ಸಕಾಲ ಯೋಜನೆ ಅನುಷ್ಠಾನದಲ್ಲಿ ಗ್ರೇಡ್-2 ತಹಶೀಲ್ದಾರ ಮುಂದೆ.
ಸರ್ಕಾರದ ಯೋಜನೆಗಳು ಜನರು ಸೂಕ್ತವಾಗಿ ಬಳಸಿಕೊಳ್ಳಬೇಕು – ಜಯಶ್ರೀ ಜಿ.ಟಿ
ಹುಮನಾಬಾದ: ಸಕಾಲ ಯೋಜನೆ ಅನುಷ್ಠಾನ ಸೇರಿದಂತೆ ತಮ್ಮ ವ್ಯಾಪ್ತಿಗೆ ಬರುವ ವಿವಿಧ ಅರ್ಜಿಗಳನ್ನು ತ್ವರಿತಗತಿಯಲ್ಲಿ ವಿಲೇವಾರಿ ಮಾಡುತ್ತಿರುವ ಹುಮಾನಾಬಾದ ಗ್ರೇಡ್-2 ತಹಶೀಲ್ದಾರ ಜಯಶ್ರೀ ಜಿ.ಟಿ ಅವರ ಸೇವೆಗೆ ಇಲ್ಲಿನ ಜನರು ಮೆಚ್ಚಿಗೆ ವ್ಯಕ್ತಪಡಿಸುತ್ತಿದ್ದಾರೆ.
ವಿವಿಧ ಪ್ರಮಾಣ ಪತ್ರಗಳಿಗಾಗಿ ಸಲ್ಲಿಕೆಯಾಗುವ ಅರ್ಜಿಗಳನ್ನು ತ್ವರಿತಗತಿಯಲ್ಲಿ, ಸರ್ಕಾರದ ಕಾಲ ಕಾಲಮಿತಿಯೊಳಗೆ ವಿಲೇವಾರಿ ಮಾಡುವ ಕೆಲಸ ಮಾಡುತ್ತಿದ್ದು, ಜನರು ಕಚೇರಿಗೆ ಅಲೆಯುವುದನ್ನು ತಪ್ಪಿಸುತ್ತಿದ್ದಾರೆ. ಸಂಕಷ್ಟಗಳು ಹೇಳಿಕೊಂಡು, ವಿವಿಧ ಕೆಲಸ ಕಾರ್ಯಗಳಿಗೆ ವಿವಿಧ ಪ್ರಮಾಣಪತ್ರಗಳು ಬೇಕೆಂದು ಬರುವ ಜನರಿಗೆ ಸ್ಪಂದಿಸುವ ಕೆಲಸ ಮಾಡುತ್ತಿದ್ದಾರೆ. ಇನ್ನೂ ಕೆಲವರ ಅರ್ಜಿಗಳು ತಿರಸ್ಕೃತಗೊಂಡಲ್ಲಿ ಅಧಿಕಾರಿಗಳ ಜತೆಗೆ ಜನರು ವಾಗ್ವಾದಗಳು ನಡೆಸುವುದು ಇಲ್ಲಿ ಸಾಮಾನ್ಯವಾಗಿದೆ. ಅನೇಕರು ಗ್ರೇಡ್-2 ತಹಶೀಲ್ದಾರ ಅವರ ಕಾರ್ಯಕ್ಕೆ ಗೌರವಿಸಿ ಸನ್ಮಾನಿದ ಉದಾಹರಣೆಗಳು ಇವೆ.
