Home ಸುದ್ದಿಗಳು ರಾಜ್ಯ ಸುದ್ದಿ ಫೆ. 7,8,9 ರಂದು 17ನೇ ವಚನ ವಿಜಯೋತ್ಸವ

ಫೆ. 7,8,9 ರಂದು 17ನೇ ವಚನ ವಿಜಯೋತ್ಸವ

ಬಿದರ: ಬಸವಗಿರಿಯಲ್ಲಿ ಪ್ರತಿ ವರ್ಷದಂತೆ ಇದೇ ಫೆಬ್ರುವರಿ 7, 8 ಮತ್ತು 9 ರಂದು ಮೂರು ದಿನಗಳ 17ನೇ ವಚನ ವಿಜಯೋತ್ಸವವು ಅತ್ಯಂತ ಅರ್ಥಪೂರ್ಣವಾಗಿ ಮತ್ತು ವಿಜೃಂಭಣೆಯಿAದ ಜರುಗಲಿದೆ ಎಂದು ಅಕ್ಕ ಅನ್ನಪೂರ್ಣ ಅವರು ಮಾಹಿತಿ ನೀಡಿದರು.

ಸರ್ವಸಮಾನತೆ, ಮಾನವೀಯತೆಯನ್ನು ಸಾರುವ ಸಕಲ ಜೀವಾತ್ಮರಿಗೆ ಲೇಸನ್ನೆ ಬಯಸುವ ಬಸವಾದಿ ಶರಣರ ವಚನಗಳು ಅಧ್ಯಾತ್ಮದ ತವನಿಧಿ. ಕ್ರಾಂತಿಯ ಕಿಡಿಗಳಾಗಿವೆ. ಮಾನವ ಕುಲದ ಸಂವಿಧಾನವೆನಿಸಿರುವ ವಚನಗಳು ನಮಗೆ ಸುಲಭವಾಗಿ ದೊರೆತ್ತಿಲ್ಲ. ವಚನ ಸಾಹಿತ್ಯ ಸಂರಕ್ಷಣೆಗಾಗಿ ಅಂದು ಸಹಸ್ರಾರು ಶರಣ-ಶರಣೆಯರು ಪ್ರಾಣಾರ್ಪಣೆಗೈದಿರುವರು. ಶರಣರ ತ್ಯಾಗ ಬಲಿದಾನಗಳನ್ನು ಸ್ಮರಿಸುತ್ತಾ ವಚನಗಳಲ್ಲಿಯ ಮಾನವೀಯ ಮೌಲ್ಯಗಳನ್ನು ಜನಮನದಲ್ಲಿ ನೆಲೆಗೊಳಿಸಿ ಸಶಕ್ತ, ಸಮೃದ್ಧ ಸಮಾಜ ನಿರ್ಮಾಣ ಮಾಡುವ ಕನಸಿನಿಂದ ಪ್ರತಿವರ್ಷವೂ ವಚನ ವಿಜಯೋತ್ಸವ ಆಚರಿಸಲಾಗುತ್ತಿದೆ.

ಕಾರ್ಯಕ್ರಮದಲ್ಲಿ ಸಾಮೂಹಿಕ ಇಷ್ಟಲಿಂಗಯೋಗ, ಉದ್ಘಾಟನಾ ಸಮಾರಂಭ, ಕಲ್ಯಾಣ ಕ್ರಾಂತಿ ನಂತರದ ದಿನಗಳು ಗೋಷ್ಠಿ, ಗುರುವಚನ ಸಾಮೂಹಿಕ ಪಾರಾಯಣ, ಯುವ ಪ್ರೇರಣಾ ಉತ್ಸವ, ಮಹಿಳಾ ಜಾಗೃತಿ ಸಮಾವೇಶ, ಗುರುವಚನ ಪಟ್ಟಾಭಿಷೇಕ 13ನೇ ಮಹೋತ್ಸವ ಮತ್ತು ವಚನ ವಿಜಯೋತ್ಸವವೆಂಬ ಎಂಟು ವೈವಿಧ್ಯಮಯ ಗೋಷ್ಠಿಗಳನ್ನು ಏರ್ಪಡಿಸಲಾಗಿದೆ. ಧಾರ್ಮಿಕ, ನೈತಿಕ, ಸಾಮಾಜಿಕ ಕ್ಷೇತ್ರಗಳನ್ನು ಗಮನದಲ್ಲಿರಿಸಿಕೊಂಡು ವಿಶೇಷವಾಗಿ ಮಹಿಳೆಯರು, ಯುವಕರು-ಪಾಲಕರಿಗೆ ಉತ್ತಮ ಪ್ರೇರಣೆ ನೀಡುವಂಥ ಬಹುಪಯೋಗಿ ಗೋಷ್ಠಿಗಳನ್ನು ಸಂಯೋಜಿಸಲಾಗಿದೆ. ಜೊತೆಗೆ ಪ್ರತಿದಿನ ಸಂಜೆ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಸಂಗೀತ, ಘಟಂ ವಾದ್ಯ, ಯಕ್ಷಗಾನ, ವಚನ ನೃತ್ಯ, ಕ್ಲಾರಿಯೋನೆಟ ವಾದನ ಮುಂತಾದ ಕಲೆಗಳು ಪ್ರದರ್ಶನ ನಡೆಯಲಿದೆ.

