ಹುಮನಾಬಾದ – ಸಡಗರದ ವಿಜಯದಶಮಿ ಆಚರಣೆ
ರಾವಣನ ಪ್ರತಿಕೃತಿ ದಹನ
ಬೀದರ: ಹುಮನಾಬಾದ ತಾಲೂಕಿನ ಮಂಗಳವಾರ ವಿಜಯದಶಮಿ ಹಬ್ಬ ಸಡಗರ ಹಾಗೂ ಸಂಭ್ರಮದಿಂದ ಆಚರಣೆ ಮಾಡಲಾಯಿತು.
ಪಟ್ಟಣದ ಭವಾನಿ ಮಂದಿರಕ್ಕೆ ತೆರಳಿದ ಭಕ್ತರು ಸರತಿ ಸಾಲಿನಲ್ಲಿ ನಿಂತು ದೇವಿಯ ದರ್ಶನ ಪಡೆದರು. ಅಲ್ಲದೆ, ಕುಲದೇವ ವೀರಭದ್ರಶೇರ ದೇವಸ್ಥಾನದಲ್ಲಿ ಕೂಡ ಹಬ್ಬದ ರಂಗು ಹೆಚ್ಚಿತ್ತು. ವಿಜಯದಶಮಿ ನಿಮಿತ್ಯ ಮಂಗಳವಾರ ಸಂಜೆ ವೀರಭದ್ರೆÃಶ್ವರ ಪಲ್ಲಕ್ಕಿ ಉತ್ಸವ ಜರುಗಿತು. ಮಾಜಿ ಸಚಿವ ಹಾಗೂ ಶಾಸಕ ರಾಜಶೇಖರ ಪಾಟೀಲ ಪಲ್ಲಕಿ ಮೆರವಣಿಗೆಗೆ ಚಾಲನೆ ನೀಡಿದರು.
ಹಿರೇಮಠ ಸಂಸ್ಥಾನದ ರೇಣುಕ ಗಂಗಾಧರ ಶಿವಾಚಾರ್ಯರ ನೇತೃತ್ವದಲ್ಲಿ ಪಲ್ಲಕಿ ಮೆರವಣಿಗೆ ಮುಂದೆ ಸಾಗಿತ್ತು. ವೀರಭದ್ರಶ್ವರ ಪಲ್ಲಕಿ ಜತೆಗೆ ಭವಾನಿ ಮಾತಾ ಪಲ್ಲಕಿ, ನಂತರ ಬಾಮಾಜಿ ಮಂದರಿದ ರಾಮನ ಪಲ್ಲಕಿ ಜತೆಗೆ ರಾವಣನ ಬೃಹತ್ ಪ್ರತಿಕೃತಿಯೊಂದಿಗೆ ಭವ್ಯ ಮರೆವಣಿಗೆ ಸಾಗಿತ್ತು. ನಂತರ ಥೇರ ಮೈದಾನಕ್ಕೆ ಮೆರವಣಿಗೆ ಸಾಗಿ ರಂಗುರಂಗಿನ ಪಟ್ಟಾಕಿ ಸಿಡಿಸುವ ಮೂಲಕ ರಾವಣನ ಪ್ರತಿಕೃತಿ ದಹಿಸಲಾಯಿತು.
ಈ ಸಂದರ್ಭದಲ್ಲಿ ಎಂಎಲ್‌ಸಿ ಡಾ| ಚಂದ್ರ‍್ರಶೇಖರ ಪಾಟೀಲ, ಮಾಜಿ ಜಿಪಂ ಸದಸ್ಯ ವೀರಣ್ಣಾ ಪಾಟೀಲ, ಮಾಜಿ ಕೆಎಂಎಪ್ ಅಧ್ಯಕ್ಷ ರೇವಣಸಿದ್ದಪ್ಪ ಪಾಟೀಲ, ತಹಶೀಲ್ದಾರ್ ನಾಗಯ್ಯಸ್ವಾಮಿ ಹಿರೇಮಠ, ಮಲ್ಲಿಕಾರ್ಜುನ ಮಾಳಶೆಟ್ಟಿ, ಶರಣಪ್ಪ ರೇಚೆಟ್ಟಿ, ದತ್ತಕುಮಾರ ಚಿದ್ರಿ, ಬಸವರಾಜ ಆರ್ಯ ಸೇರಿದಂತೆ ಅನೇಕ ಮುಖಂಡರು ಭಾಗವಹಿಸಿದರು.
ಇಂದಿಗೂ ನಡೆಯದ ಜಾತ್ರಾ ಪೂರ್ವಭಾವಿ ಸಭೆ
ಇಂದಿಗೂ ನಡೆಯದ ಜಾತ್ರಾ ಪೂರ್ವಭಾವಿ ಸಭೆ ಸಭೆಯ ಅಧ್ಯಕ್ಷರ ನೇಮಕ ಕುರಿತು ಗೊಂದಲ ಸೃಷ್ಟಿ – ಅಧಿಕಾರಿಗಳು ಹೈರಾ…















