6 ಜನ ಚಟ್ನಳ್ಳಿ ಗ್ರಾ.ಪಂ ಸದಸ್ಯರ ಸದಸ್ಯತ್ವ ರದ್ದು..
ಬೀದರ: ವಿವಿಧ ವಸತಿ ಯೋಜನೆ ಹಾಗೂ ಇತರೆ ದೂರುಗಳ ಹಿನ್ನೆಲೆಯಲ್ಲಿ ಬೀದರ ತಾಲೂಕಿನ ಚಟ್ನಳ್ಳಿ ಗ್ರಾಮ ಪಂಚಾಯತನ 6 ಜನ ಸದಸ್ಯರ ವಿವಿಧ ಆರೋಪಗಳು ಸಾಬೀತಾದ ಹಿನ್ನೆಲೆಯಲ್ಲಿ 6 ಜನ ಸದಸ್ಯರ ಸದಸ್ಯತ್ವ ರದ್ದು ಮಾಡಿ ಕ್ರಿಮಿನಲ್ ಮೊಕ್ಕದ್ದಮೆ ದಾಖಲಿಸುವಂತೆ ರ‍್ಕಾರದ ಅಧೀನ ಕರ‍್ಯರ‍್ಶಿ ನಾರಾಯಣ ಡಿಜೆ ಆದೇಶ ಹೊರಡಿಸಿದ್ದು, ತಡವಾಗಿ ಬೆಳಕಿಗೆ ಬಂದಿದೆ.
ಜಂಬಗಿ ಗ್ರಾಮ ಪಂಚಾಯತ ಅಧ್ಯಕ್ಷ ವಿಜಯಕುಮಾರ ಮಸ್ಕಲೆ ವಿರುದ್ದ ಆಕ್ರಮ ಆರೋಪ ಹಿನ್ನೆಲೆಯಲ್ಲಿ ಅರೆನ್ಯಾಯಿಕ ಮಾದರಿಯಲ್ಲಿ ವಿಚಾರಣೆ ನಡೆಸಿದ ಅಧಿಕಾರಿಗಳು ರ‍್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ. 1993ರ ಪ್ರಕಾರ 43(ಎ) ಅಡಿ ಗ್ರಾಮ ಪಂಚಾಯತ ಸದಸ್ಯರುಗಳ 48(4) ಮತ್ತು 48(5) ಅನ್ವಯ ಗ್ರಾಮ ಪಂಚಾಯತ ಅಧ್ಯಕ್ಷ ವಿರುದ್ದ ಕ್ರಮ ಕೈಗೊಳ್ಳಲಾಗಿದೆ ಎಂದು ಆದೇಶ ಪತ್ರದಲ್ಲಿ ವಿವರಿಸಲಾಗಿದೆ.
ಗ್ರಾಮ ಪಂಚಾಯತ ಸದಸ್ಯರಾದ ಮುತ್ತಮ್ಮ ರ‍್ಜುನ 2007-08ನೇ ಸಾಲಿನಲ್ಲಿ ಹಾಗೂ 2013-14ನೇ ಸಾಲಿನ ಇಂದಿರತಾ ಆವಾಸ್ ಯೋಜನೆಯಡಿ ವಸತಿ ಪಡೆದಿದ್ದು, 2015-16ನೇ ಸಾಲಿನಲ್ಲಿಒ ಪಂಚಾಯಿತಿ ಚುನಾವಣೆ ಅಭ್ರ‍್ಥಿಯಾಗಿ ಸ್ರ‍್ಧೆ ನಡೆಸಿದರು. ವಿಠಲ ವೀರಪ್ಪಾ ಅವರು ಸೊಸೆಯಾದ ಅಂಬಿಕ ವೆಂಕಟ ಇವರ ಹೆಸರಲ್ಲಿ 2017-18ನ ಸಾಲಿನಲ್ಲಿ ಪ್ರಧಾನ ಮಂತ್ರಿ ಅವಾಸ್ ವಸತಿ ಯೋನೆಯಡಿ ಮನೆ ಪಡೆದಿದ್ದಾರೆ. ಇಸ್ಮಾಯಿಲ್ ಮೈನೋದ್ದಿನ್ ಅವರು ತಮ್ಮ ಪತ್ನಿ ಆಸ್ಮಾಬೇಗಂ ಅವರ ಹೆಸರಲ್ಲಿ 2013-14ನೇ ಸಾಲಿನಲ್ಲಿ ಬಸವ ವಸತಿ ಯೋಜನೆಯಡಿ ಮನೆ ಪಡೆದಿದ್ದು, ಇವರ ಮನೆಯಲ್ಲಿ ಶೌಚಾಲಯ ಹೊಂದಿಲ್ಲ ಇವರು ಅಧಿನಿಯಮ 12(ಜೆ) ಉಲ್ಲಂಘಿಸಿ ರ‍್ತವ್ಯ ಲೋಪ ವೆಸಗಿದ್ದಾರೆಂದು ಆದೇಶ ಪತ್ರದಲ್ಲಿ ವಿವರಿಸಲಾಗಿದೆ.
