ಬೀದರ-ಕುತ್ತಿಗೆ ಕತ್ತರಿಸಿದ ಚೈನೀಸ್ ಮಾಂಜಾ

ಹುಮನಾಬಾದ: ಗಾಳಿಪಟ ಹಾರಿಸಲು ಬಳಸುವ ಚೈನೀಸ್ ಮಾಂಜಾ (ನೈಲನ್ ದಾರ) ವ್ಯಕ್ತಿಯೊಬ್ಬನ ಕುತ್ತಿಗೆ ಕತ್ತರಿಸಿದ ಘಟನೆ ಬುಧವಾರ ನಡೆದಿದೆ.
ಪಟ್ಟಣದ ಎಂ.ಪಿ ಬಡಾವಣೆ ನಿವಾಸಿ ಶೇಖ್ ಯಿಜಾಜ್ ಎಂಬ ವ್ಯಕ್ತಿ ಬೈಕ್ ಮೇಲೆ ಪಟ್ಟಣದ ಕಲ್ಲೂರ್ ಬೈಪಾಸ್ ರಸ್ತೆಯಲ್ಲಿ ತೆರಳುತ್ತಿರುವ ಮಧ್ಯದಲ್ಲಿ ಈ ಅವಘಡ ಸಂಭವಿಸಿದೆ. ರಸ್ತೆಯ ಮಧ್ಯದಲ್ಲಿ ಗಾಳಿಪಟದ ದಾರ ಇರುವುದು ಗಮನಕ್ಕೆ ಬರದ ಕಾರಣ ನೈಲನ್ ದಾರ ವ್ಯಕ್ತಿಯ ಕುತ್ತಿಗೆ ಕತ್ತರಿಸಿದೆ. ಕುಟುಂಬಸ್ಥರು ಕಲಬುರಗಿಯ ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಶಸ್ತçಚಿಕಿತ್ಸೆ ಮಾಡಿಸಿದ್ದಾರೆ.
ಹೂಗಾರ ಸಮಾಜ ಸಂಘಟನೆ: ಅಶೋಕ ಹೂಗಾರ ವಾರಕಾಲ ಸಂಚಾರ
ಬೀದರ: ಬೀದರ ಜಿಲ್ಲೆಯಲ್ಲಿ ಹೂಗಾರ ಸಮಾಜವನ್ನು ಸಂಘಟಿಸುವ ನಿಟ್ಟಿನಲ್ಲಿ ಅಖಿಲ ಕರ್ನಾಟಕ ಹೂಗಾರ ಸೇವಾ ಮಾಹಾ …

