ಮೇ ತಿಂಗಳ 27ರ ವರಗೆ ಹುಮನಾಬಾದ ತಾಲೂಕಿನಲ್ಲಿ ಸಕಾಲ ಯೋಜನೆ ಅಡಿಯಲ್ಲಿ ಒಟ್ಟಾರೆ 7424 ಅರ್ಜಿಗಳು ಸಲ್ಲಿಕೆಯಾಗಿದ್ದು, ಹಳೆ ಬಾಕಿ ಹಿಡಿದು ಒಟ್ಟಾರೆ 7670 ಅರ್ಜಿಗಳ ವಿಲೇವಾರಿ ಮಾಡಲಾಗಿದೆ. ಕೆವಲ 25 ಅರ್ಜಿಗಳು ಬಾಕಿ ಉಳಿದುಕೊಂಡಿವೆ. ಇಲಾಖಾ ವಾರು ನೋಡುವುದಾದರೆ, ಕಂದಾಯ ಇಲಾಖೆಗೆ ಒಟ್ಟಾರೆ, 3492 ಅರ್ಜಿಗಳು ಸಲ್ಲಿಕೆಯಾಗಿದ್ದು, 3931 ಅರ್ಜಿಗಳ ವಿಲೇವಾರಿಯಾಗಿದ್ದು, ಒಂದು ಅರ್ಜಿಮಾತ್ರ ಬಾಕಿ ಉಳಿದುಕೊಂಡಿದೆ. ಅದೇರೀತಿ ಆಹಾರ ಇಲಾಖೆಗೆ 1030 ಅರ್ಜಿಗಳು ಸಲ್ಲಿಕೆಯಾಗಿದ್ದು, 1029 ಅರ್ಜಿಗಳು ವಿಲೇಮಾರಿ ಮಾಡಲಾಗಿದೆ. ಗೃಹ ಇಲಾಖೆಗೆ 144 ಅರ್ಜಿಗಳು ಸಲ್ಲಿಕೆಯಾಗಿದ್ದು, 185 ಅರ್ಜಿಗಳ ವಿಲೇವಾರಿ ಮಾಡಲಾಗಿದೆ. ನೊಂದಣೆ ಮತ್ತು ಸ್ಟಾö್ಯಂಪ್ ಇಲಾಖೆಗೆ 1310 ಅರ್ಜಿಗಳು ಸಲ್ಲಿಕೆಯಾಗಿದ್ದು, 1323 ಅರ್ಜಿಗಳ ವಿಲೇಮಾರಿ ಮಾಡಲಾಗಿದೆ. ಪುರಸಭೆಗೆ 195 ಅರ್ಜಿಗಳು ಸಲ್ಲಿಕೆಯಾಗಿದ್ದು, ಹಳೆ ಅರ್ಜಿಗಳು ಸೇರಿ 233 ಅರ್ಜಿಗಳ ವಿಲೇವಾರಿ ಮಾಡಿದ್ದು, ಇನ್ನೂ 14 ಅರ್ಜಿಗಳು ಬಾಕಿ ಎಂದು ಸಕಾಲ ವೆಬ್ಸೆöÊಟ್‌ನಲ್ಲಿ ಮಾಹಿತಿ ಪ್ರದರ್ಶಿಸುತ್ತಿದೆ.
ಯೋಜನೆ ಉದ್ದೇಶ: ನಿಗದಿತ ಕಾಲಮಿತಿಯೊಳಗೆ ಸಾರ್ವಜನಿಕರ ಅಹವಾಲು ಅರ್ಜಿ ವಿಲೇವಾರಿ ಮಾಡುವ ನಿಟ್ಟಿನಲ್ಲಿ ಸರ್ಕಾರ ಸಕಾಲ ಯೋಜನೆಯನ್ನು ಜಾರಿಗೆ ತಂದಿದೆ. ಇದರಿಂದ ಜನರು ಸರ್ಕಾರಿ ಕಚೇರಿಗಳಿಗೆ ಪದೇ ಪದೇ ಅಲೆಯುವುದು ತಪ್ಪುತ್ತದೆ. ಜತೆಗೆ ಆಡಳಿತವೂ ಪಾರದರ್ಶಕವಾಗಿ ನಡೆಯಲು ಈ ಯೋಜನೆಯು ಸಹಕಾರಿಯಾಗಿದೆ. ಪ್ರತಿ ತಿಂಗಳು ಜಿಲ್ಲಾವಾರು, ರಾಜ್ಯವಾರು ರ‍್ಯಾಂಕಿAಗ್ ಪಟ್ಟಿ ಪ್ರಕಟಿಸುತ್ತಿದ್ದು, ಆಯಾ ಜಿಲ್ಲೆಗಳ, ತಾಲೂಕುಗಳ ಸಾಧನೆಗೆ ಅನುಗುಣವಾಗಿ ಸ್ಥಾನ ನೀಡಲಾಗುತ್ತದೆ. ಇದಕ್ಕೆ ಕಾಲ ಮಿತಿಯಲ್ಲಿ ಕಡತ ವಿಲೇವಾರಿ ಪ್ರಮುಖ ಮಾನದಂಡವಾಗಿದೆ. ಅಲ್ಲದೆ, ಭ್ರಷ್ಟಾಚಾರ ಮುಕ್ತ ಆಡಳಿತಕ್ಕೆ ಈ ಯೋಜನೆ ಬುನಾದಿ ಹಾಕಿದ್ದು, ಜನರು ಕಾನೂನು ತಿಳಿದುಕೊಂಡು ಸೂಕ್ತವಾಗಿ ಬಳಸಿಕೊಳ್ಳಬೇಕಾಗಿದೆ.

