Home ನಿಮ್ಮ ಜಿಲ್ಲೆ ಬೀದರ ಅತ್ಯಾಚಾರ ಪ್ರಕರಣ – ಜೆಡಿಎಸ್ ಪ್ರತಿಭಟನೆ

ಅತ್ಯಾಚಾರ ಪ್ರಕರಣ – ಜೆಡಿಎಸ್ ಪ್ರತಿಭಟನೆ

ಅತ್ಯಾಚಾರ ಪ್ರಕರಣ – ಜೆಡಿಎಸ್ ಪ್ರತಿಭಟನೆ

ಹುಮನಾಬಾದ: ಉತ್ತರ ಪ್ರದೇಶದಲ್ಲಿ ನಡೆದ ಯುವತಿ ಸಾಮೂಹಿಕ ಅತ್ಯಾಚಾರ ಹಾಗೂ ಕೊಲೆ ಘಟನೆಯನ್ನು ಖಂಡಿಸಿ ತಾಲೂಕು ಜೆಡಿಎಸ್ ಪಕ್ಷದಿಂದ ಪಟ್ಟಣದ ಅಂಬೇಡ್ಕರ್ ವೃತ್ತದಲ್ಲಿ ಸೋಮವಾರ ಪ್ರತಿಭಟನೆ ನಡೆಯಿತು.

ಜೆಡಿಎಸ್ ಪಕ್ಷದ ಮುಖಂಡರಾದ ಸುರೇಶ ಸೀಗಿ, ಶಿವರಾಜ ಹುಲಿ, ತಾಲೂಕು ಅಧ್ಯಕ್ಷ ಮಹೇಶ ಅಗಡಿ, ಎಸ್.ರಾಂಪೂರೆ ಸೇರಿದಂತೆ ವಿವಿಧ ಮುಖಂಡರು ಮಾತನಾಡಿ, ಕೇಂದ್ರ ಸರ್ಕಾರ ಹಾಗೂ ಉತ್ತರ ಪ್ರದೇಶ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ದೇಶದಲ್ಲಿ ಸಾಮೂಹಿಕ ಅತ್ಯಾಚಾರ ಕೊಲೆ ಪ್ರಕರಣಗಳು ಸರಣಿಯಾಗಿ ನಡೆಯುತ್ತಿದ್ದು, ಇವುಗಳನ್ನು ತಡೆಯುವಲ್ಲಿ ಸರ್ಕಾರಗಳು ಸಂಪೂರ್ಣ ವಿಫಲಗೊಂಡಿವೆ. ಕೂಡಲೇ ಸರ್ಕಾರ ಎಚ್ಚೆತುಕೊಂಡು ತಪ್ಪಿಸೃ ವಿರುದ್ಧ ಕಠಿಣ ಕ್ರಮಕ್ಕೆ ಮುಂದಾಗಬೇಕು ಎಂದು ಒತ್ತಾಯಿಸಿದರು.

https://play.google.com/store/apps/details?id=kknewsonline.in

ಅಬ್ದೂಲ್ ಗೊರೆಮಿಯ್ಯಾ, ಮುಖಂಡರಾದ ಶಿವಪುತ್ರ ಮಾಳಗೆ, ರವಿ ಘವಾಳಕರ್, ಡಾ| ಸಆಜೀದ್ ಪಟೇಲ್, ಬಾಬುರಾವ ಪಿಸ್ಕೆ, ದೇವದತ್ತ ಒಡೆಯರ್, ವಿರೇಶ ಸೀಗಿ, ಸಂಜೀವಕುಮಾತ ಗರ್ಜೆ, ವಿಜಯಕುಮಾರ ಶಂಭುಶಂಕರ, ಶಿವಕುಮಾರ, ವಿನಾಯಕ ಸೇರಿದಂತೆ ಅನೇಕರು ಇದ್ದರು.

Date: 06-10-2020 : www.kknewsonline.in

Check Also

ಹೂಗಾರ ಸಮಾಜ ಸಂಘಟನೆ: ಅಶೋಕ ಹೂಗಾರ ವಾರಕಾಲ ಸಂಚಾರ

ಬೀದರ: ಬೀದರ‌ ಜಿಲ್ಲೆಯಲ್ಲಿ ಹೂಗಾರ ಸಮಾಜವನ್ನು ಸಂಘಟಿಸುವ ನಿಟ್ಟಿನಲ್ಲಿ ಅಖಿಲ ಕರ್ನಾಟಕ ಹೂಗಾರ ಸೇವಾ ಮಾಹಾ …