ಏಕಕಾಲಕ್ಕೆ ಹತ್ತಾರು ಸಾವಿರ ಜನರು ಕುಳಿತುಕೊಳ್ಳುವಂಥ ಡಾ||ಚನ್ನಬಸವ ಪಟ್ಟದ್ದೇವರು ಮಂಟಪ ನಿರ್ಮಿಸಲಾಗಿದೆ. ವಿಶಾಲವಾದ ‘ಪ್ರವಚನ ಪಿತಾಮಹಾ ಲಿಂಗಾನಂದ ಮಹಾಸ್ವಾಮಿಗಳ’ ವೇದಿಕೆಯನ್ನು ಸಜ್ಜುಗೊಳಿಸಲಾಗಿದೆ. 770 ಅಮರಗಣಂಗಳ’ ಮಹಾದ್ವಾರ ಅತಿಥಿಗಳನ್ನು ಸ್ವಾಗತಿಸಲಿದೆ. ವಿಜಯೋತ್ಸವದಲ್ಲಿ ಭಾಗವಹಿಸುವ ಜನರ ಪ್ರಸಾದಕಾಗಿ ಪ್ರತ್ಯೇಕವಾದ ನೀಲಾಂಬಿಕೆ ಪ್ರಸಾದ ಪಂಟಪ ಮತ್ತು ದಾಸೋಹ ಮಂಟಪಗಳನ್ನು ನಿರ್ಮಿಸಲಾಗಿದೆ. ಬಸವಗಿರಿಯ ಎಲ್ಲಾ ಕಡೆಗೂ ಕುಡಿಯುವ ಶುದ್ಧ ನೀರಿನ ವ್ಯವಸ್ಥೆ ಮಾಡಲಾಗಿದೆ.

ವಚನ ವಿಜಯೋತ್ಸವದಲ್ಲಿ ಭಾಗವಹಿಸಲು ಕರ್ನಾಟಕದ ಎಲ್ಲಾ ಜಿಲ್ಲೆಗಳಿಂದಲೂ ಪ್ರತಿನಿಧಿಗಳು ಆಗಮಿಸುತ್ತಿರುವರು, ಮಹಾರಾಷ್ಟç, ತೆಲಂಗಾಣ, ಆಂಧ್ರ, ಕೇರಳ ಮುಂತಾದ ರಾಜ್ಯಳಿಂದಲೂ ಪ್ರತಿನಿಧಿಗಳು ಆಗಮಿಸುತ್ತಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.

 

Date: 03-02-2020

Check Also

ಎಲ್ಲ ಗ್ರಾಮ, ತಾಂಡಾಗಳಿಗೆ ಸ್ಮಶಾನಭೂಮಿ ಒದಗಿಸಿ: ಶಾಸಕ ಪ್ರಭು ಚವ್ಹಾಣ

*ಸ್ಮಶಾನ ಭೂಮಿ ಕೊರತೆಯ ಬಗ್ಗೆ ಅಧಿವೇಶನದಲ್ಲಿ ಧ್ವನಿ ಎತ್ತಿದ ಶಾಸಕರು* *ಎಲ್ಲ ಗ್ರಾಮ, ತಾಂಡಾಗಳಿಗೆ ಸ್ಮಶಾನ…