Home ನಿಮ್ಮ ಜಿಲ್ಲೆ ಬೀದರ ಪ್ರತಿವರ್ಷದಂತೆ ಜಾತ್ರೆ ನಡೆಯಲ್ಲಿ ಶಾಸಕ ಪಾಟೀಲ.

ಪ್ರತಿವರ್ಷದಂತೆ ಜಾತ್ರೆ ನಡೆಯಲ್ಲಿ ಶಾಸಕ ಪಾಟೀಲ.

ುಹುಮನಾಬಾದ: ಕುಲದೇವ ವೀರಭದ್ರೇಶ್ವರ ದೇವರ 2020ನೇ ಸಾಲಿನ ಜಾತ್ರಾ ಮಹೋತ್ಸವ ನಿಮಿತ್ಯ ಮಂಗಳವಾರ ದೇವಸ್ಥಾನದಲ್ಲಿ ಶಾಸಕ ರಾಜಶೇಖರ ಪಾಟೀಲ ಅವರ ನೇತೃತ್ವದಲ್ಲಿ ಪೂರ್ವಸಿದ್ಧತಾ ಸಭೆ ಜರುಗಿತು.

ಸಭೆಯಲ್ಲಿ ಅನೇಕರು ಸಲಹೆಗಳು ನೀಡಿದರು. ಪ್ರತಿ ವರ್ಷದಂತೆ ಈ ವರ್ಷ ಕೂಡ ಜಾತ್ರಾ ಮಹೋತ್ಸ ನಡೆಯಲ್ಲಿದ್ದು, ಸಕಲರು ಪ್ರತಿ ವರ್ಷದತೆ ಸೇವೆ ಸಲ್ಲಿಸಬೇಕು ಎಂದು ಶಾಸಕ ರಾಜಶೇಖರ ಪಾಟೀಲ ಸಲಹೆ ಮಾಡಿದರು.

ಸುತ್ತಲಿನ ವಿವಿಧ ರಾಜ್ಯಗಳ ಲಕ್ಷಾಂತರ ಭಕ್ತರು ಜಾತ್ರೆಗೆ ಆಗಮಿಸುವುದು ವಾಡಿಕೆಯಾಗಿದ್ದು, ಪ್ರತಿ ವರ್ಷ ಜಾತ್ರೆಯ ಮೆರವಣಿಗೆಯ ಸಮಯ ಹೆಚ್ಚಾಗುತ್ತಿದೆ. ದೇವಸ್ಥಾನಕ್ಕೆ ಆಗಮಿಸುವ ಭಕ್ತರಿಗೆ ವಿವಿಧ ಸೌಕರ್ಯ ಕಲ್ಪಿಸಲಾಗುತ್ತಿದೆ. ಸರ್ಕಾರದಿಂದ ಅನುದಾನ ತಂದು ರಸ್ತೆ ಸೇರಿದಂತೆ ಅಭಿವೃದ್ದಿ ಕಾರ್ಯಗಳು ಮಾಡಲಾಗುತ್ತಿದ್ದು, ಜನರು ಕೂಡ ಆ ಸೌಕರ್ಯಗಳ ಸೂಕ್ತ ನಿರ್ವಹಣೆ ಮಾಡಬೇಕು ಎಂದು ಸಲಹೆ ಮಾಡಿದರು.

ಜಾತ್ರೆ ಸಂದರ್ಭದಲ್ಲಿ ಇಲ್ಲಿನ ಜನರು ಲಕ್ಷಂತರ ಭಕ್ತರಿಗೆ ಪ್ರಸದ ವ್ಯವಸ್ಥೆ ಮಾಡುತ್ತಿರುವುದು ರಾಜ್ಯದ ಎಲ್ಲಾ ಕಡೆಗಳಲ್ಲಿ ಹೆಸರು ಸಾರುತ್ತಿದೆ. ಈ ವರ್ಷ ನಡೆಯುವ ಜಾತ್ರೆಯಲ್ಲಿ ಕೂಡ ಇಲ್ಲಿನ ಜನರು ಸೇವೆ ಸಲ್ಲಿಸಬೇಕು ಎಂದು ತಿಳಿಸಿದರು.

