Home ನಿಮ್ಮ ಜಿಲ್ಲೆ ಧಾರವಾಡ ಸಕಾಲ ಅರ್ಜಿ ತ್ವರಿತ ವಿಲೇವಾರಿ ಕಲಘಟಗಿ ತಾಲೂಕು ರಾಜ್ಯಕ್ಕೆ ಪ್ರಥಮ

ಸಕಾಲ ಅರ್ಜಿ ತ್ವರಿತ ವಿಲೇವಾರಿ ಕಲಘಟಗಿ ತಾಲೂಕು ರಾಜ್ಯಕ್ಕೆ ಪ್ರಥಮ

ಧಾರವಾಡ: ಕಳೆದ ಅಕ್ಟೋಬರ್ ತಿಂಗಳಿನಲ್ಲಿ ಕಲಘಟಗಿ ತಾಲ್ಲೂಕಿನ ವಿವಿಧ ಇಲಾಖೆಗಳು ಸಕಾಲ ಯೋಜನೆಯಡಿ 15,161 ಅರ್ಜಿಗಳನ್ನು ವಿಲೇವಾರಿ ಮಾಡುವ ಮೂಲಕ ರಾಜ್ಯದ ಎಲ್ಲಾ ತಾಲ್ಲೂಕುಗಳ ಶ್ರೇಯಾಂಕ  ಪಟ್ಟಿಯಲ್ಲಿ ಕಲಘಟಗಿ ತಾಲೂಕ ಪ್ರಥಮ ಸ್ಥಾನ ಪಡೆದುಕೊಂಡಿದೆ.

ಕರ್ನಾಟಕ ಸಕಾಲ ಸೇವೆಗಳ ಅಧಿನಿಯಮದ ಯಶಸ್ವಿ ಅನುಷ್ಠಾನಗೊಳಿಸಿರುವದನ್ನು ಗುರುತಿಸಿ ಇತ್ತೀಚೆಗೆ ಬೆಂಗಳೂರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಪ್ರಾಥಮಿಕ, ಪ್ರೌಢ ಶಿಕ್ಷಣ,ಸಕಾಲ ಹಾಗೂ ಕಾರ್ಮಿಕ ಸಚಿವರಾದ ಎಸ್. ಸುರೇಶಕುಮಾರ್ ಅವರು, ಕಲಘಟಗಿ ತಹಸೀಲ್ದಾರ ಅಶೋಕ ಶಿಗ್ಗಾಂವಿ ಅವರಿಗೆ ಪ್ರಶಂಸಾ ಪತ್ರ ನೀಡಿ ಗೌರವಿಸಿದರು. ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯ ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ ಹಾಗೂ ಸಕಾಲ ಮಿಷನ್ ನಿರ್ದೇಶಕ ರಾಜೀವ್ ಚಾವ್ಲಾ ಉಪಸ್ಥಿತರಿದ್ದರು.ಕಲಘಟಗಿ ತಾಲ್ಲೂಕಿನ ವಿವಿಧ ಇಲಾಖೆಗಳು ತೋರಿರುವ ಈ ಕಾರ್ಯಕ್ಷಮತೆಗೆ ಜಿಲ್ಲಾಧಿಕಾರಿ ದೀಪಾ ಚೋಳನ್ ಮೆಚ್ಚುಗೆ ಸೂಚಿಸಿದ್ದಾರೆ.

 

 

Date: 18-12-2019 Time:6:45PM