ಜಗನ್ನಾಥ ಶಿವರಾಜ ಇವರು ತಮ್ಮ ತಂದೆ ಶಿವರಾಜ ಹೆಸರಲ್ಲಿ 2016-17ನೇ ಸಾಲಿನಲ್ಲಿ ಅಂಬೇಡ್ಜರ್ ವಸತಿ ಯೋಜನೆಯಡಿ ಮನೆ ಪಡೆದಿದ್ದಾರೆ ಎಂದು ಸಾಬೀತು ಮಾಡಲಾಗಿದೆ. ರಿಜ್ವಾನಬೇಗಂ ಮತಿನ ಇವರು 2016-17ನ ಸಾಲಿನಲ್ಲಿ ಪ್ರಧಾನಮಂತ್ರಿ ಆವಾಸ್ ವಸತಿ ಯೋಜನೆಯಡಿ ಮನೆ ಪಡೆದಿದ್ದಾರೆ. ಅಮರ ಸಂಗ್ರಮಪ್ಪ ಇವರು ಪಂಚಾಯ್ತಿಯ ನಾಲ್ಕು ಸಭೆಗಳಿಗೆ ಸತತವಾಗಿ ಗೈರುಹಾಜರಾಗಿರುವ ಹಿನ್ನೆಲೆಯಲ್ಲಿ ರ‍್ತವ್ಯ ಲೋಪ ವೆಸಗಿದ್ದಾರೆಂದು ಆದೇಶದಲ್ಲಿ ವಿವರಿಸಲಾಗಿದೆ. ಅದೇರೀತಿ ಅಶೋಕ ಬಕ್ಕಪ್ಪ ಇವರು ತಮ್ಮ ಪತ್ನಿ ರೂಪ ಇವರ ಹೆಸರಿನಲ್ಲಿ 2008-09ನೇ ಸಾಲಿನಲ್ಲಿ ಇಂದಿರ ವಸತಿ ಯೋಜನೆಯಡಿ ಮನೆ ಪಡೆದಿದ್ದಾರೆ. ಮತ್ತೆ 2016-17ರಲ್ಲಿ ಪ್ರಧಾನಮಂತ್ರಿ ವಸತಿ ಯೋಜನೆಯಡಿ ಮನೆ ಪಡೆದು ಕಾನೂನ ಉಲ್ಲಂಘಿಸಿದ್ದಾರೆಂದು ಆದೇಶ ಪತ್ರದಲ್ಲಿ ವಿವರಣ ನೀಡಲಾಗಿದೆ.
ಗ್ರಾಮ ಪಂಚಾಯತ ಸದಸ್ಯರು ತಮ್ಮ ಕುಟುಂಬಸ್ಥರಿಗೆ ವಿವಿಧ ವಸತಿ ಯೋಜನೆಗಳ ಫಲಾನುಭವಿಗಳಾಗಿ ಮಾಡಿ, ಮನೆ ನರ‍್ಮಿಸದೆ ರ‍್ಕಾರದ ಹಣ ದುರುಪಯೋಗ ಪಡಿಸಿಕೊಂಡಿದ್ದಾರೆ. ಈ ಕುರಿತು ಹಣ ವಸೂಲಿ ಮಾಡಲು ಕೂಡ ಆದೇಶದಲ್ಲಿ ವಿವರಿಸಲಾಗಿದೆ.
Date:07-12-2019 Time:4:30
ಹೂಗಾರ ಸಮಾಜ ಸಂಘಟನೆ: ಅಶೋಕ ಹೂಗಾರ ವಾರಕಾಲ ಸಂಚಾರ
ಬೀದರ: ಬೀದರ ಜಿಲ್ಲೆಯಲ್ಲಿ ಹೂಗಾರ ಸಮಾಜವನ್ನು ಸಂಘಟಿಸುವ ನಿಟ್ಟಿನಲ್ಲಿ ಅಖಿಲ ಕರ್ನಾಟಕ ಹೂಗಾರ ಸೇವಾ ಮಾಹಾ …

















