Home ನಿಮ್ಮ ಜಿಲ್ಲೆ ಬೀದರ ಅರಣ್ಯ ಪ್ರದೇಶದಲ್ಲಿ 212 ಗಾಂಜಾಗಿಡ ಪತ್ತೆ

ಅರಣ್ಯ ಪ್ರದೇಶದಲ್ಲಿ 212 ಗಾಂಜಾಗಿಡ ಪತ್ತೆ

ಅರಣ್ಯ ಪ್ರದೇಶದಲ್ಲಿ 212 ಗಾಂಜಾಗಿಡ ಪತ್ತೆ

ಹುಮನಾಬಾದ: ತಾಲೂಕಿನ ಭದ್ರಾಪುರ ಗ್ರಾಮದ ಹೊರವಲಯದಲ್ಲಿನ ಅರಣ್ಯ ಪ್ರದೇಶದಲ್ಲಿ ಅಕ್ರಮ ಗಾಂಜಾ ಗಿಡಗಳು ಬೆಳೆದಿರುವ ಖಚಿತ ಮಾಹಿತಿ ಹಿನ್ನೆಲೆಯಲ್ಲಿ ಅಬಕಾರಿ ಅಧಿಕಾರಿಗಳು ಗುರುವಾರ ದಾಳಿ ನಡೆಸಿದ್ದಾರೆ.
ಅರಣ್ಯ ಪ್ರದೇಶದ ಗುಡಗಾಡು ಭಾಗದಲ್ಲಿ ಅಕ್ರಮವಾಗಿ ಸಾಗುವಳಿ ಮಾಡಿಕೊಂಡವರು ತೊಗರಿ ಬೆಳೆ ಜೊತೆಗೆ ಗಾಂಜಾ ಗಿಡಗಳು ಬೆಳೆಸು ಖಚಿತ ಮಾಹಿತಿ ಹಿನ್ನೆಲೆಯಲ್ಲಿ ಅಬಕಾರಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ.

ಸುಮಾರು 212 ಗಿಡಗಳು ಪತ್ತೆಯಾಗಿದ್ದು, 22.5 ಕೆ.ಜಿ ತೂಕ ಎಂದು ಅಂದಾಜಿಸಲಾಗಿದೆ. ಸುಮಾರು ಒಂದು ಲಕ್ಷ ಮೌಲ್ಯ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದು, ಈ ಕುರಿತು  ಅಬಕಾರಿ ಇಲಾಖೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ.
ಅಬಕಾರಿ ಜಿಲ್ಲಾಧಿಕಾರಿ ಮಂಜುನಾಥ ,  ಡಿವೈಎಸ್ಪಿ ಅನಿಲಕುಮಾರ ಪೊದ್ದಾರ್, ಸಿಪಿಐ ರವಿಂದ್ರ ಪಾಟೀಲ, ಆಂನದ ಉಕ್ಕಲಿ, ಱಾಜಶೇಖರ, ದೇವಿದಾಸ ಭೂಸ್ಲೆ,  ಪಿಎಸ್ಐ ಜೇಟ್ಟೆಪ್ಪಾ ಬೇಲೂರ್, ದುಂಡಪ್ಪ ಹಕ್ಕಿ, ನಾನಾಗೌಡ ಕೇರುರ್ ಸೇರಿದಂತೆ ಕಂದಾಯ, ಅರಣ್ಯ ಹಾಗೂ ಅಬಾಕಾರಿ ಸಿಬ್ಬಂದಿಗಳು ಇದ್ದರು.

 

Date: 09-10-2020

Check Also

ಹೂಗಾರ ಸಮಾಜ ಸಂಘಟನೆ: ಅಶೋಕ ಹೂಗಾರ ವಾರಕಾಲ ಸಂಚಾರ

ಬೀದರ: ಬೀದರ‌ ಜಿಲ್ಲೆಯಲ್ಲಿ ಹೂಗಾರ ಸಮಾಜವನ್ನು ಸಂಘಟಿಸುವ ನಿಟ್ಟಿನಲ್ಲಿ ಅಖಿಲ ಕರ್ನಾಟಕ ಹೂಗಾರ ಸೇವಾ ಮಾಹಾ …