Home ನಿಮ್ಮ ಜಿಲ್ಲೆ ಬೀದರ ಜನರ ನಿರೀಕ್ಷೆ ಅನುಸಾರ ಕ್ಷೇತ್ರದ ಅಭಿವೃದ್ಧಿ : ಶಾಸಕ ರಾಜಶೇಖರ ಪಾಟೀಲ

ಜನರ ನಿರೀಕ್ಷೆ ಅನುಸಾರ ಕ್ಷೇತ್ರದ ಅಭಿವೃದ್ಧಿ : ಶಾಸಕ ರಾಜಶೇಖರ ಪಾಟೀಲ

ಜನರ ನಿರೀಕ್ಷೆ ಅನುಸಾರ ಕ್ಷೇತ್ರದ ಅಭಿವೃದ್ಧಿ : ಶಾಸಕ ರಾಜಶೇಖರ ಪಾಟೀಲ

ಹುಮನಾಬಾದ: ಜನರ ನಿರೀಕ್ಷೆ ಅನುಸಾರ ಕ್ಷೇತ್ರದ ಅಭಿವೃದ್ಧಿ ಕಾರ್ಯಗಳು ಮಾಡಲಾಗುತ್ತಿದೆ. ಆದರೆ ಕೆಲವರ ಕಣ್ಣಿಗೆ ಕಾಮಣಿಯಾಗಿದ್ದು ಅಭಿವೃದ್ಧಿ ಕಾರ್ಯಗಳು ಕಾಣುತ್ತಿಲ್ಲ ಎಂದು ಶಾಸಕ ರಾಜಶೇಖರ ಪಾಟೀಲ ಹೇಳಿದರು.

ತಾಲೂಕಿನ ಹುಣಸನಾಳ ಗ್ರಾಮದಲ್ಲಿ ಜೆಜೆಎಂ ಯೋಜನೆ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿ ಅವರು, ಜನರ ಸಂತೋಷ ಹಾಗೂ ನೋವಿನಲ್ಲಿ ಸ್ಪಂದಿಸದ ಜನರು, ಕ್ಷೇತ್ರದ ಅಭಿವೃದ್ಧಿ ಕುರಿತು ಮಾತಾಡುತ್ತಿದ್ದಾರೆ. ಇನ್ನೂ ಚುನಾವಣೆ ಹತ್ತಿರ ಬಂದಂತೆ ಇನ್ನೂ ಹೆಚ್ಚಿನ ಜನರು ಬರುತ್ತಾರೆ. ಆದರೆ, ಕ್ಷೇತ್ರದ ಜನರು ಅಂಥವರಿಗೆ ಅಭಿವೃದ್ಧಿ ಕಾರ್ಯಗಳು ತೋರಿಸಿ. ಕ್ಷೇತ್ರದ ಜನರ ನಿರೀಕ್ಷೆ ಅನುಸಾರ ಅವರ ಬೇಡಿಕೆಗಳಿಗೆ ಸ್ಪಂದಿಸುತ್ತಿದ್ದು, ಚುನಾವಣೆಯಲ್ಲಿ ಜನರೆ ಸೂಕ್ತ ಆಶೀರ್ವಾದ ನೀಡುತ್ತಾರೆ ಎಂದರು.

ಗ್ರಾಮದಲ್ಲಿ ನಡೆಯುತ್ತಿರುವ ಕುಡಿಯುವ ನೀರಿನ ಯೋಜನೆಯ ಕಾಮಗಾರಿ ಗ್ರಾಮಸ್ಥರು ಸೂಕ್ತ ನಿಗವಹಿಸಿ ಕೆಲಸ ಮಾಡಿಸಿಕೊಳ್ಳಬೇಕು. ಗುಣಮಟ್ಟದ ಕೆಲಸ ಆಗುವಂತೆ ನೋಡಿಕೊಳ್ಳಿ. ಮನೆ ಮನೆಗೆ ಕುಡಿಯುವ ನೀರು ಪೂರೈಕೆ ಆಗುಂವತೆ ಅಗಬೇಕು ಎಂದರು. ಈ ಸಂದರ್ಭದಲ್ಲಿ ವಿಧಾನ ಪರಿಷತ್ ಸದಸ್ಯರಾದ ಡಾ। ಚಂದ್ರಶೇಖರ ಪಾಟೀಲ, ಭೀಮರಾವ ಪಾಟೀಲ ಸೇರಿದಂತೆ ಅಧಿಕಾರಿಗಳು ಹಾಗೂ ಗ್ರಾಮಸ್ಥರು ಇದ್ದರು.

Date: 13/01/2023 : www.kknewsonline.in

Check Also

ಎಲ್ಲ ಗ್ರಾಮ, ತಾಂಡಾಗಳಿಗೆ ಸ್ಮಶಾನಭೂಮಿ ಒದಗಿಸಿ: ಶಾಸಕ ಪ್ರಭು ಚವ್ಹಾಣ

*ಸ್ಮಶಾನ ಭೂಮಿ ಕೊರತೆಯ ಬಗ್ಗೆ ಅಧಿವೇಶನದಲ್ಲಿ ಧ್ವನಿ ಎತ್ತಿದ ಶಾಸಕರು* *ಎಲ್ಲ ಗ್ರಾಮ, ತಾಂಡಾಗಳಿಗೆ ಸ್ಮಶಾನ…