22.4 ತೊಲೆ ಬಂಗಾರ, 210 ಗ್ರಾಂ. ಬೆಳ್ಳಿ ಜಪ್ತಿ
ಹುಮನಾಬಾದ: ಕಳೆದ ಆರು ತಿಂಗಳಲ್ಲಿ ಆರು ಕಳ್ಳತನ ಪ್ರಕರಣದಲ್ಲಿ ಭಾಗಿಯಾಗಿದ್ದ ಆರೋಪಿಯೊಬ್ಬನನ್ನು ಹುಮ್ನಾಬಾದ್ ಪೊಲೀಸರು ಬಂಧಿಸಿದ್ದಾರೆ.
ಕಲಬುರಗಿ ಮೂಲದ ವಸಿಮ್ ಹಾಗೂ ಬಸವಕಲ್ಯಾಣ ಮೂಲದ ಶೇಖಬಾಬಾ ಸೇರಿ ವಿವಿಧ ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿದ್ದು, ವಸಿಮ್ ಹುಮಾಬಾದ ಹೊರವಲಯದಲ್ಲಿ ಅನುಮಾನಾಸ್ಪದವಾಗಿ ಓಡಾಡುತ್ತಿದ್ದ ಹಿನ್ನೆಲೆಯಲ್ಲಿ ಪೊಲೀಸರು ವಿಚಾರಣೆ ನಡೆಸಿದ್ದಾಗ ಕಳ್ಳತನ ಮೂಲ ಬಹಿರಂಗವಾಗಿದೆ.
ಇಬ್ಬರು ಆರೋಪಿಗಳು ಸೇರಿ ಒಟ್ಟು 33 ತೊಲೆ ಬಂಗಾರ ಹಾಗೂ 620 ಗ್ರಾಂ ಬೆಳ್ಳಿ ಕಳ್ಳತನ ಮಾಡಿದರು.ಈ ಪೈಕಿ ಆರೋಪಿ ವಸಿಮ್ ನಿಂದ 22.4 ತೊಲೆ ಬಂಗಾರ ಹಾಗೂ 210 ಗ್ರಾಂ ಬೆಳ್ಳಿ ವಶಪಡಿಸಿಕೊಂಡಿದ್ದು, ಇನ್ನೊಬ್ಬ ಆರೋಪಿಯನ್ನು ಬಂಧಿಸಲು ಪೊಲೀಸರು ಜಾಲ ಬೀಸಿದ್ದಾರೆ.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಟಿ.ಶ್ರೀಧರ್, ಡಿ.ವೈ.ಎಸ್.ಪಿ ಮಹೇಶ್ವರಪ್ಪ ಮಾರ್ಗದರ್ಶನ ದಂತೆ, ಸಿಪಿಐ ಜೆ. ನ್ಯಾಮೇಗೌಡ ಹಾಗೂ ಪಿಎಸ್ ಐ ರವಿ ತನಿಖೆ ಮುಂದುವರಿಸಿದ್ದಾರೆ.
ಹೂಗಾರ ಸಮಾಜ ಸಂಘಟನೆ: ಅಶೋಕ ಹೂಗಾರ ವಾರಕಾಲ ಸಂಚಾರ
ಬೀದರ: ಬೀದರ ಜಿಲ್ಲೆಯಲ್ಲಿ ಹೂಗಾರ ಸಮಾಜವನ್ನು ಸಂಘಟಿಸುವ ನಿಟ್ಟಿನಲ್ಲಿ ಅಖಿಲ ಕರ್ನಾಟಕ ಹೂಗಾರ ಸೇವಾ ಮಾಹಾ …

