ಕಚೇರಿಗೆ ನಿಯಮ ಅನುಸಾರ ಬರುವ ಅರ್ಜಿಗಳನ್ನು ಸೂಕ್ತ ದಾಖಲೆಗಳ ಪರಿಶೀಲನೆ ನಡೆಸಿ ಅರ್ಜಿಗಳ ವಿಲೇವಾರಿ ಮಾಡಲಾಗುತ್ತದೆ. ಸೂಕ್ತ ದಾಖಲೆಗಳು ಇಲ್ಲದ ಅರ್ಜಿಗಳನ್ನು ತಿರಸ್ಕರಿಸಿ ಅರ್ಜಿದಾರರಿಗೆ ಮಾಹಿತಿ ನೀಡಲಾಗುತ್ತೆ. ಈ ಯೋಜನೆ ಆನ್‌ಲೈನ್ ಮೂಲಕ ಅರ್ಜಿಸುವ ಜನರಿಗೆ ನಿಗದಿತ ಅವಧಿಯಲ್ಲಿ ದಾಖಲೆಗಳು ನೀಡಬೇಕಾದ ಕೆಲಸ ನಮ್ಮದಾಗಿದೆ. ಸರ್ಕಾರದ ಮಾರ್ಗಸೂಚಿಗಳ ಅನುಸಾರ ಪ್ರಾಮಾಣಿಕ ಕೆಲಸ ಮಾಡಲಾಗುತ್ತಿದೆ. ಯಾವುದೇ ಮಧ್ಯವರ್ತಿಗಳಿಗೆ ಅಥವಾ ಭ್ರಷ್ಟಾಚಾರಕ್ಕೆ ಅವಕಾಶ ನೀಡದೆ ಜನರ ವಿವಿಧ ಅರ್ಜಿಗಳಿಗೆ ಸ್ಪಂದಿಸುತ್ತಿದ್ದು, ಸರ್ಕಾರದ ಈ ಯೋಜನೆಗಳು ಜನರು ಸೂಕ್ತವಾಗಿ ತಿಳಿದುಕೊಂಡು ಬಳಸಿಕೊಳ್ಳಬೇಕು ಎಂದು ಗ್ರೇಡ್-2 ತಹಶೀಲ್ದಾರ ಜಯಶ್ರೀ ತಿಳಿಸಿದ್ದಾರೆ.

Date: 27-05-2022 : 01:00pm : www.kknewsonline.in
ಹೂಗಾರ ಸಮಾಜ ಸಂಘಟನೆ: ಅಶೋಕ ಹೂಗಾರ ವಾರಕಾಲ ಸಂಚಾರ
ಬೀದರ: ಬೀದರ ಜಿಲ್ಲೆಯಲ್ಲಿ ಹೂಗಾರ ಸಮಾಜವನ್ನು ಸಂಘಟಿಸುವ ನಿಟ್ಟಿನಲ್ಲಿ ಅಖಿಲ ಕರ್ನಾಟಕ ಹೂಗಾರ ಸೇವಾ ಮಾಹಾ …
















