಜ ಸಂಘಟನೆ: ಅಶೋಕ ಹೂಗಾರ ವಾರಕಾಲ ಸಂಚಾರ
ಬೀದರ: ಬೀದರ ಜಿಲ್ಲೆಯಲ್ಲಿ ಹೂಗಾರ ಸಮಾಜವನ್ನು ಸಂಘಟಿಸುವ ನಿಟ್ಟಿನಲ್ಲಿ ಅಖಿಲ ಕರ್ನಾಟಕ ಹೂಗಾರ ಸೇವಾ ಮಾಹಾ …
