ವೀರ ರೇಣುಕ ಗಂಗಾಧರ ಶಿವಾಚಾರ್ಯರು ಮಾತನಾಡಿ, ಹಣ ಹರಿಸಿದರು ಕೂಡ ಭಕ್ತಿ ಮೂಡುವುದಿಲ್ಲ. ಜಾತ್ರೆ ಸಂದರ್ಭದಲ್ಲಿ ಮಾತ್ರ ಯಾಕೆ ದೇವಸ್ಥಾನ ಅಭಿವೃದ್ಧಿ ಕುರಿತು ಮಾತಾಡುವ ಜನರು ವರ್ಷವಿಡಿ ಯಾರು ಅಭಿವೃದ್ಧಿ ಬಗ್ಗೆ ಮಾತಾಡುವುದಿಲ್ಲ ಯಾಕೆ? ಎಂದು ಪ್ರಶ್ನಿಸಿದರು. ಒಡೆದ ಮನಸ್ಸುಗಳು ಒಂದು ಮಾಡುವ ಸಂಕೇತವಾಗಿ ಜಾತ್ರೆಯ ಮೂಲವಾಗಿದೆ. ಹಿಂದೆ ಕುಳಿತು ಮಾತಾಡುವ ಬದಲಿಗೆ ಮುಂದೆ ಬಂದು ಮಾತಾಡುವ ದೈರ್ಯ ಬೆಳೆಸಿಕೊಳ್ಳಬೇಕು. ಇತರೆ ದೇವಸ್ಥಾನಗಳಂತೆ ವೀರಭದ್ರನ ದೇವಸ್ಥಾನ ಕೂಡ ಅಭಿವೃದ್ಧಿ ಮಾಡಬೇಕು ಎಂದು ಸಲಹೆ ಮಾಡಿದರು.

ಹಿರೇಮಠದ ವೀರ ರೇಣುಕ ಗಂಗಾಧರ ಶಿವಾಚಾರ್ಯರು, ದೇವಸ್ಥಾನ ಸಮಿತಿ ಅಧ್ಯಕ್ಷ ವೀರಣ್ಣಾ ಪಾಟೀಲ, ತಹಸಿಲ್ದಾರ ನಾಗಯ್ಯಾ ಸ್ವಾಮಿ, ಬಸವರಾಜ ಆರ್ಯ, ಸಿಪಿಐ ಜೆ.ಎಸ್ ನ್ಯಾಮೆಗೌಡರ್, ಪುರಸಭೆ ಮುಖ್ಯಾಧಿಕಾರಿ ಶಂಭುಲಿಂಗ, ಪಿಎಸ್ ಐ ರವಿಕುಮಾರ, ಮಲ್ಲಿಕಾರ್ಜುನ ಮಾಶೆಟ್ಟಿ, ಅಪ್ಸರ್ ಮಿಯ್ಯಾ ಸೇರಿದಂತೆ ಅನೇಕ ಸಾರ್ವಜನಿಕರು ಭಾಗವಹಿಸಿದ್ದರು.

 

 

Date: 24-12-2019  Time:9:50PM

Check Also

ಹೂಗಾರ ಸಮಾಜ ಸಂಘಟನೆ: ಅಶೋಕ ಹೂಗಾರ ವಾರಕಾಲ ಸಂಚಾರ

ಬೀದರ: ಬೀದರ‌ ಜಿಲ್ಲೆಯಲ್ಲಿ ಹೂಗಾರ ಸಮಾಜವನ್ನು ಸಂಘಟಿಸುವ ನಿಟ್ಟಿನಲ್ಲಿ ಅಖಿಲ ಕರ್ನಾಟಕ ಹೂಗಾರ ಸೇವಾ ಮಾಹಾ …